Sunday, January 19, 2025
ಉಡುಪಿಬೈಂದೂರುರಾಜಕೀಯಸುದ್ದಿ

ಅಂಪಾರು ಮೂಡುಬಗೆ ಗ್ರಾಮದಲ್ಲಿರುವ ನಮ್ಮೂರ ಸಂಭ್ರಮ ಮೈದಾನದಲ್ಲಿ ನಡೆದ “ಸಿದ್ದಾಪುರ ಹಾಗೂ ಕಾವ್ರಾಡಿ ಮಹಾಶಕ್ತಿ ಕೇಂದ್ರದ ಬೂತ್ ಮಟ್ಟದ ಕಾರ್ಯಕರ್ತರ” ಸಮಾವೇಶ – ಕಹಳೆ ನ್ಯೂಸ್

ಬೈಂದೂರು : ಲೋಕಸಭಾ ಚುನಾವಣೆ ನಿಮಿತ್ತ ಬೈಂದೂರು ವಿಧಾನಸಭಾ ಕ್ಷೇತ್ರದ ಸಿದ್ದಾಪುರ ಹಾಗೂ ಕಾವ್ರಾಡಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಅಂಪಾರು ಮೂಡುಬಗೆ ಗ್ರಾಮದಲ್ಲಿರುವ ನಮ್ಮೂರ ಸಂಭ್ರಮ ಮೈದಾನದಲ್ಲಿ ಭಾರತೀಯ ಜನತಾ ಪಕ್ಷ ಬೈಂದೂರು ಮಂಡಲದ ವತಿಯಿಂದ “ಸಿದ್ದಾಪುರ ಹಾಗೂ ಕಾವ್ರಾಡಿ ಮಹಾಶಕ್ತಿ ಕೇಂದ್ರದ ಬೂತ್ ಮಟ್ಟದ ಕಾರ್ಯಕರ್ತರ” ಸಮಾವೇಶ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಕನಸು ಸ್ವಾತಂತ್ರ‍್ಯದ ಶತಮಾನೋತ್ಸವ ಸಂದರ್ಭದಲ್ಲಿ ದೇಶವು “ವಿಕಸಿತ ಭಾರತ” ವಾಗಬೇಕು ಎಂಬುದು ಜೊತೆಗೆ ಮೂರನೇ ಅವಧಿಯಲ್ಲಿ ವಿಶ್ವದ ಮೂರನೇ ಬಲಿಷ್ಠ ಆರ್ಥಿಕ ರಾಷ್ಟ್ರವಾಗಬೇಕು ಎಂಬುದಾಗಿದ್ದು, ಕೇಂದ್ರ ಸರ್ಕಾರದ ಸಾಧನೆಯ ಪಟ್ಟಿಯನ್ನು ಹಾಗೂ ನನ್ನ ಅವಧಿಯಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರಕ್ಕೆ ಜಾರಿಗೆ ತಂದಿರುವ ಅಭಿವೃದ್ಧಿ ಯೋಜನೆಗಳ ಬಗ್ಗೆ ಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಜೆಗಳ ಮುಂದೆ ತೆರೆದಿಟ್ಟು ಕಮಲದ ಗುರುತಿಗೆ ಹೆಚ್ಚಿನ ಮತ ಕೊಡಿಸುವಂತೆ ಕರೆ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಮಯದಲ್ಲಿ ಶಾಸಕ ಗುರುರಾಜ್ ಗಂಟಿಹೊಳೆ, ಮಂಡಲಾಧ್ಯಕ್ಷ ಶ್ರೀ ದೀಪಕ್ ಶೆಟ್ಟಿ ಅವರು, ಪ್ರಮುಖ ರಾದ ಶ್ರೀ ಸದಾನಂದ ಅವರು, ಶ್ರೀಮತಿ ಯಶಸ್ವಿನಿ ಅವರು, ಶ್ರೀ ಅಶೋಕ್ ಮೂರ್ತಿ ಅವರು, ಶ್ರೀ ಉಮೇಶ್ ಶೆಟ್ಟಿ ಅವರು, ಶ್ರೀ ಶಿವರಾಜ್ ಅವರು, ಶ್ರೀ ಗಜೇಂದ್ರ ಅವರು ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.