Sunday, January 19, 2025
ದಕ್ಷಿಣ ಕನ್ನಡಬಂಟ್ವಾಳಶಿಕ್ಷಣಸುದ್ದಿ

ಮಕ್ಕಳ ಕಲಾ ಲೋಕ ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ ವತಿಯಿಂದ ಸಾಹಿತ್ಯ ರಚನಾ ಪ್ರೇರಣಾ ಕಮ್ಮಟ – ಕಹಳೆ ನ್ಯೂಸ್

ಬಂಟ್ವಾಳ: ಮಕ್ಕಳ ಕಲಾ ಲೋಕ ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ ಇವರ ವತಿಯಿಂದ ದ.ಕ.ಜಿ.ಪ ಹಿರಿಯ ಪ್ರಾಥಮಿಕ ಶಾಲೆ ಶಂಭೂರು ಇಲ್ಲಿ ವಿದ್ಯಾರ್ಥಿಗಳಿಗಾಗಿ ಒಂದು ದಿನದ ಸಾಹಿತ್ಯ ರಚನಾ ಪ್ರೇರಣಾ ಕಮ್ಮಟವನ್ನು ಸಂಘಟಿಸಲಾಯಿತು.

ಶಾಲಾ ಎಸ್. ಡಿ .ಎಂ.ಸಿ ಅಧ್ಯಕ್ಷ ನಾಗರಾಜ್ ಕಮ್ಮಟ ಉದ್ಘಾಟಿಸಿ ಶುಭ ಹಾರೈಸಿದರು. ಭಾಷಣ ಕಲೆಯ ಬಗ್ಗೆ ಸಂಪನ್ಮೂಲ ವ್ಯಕ್ತಿಯಾಗಿ ಮಕ್ಕಳ ಕಲಾಲೋಕದ ಅಧ್ಯಕ್ಷರಾದ ರಮೇಶ ಎಂ. ಬಾಯಾರು ಮಾಹಿತಿ ನೀಡಿದರು. ಮಕ್ಕಳ ಕಲಾಲೋಕದ ಗೌರವ ಸಲಹೆಗಾರರಾದ ಭಾಸ್ಕರ ಅಡ್ವಳರು ಕವನ, ಕಥೆ, ಚುಟುಕು ರಚನೆ ಬಗ್ಗೆ ತರಬೇತಿ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು

ಎಸ್.ಡಿ.ಎಂ.ಸಿ. ಸದಸ್ಯರಾದ ವಿಶಾಲಾಕ್ಷಿ, ಮುಖ್ಯ ಶಿಕ್ಷಕ ಜಯರಾಮ ಪಡ್ರೆ, ಶಿಕ್ಷಕಿ ದಯಾವತಿ, ಇಂದಿರಾ, ಗಾಯತ್ರಿ, ಮೀನಾಕ್ಷಿ ಮತ್ತು ಉಷಾ ಉಪಸ್ಥಿತರಿದ್ದರು.