ದೆಹಲಿ: ವಿಶ್ವಶಾಂತಿ, ಅಂತರರಾಷ್ಟ್ರೀಯ ಸಹಕಾರ ಮತ್ತು ಜಾಗತಿಕ ಆರ್ಥಿಕ ಬೆಳವಣಿಗೆಗೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಪ್ರಧಾನಿ ನರೇಂದ್ರ ಮೋದಿ ಅವರನ್ನು 2018 ರ ಸೋಲ್ ಶಾಂತಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
‘ಮೋದಿನೊಮಿಕ್ಸ್’ ಮೂಲಕ ಸಾಮಾಜಿಕ ಹಾಗೂ ಶ್ರೀಮಂತ ಮತ್ತು ಬಡವರ ನಡುವಣ ತಾರತಮ್ಯವನ್ನು ಹೋಗಲಾಡಿಸಲು ನರೇಂದ್ರ ಮೋದಿ ಅವರು ಶ್ರಮಿಸಿದ್ದನ್ನು ದಕ್ಷಿಣ ಕೋರಿಯಾದ ಆಯ್ಕೆ ಸಮಿತಿ ಪರಿಗಣಿಸಿದ್ದು ಮಾತ್ರವಲ್ಲದೆ ಭ್ರಷ್ಟಾಚಾರ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳು ಮತ್ತು ನೋಟು ರದ್ದತಿ ಮೂಲಕ ಶುದ್ಧ ಆಡಳಿತ ನೀಡಲು ಮೋದಿ ಅವರು ಕೈಗೊಂಡ ಪ್ರಯತ್ನಗಳನ್ನು ಸಮಿತಿ ಶ್ಲಾಘಿಸಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.