Sunday, January 19, 2025
ಕ್ರೀಡೆರಾಜ್ಯಸುದ್ದಿ

ಆರ್‌ಸಿಬಿ ಮಹಿಳಾ ತಂಡದ ಆಟಗಾರ್ತಿ ಶ್ರೇಯಾಂಕಗೆ ತವರೂರಲ್ಲಿ ಅದ್ದೂರಿ ಸ್ವಾಗತ – ಕಹಳೆ ನ್ಯೂಸ್

ಕಲಬುರಗಿ : ಮಹಿಳಾ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಪ್ರಶಸ್ತಿ ವಿಜೇತ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡದ ಆಟಗಾರ್ತಿ ಶ್ರೇಯಾಂಕ ಪಾಟೀಲ ಅವರನ್ನು ಸ್ವಗ್ರಾಮ ಕೋಳಕೂರಿನಲ್ಲಿ ಗ್ರಾಮಸ್ಥರು ಅದ್ದೂರಿಯಾಗಿ ಸ್ವಾಗತಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಶ್ರೇಯಾಂಕ ಮೂಲತಃ ಕಲಬುರಗಿ ಜಿಲ್ಲೆಯ ಕೋಳಕೂರ ಗ್ರಾಮದವರು. ತವರಿಗೆ ಬಂದ ಅವರನ್ನು ಗ್ರಾಮದ ಹೊರವಲಯದಿಂದ ಸಿದ್ಧಬಸವೇಶ್ವರ ದೇವಸ್ಥಾನದವರೆಗೆ ಭವ್ಯ ಮೆರವಣಿಗೆ ಮೂಲಕ ಕರೆತರಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಮೆರವಣಿಗೆ ಬಳಿಕ ಶ್ರೇಯಾಂಕ ಪಾಟೀಲ ಸಿದ್ಧಬಸವೇಶ್ವರರ ದರ್ಶನ ಪಡೆದರು. ಮೆರವಣಿಗೆಯಲ್ಲಿ ಕೋಳಕೂರ ಗ್ರಾಮದ ಜನ ಪಾಲ್ಗೊಂಡಿದ್ದರು.