ವಿಜಯಪುರದಲ್ಲಿ ಕೊಳವೆ ಬಾವಿಗೆ ಬಿದ್ದ 2 ವರ್ಷದ ಮಗು ಸಾತ್ವಿಕ್ ; ಮಗುವಿನ ರಕ್ಷಣೆಗಾಗಿ ನಡೆಯುತ್ತಿದೆ ಕಾರ್ಯಾಚರಣೆ..!! – ಕಹಳೆ ನ್ಯೂಸ್
ವಿಜಯಪುರ: ಆಟವಾಡಲು ಹೋಗಿದ್ದ 2 ವರ್ಷದ ಮಗುವೊಂದು ಕೊಳವೆ ಬಾವಿಗೆ ಬಿದ್ದಿರುವ ಘಟನೆ ವಿಜಯಪುರದಲ್ಲಿ ನಡೆದಿದೆ.
ಸಾತ್ವಿಕ್ ಮುಜಗೊಂಡ (2) ಕೊಳವೆ ಬಾವಿಗೆ ಬಿದ್ದ ಮಗು. ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಲಚ್ಚಾಣ ಗ್ರಾಮದಲ್ಲಿ ಘಟನೆ ನಡೆದಿದೆ. ಮಗು ಆಟವಾಡಲು ಹೋಗಿದ್ದ ವೇಳೆ ಹೀಗಾಗಿದೆ ಎನ್ನಲಾಗಿದೆ.
ಮಗುವಿನ ತಂದೆ ಸತೀಶ ಮುಜಗೊಂಡ, ತಾಯಿ ಪೂಜಾ ಮುಜಗೊಂಡ. ಸತೀಶ ಅವರ 4 ಎಕರೆ ಜಮೀನಿನಲ್ಲಿ ಬೋರ್‌ವೆಲ್ ಕೊರೆಯಲಾಗಿತ್ತು. ಆದರೆ ಕೊಳವೆ ಬಾವಿ ಮುಚ್ಚಿರುವ ಕೆಲಸ ಮಾಡಿರಲಿಲ್ಲ. ಮಗು ಆಟವಾಡಲು ಹೋಗಿದ್ದಾಗ ಕೊಳವೆ ಬಾವಿಗೆ ಬಿದ್ದಿದೆ.
ಕಬ್ಬು, ಲಿಂಬೆಗೆ ನೀರಿಲ್ಲ ಎಂದು ಬೋರ್ ಹೊಡೆಸಲಾಗಿತ್ತು. 400 ಅಡಿ ವರೆಗೂ ಬಾವಿ ಕೊರೆಸಲಾಗಿದೆ ಎನ್ನಲಾಗಿದೆ. ಮಗುವಿನ ರಕ್ಷಣೆಗಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ.