ತೈವಾನ್ ನಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪಕ್ಕೆ 9ಮಂದಿ ಬಲಿ: ಇಬ್ಬರು ಭಾರತೀಯರು ನಾಪತ್ತೆ – ಕಹಳೆ ನ್ಯೂಸ್
ತೈವಾನ್‌ನಲ್ಲಿ 7.4 ತೀವ್ರತೆಯ ಭೂಕಂಪ ಸಂಭವಿಸಿದ್ದು, ಈವರೆಗೆ ಸುಮಾರು 9 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ, ಇಬ್ಬರು ಭಾರತೀಯರು ಸೇರಿದಂತೆ 50ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ.
ಇನ್ನು ನಾಪತ್ತೆಯಾದ ಭಾರತೀಯರಲ್ಲಿ ಓರ್ವ ಮಹಿಳೆ ಎಂಬ ಮಾಹಿತಿ ತಿಳಿದು ಬಂದಿದೆ. ಇಬ್ಬರೂ ಭಾರತೀಯರು ಭೂಕಂಪ ನಡೆದ ಸ್ಥಳದ ಸಮೀಪವಿರುವ ತಾರೊಕೊ ಗಾರ್ಜ್ನಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದಾರೆ.
ಪೂರ್ವ ತೈವಾನ್‌ನಲ್ಲಿ 25 ವರ್ಷಗಳಲ್ಲಿ ಅತ್ಯಂತ ಪ್ರಬಲವಾದ 7.4 ತೀವ್ರತೆಯ ಭೂಕಂಪ ಸಂಭವಿಸಿದೆ. ಒಂಬತ್ತು ಜನರು ಸಾವನ್ನಪ್ಪಿದ್ದಾರೆ ಮತ್ತು ನೂರಾರು ಜನರು ಗಾಯಗೊಂಡಿದ್ದಾರೆ. ಎಪಿ ವರದಿಯ ಪ್ರಕಾರ ಭೂಕಂಪದ ಬಳಿಕ ನಾಪತ್ತೆಯಾಗಿರುವ ಭಾರತೀಯರಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ.
ತೈವಾನ್‌ನಲ್ಲಿ ಸಂಭವಿಸಿದ ಈ ಭೂಕಂಪವು “25 ವರ್ಷಗಳಲ್ಲಿ ಅತ್ಯಂತ ಪ್ರಬಲವಾದ ಭೂಕಂಪ” ಎಂದು ತೈಪೆಯ ಭೂಕಂಪನದ ಅಧಿಕಾರಿ ತಿಳಿಸಿದ್ದಾರೆ. ಭೂಕಂಪದ ಬಳಿಕ ತೈವಾನ್, ದಕ್ಷಿಣ ಜಪಾನ್ ಮತ್ತು ಫಿಲಿಪೈನ್ಸ್ನಾದ್ಯಂತ ಸುನಾಮಿ ಎಚ್ಚರಿಕೆ ನೀಡಲಾಗಿದೆ..
ಇನ್ನು ಇಂಡಿಯಾ ತೈಪೆ ಅಸೋಸಿಯೇಷನ್ ತೈವಾನ್‌ನಲ್ಲಿರುವ ಭಾರತೀಯರಿಗಾಗಿ ಸಹಾಯವಾಣಿಯನ್ನು ಆರಂಭಿಸಿದೆ. ತೈವಾನ್‌ನಲ್ಲಿರುವ ಭಾರತೀಯರು ಸಹಾಯಕ್ಕಾಗಿ 0905247906 ಗೆ ಕರೆ ಮಾಡಬಹುದು ಅಥವಾ ad.ita@mea.gov.in ಗೆ ಇಮೇಲ್ ಕಳುಹಿಸಬಹುದು.