Saturday, September 21, 2024
ಸುದ್ದಿ

19 ಗಂಟೆಗಳ ನಿರಂತರ ಕಾರ್ಯಾಚರಣೆ ಯಶಸ್ವಿ : ಕೊಳವೆಬಾವಿಯಿಂದ ಸಾವು ಗೆದ್ದು ಬಂದ ಪುಟಾಣಿ ಸಾತ್ವಿಕ್ : ಆಸ್ಪತ್ರೆಯಲ್ಲಿ ಚಿಕಿತ್ಸೆ – ಕಹಳೆ ನ್ಯೂಸ್

ವಿಜಯಪುರ: ವಿಜಯಪುರದಲ್ಲಿ ಬೋರ್‌ವೆಲ್‌ಗೆ ಬಿದ್ದ ಮಗು ರಕ್ಷಣೆ ಸತತ 19 ಗಂಟೆಗಳ ಕಾಲ ನಡೆದ ಕಾರ್ಯಾಚರಣೆ ಯಶಸ್ವಿಯಾಗಿದೆ.

ಕೊಳೆವೆ ಬಾವಿಯಿಂದ ಮಗುವನ್ನು ಸಿಬ್ಬಂದಿ ಸುರಕ್ಷಿತವಾಗಿ ಹೊರಗೆ ಕರೆತಂದಿದ್ದಾರೆ. ಎರಡು ವರ್ಷದ ಸಾತ್ವಿಕ್ ಮುಜಗೊಂಡ ಎಂಬ ಮಗು, ತೆರೆದ ಕೊಳವೆ ಬಾವಿಗೆ ಬಿದ್ದಿತ್ತು. ಸತೀಶ್ ಮತ್ತು ಪೂಜಾ ದಂಪತಿಯ ಮಗನಾಗಿರುವ ಸಾತ್ವಿಕ್ ಏಪ್ರಿಲ್ 3ರಂದು ಸಂಜೆ 6 ಗಂಟೆ ಸುಮಾರಿಗೆ ಆಟವಾಡುತ್ತ ಲಚಯ್ಯನ ಹಳ್ಳಿಯಲ್ಲಿ 16 ಅಡಿ ಆಳದ ಬೋರ್‌ವೆಲ್‌ಗೆ ಬಿದ್ದಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಸತತ 19 ಗಂಟೆ ಕಾರ್ಯಾಚರಣೆಯ ನಂತರ ಮಗುವನ್ನು ರಕ್ಷಣೆ ಮಾಡಲಾಗಿದೆ. ಕಳೆದ 19 ಗಂಟೆಗಳಿAದ ಮಗು ಅನ್ನ ನೀರು ಇಲ್ಲದೆ 16 ಅಡಿ ಆಳದಲ್ಲಿ ನರಳಾಡುತ್ತಿತ್ತು. ಮಗುವಿನ ಚಲನವಲನಗಳನ್ನು ಕ್ಯಾಮರಾದಲ್ಲಿ ರಕ್ಷಣಾ ಕಾರ್ಯಾಚರಣೆಯ ತಂಡ ಗಮನಿಸುತ್ತಿತ್ತು. ಮಗು ಕಾಲು ಅಲ್ಲಾಡಿಸುತ್ತಿರುವುದು ಕ್ಯಾಮರಾದಲ್ಲಿ ಸೆರೆಯಾಗಿತ್ತು. ಬಾಲಕನನ್ನು ರಕ್ಷಿಸಲು ಅಧಿಕಾರಿಗಳು ಅಗೆಯುವ ಯಂತ್ರವನ್ನು ಬಳಸಿ ಬೋರ್‌ವೆಲ್‌ಗೆ ಸಮಾನಾಂತರವಾಗಿ ಸುಮಾರು 21 ಅಡಿ ಆಳದ ಹೊಂಡವನ್ನು ತೆಗೆದಿದ್ದಾರೆ. ಮಗುವನ್ನು ಸುರಕ್ಷಿತವಾಗಿ ಹೊರ ತರಲಾಯಿತು.

ಜಾಹೀರಾತು

ಈಗ ಆಂಬುಲೆನ್ಸ್‌ನಲ್ಲಿ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. 20 ಗಂಟೆಗಳಿAದ ಮಗು ಏನನ್ನೂ ಸೇವಿಸದೆ ನಿತ್ರಾಣಗೊಂಡಿದ್ದು, ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆಯನ್ನು ನೀಡಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ.