Sunday, January 19, 2025
ಸುದ್ದಿ

ಪುತ್ತೂರು : ಯುವತಿಯೊಂದಿಗೆ ಪ್ರೀತಿ ವಿಚಾರ : ಯುವಕನಿಗೆ ಹಲ್ಲೆ, ಜೀವಬೆದರಿಕೆ : ಪ್ರಕರಣ ದಾಖಲು – ಕಹಳೆ ನ್ಯೂಸ್

ಪುತ್ತೂರು : ಯುವತಿಯೋರ್ವಳನ್ನು ಪ್ರೀತಿಸುತ್ತಿದ್ದ ವಿಚಾರದಲ್ಲಿ ತಂಡವೊAದು ಯುವಕನಿಗೆ ಹಲ್ಲೆ ನಡೆಸಿ, ಜೀವ ಬೆದರಿಕೆಯೊಡ್ಡಿರುವ ಘಟನೆ ಕುರಿಯ ಮಲಾರ್ ಎಂಬಲ್ಲಿ ನಡೆದ ಬಗ್ಗೆ ವರದಿಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಘಟನೆ ಕುರಿತು ಅಶ್ವಿತ್ ಕುಮಾರ್ ಎಂಬವರು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಕುರಿಯ ಗ್ರಾಮದ ಮಲಾರ್ ಎಂಬಲ್ಲಿ ಕಟ್ಟಿಸಿದ ಹೊಸ ಮನೆಗೆ ಏ.3 ರಂದು ನೀರು ಹಾಕುತ್ತಿದ್ದ ಸಮಯ ಪರಿಚಯದ ಸಚಿನ್ ಮುಕ್ವೆ ಎಂಬಾತ ಕರೆ ಮಾಡಿ, ನಿನ್ನಲ್ಲಿ ಮಾತನಾಡುವುದು ಇದೆ ಎಂದು ತಿಳಿಸಿದಾಗ, ಮಲಾರ್‌ನಲ್ಲಿದ್ದು, ದರ್ಬೆಗೆ ಬರುವುದಾಗಿ ತಿಳಿಸಿ, ಮಲಾರ್‌ನಿಂದ ತನ್ನ ಬೈಕ್‌ನಲ್ಲಿ ಹೊರಟು ಆರ್ಯಾಪು ಗ್ರಾಮದ ಕಲ್ಲರ್ಪೆಯ ಮಾಣಿ-ಮೈಸೂರು ಹೆದ್ದಾರಿಯಲ್ಲಿ ಹೋಗುತ್ತಿದ್ದಾಗ ಸಚಿನ್ ಮುಕ್ವೆ ಹಾಗೂ ಇತರರು ಕಾರಿನಲ್ಲಿ ದರ್ಬೆ ಕಡೆಯಿಂದ ಬರುತ್ತಿರುವವರು ಅಶ್ವಿತ್ ಕುಮಾರ್ ರನ್ನು ನೋಡಿ ಕಾರಿನ ಚಾಲಕ ಕೀರ್ತೇಶನು ಬೈಕಿಗೆ ಅಡ್ಡ ಇಟ್ಟು ತಡೆದು ನಿಲ್ಲಿಸಿದ್ದು, ನಂತರ ಸಚಿನ್ ಮುಕ್ವೆ, ಅಂಕಿತ್ ಹಾಗೂ ಇತರ ಇಬ್ಬರು ಪರಿಚಯ ಇಲ್ಲದ ವ್ಯಕ್ತಿಗಳು ಕಾರಿನಿಂದ ಇಳಿದು ಬಂದು., ಅಶ್ವಿತ್ ಕುಮಾರ್ ಮತ್ತು ಯುವತಿ ಮಧ್ಯೆ ಇರುವ ಪ್ರೀತಿ ವಿಚಾರವಾಗಿ, ಆಕೆಯ ವಿಚಾರಕ್ಕೆ ಬಂದರೆ ನಿನ್ನನ್ನು ಸಾಯಿಸುತ್ತೇವೆ ಎಂದು ಹೇಳಿ ಅವಾಚ್ಯ ಶಬ್ದಗಳಿಂದ ಬೈದು, ಸಚಿನ್ ಹಾಗೂ ಅಂಕಿತ್ ಕೈಯಿಂದ ಹೊಡೆದಿದ್ದು, ಇಬ್ಬರು ಪರಿಚಯ ಇಲ್ಲದ ವ್ಯಕ್ತಿಗಳು ಕೈಯಲ್ಲಿ ಗಟ್ಟಿಯಾಗಿ ಹಿಡಿದುಕೊಂಡಿದ್ದು, ಅಶ್ವಿತ್ ಅವರಿಂದ ತಪ್ಪಿಸಿಕೊಂಡು ಓಡಿದಾಗ, ಮುಂದಕ್ಕೆ ಹುಡುಗಿಯ ವಿಷಯಕ್ಕೆ ಬಂದರೆ ಕೊಲ್ಲದೇ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾರೆ ಎಂದು ಅಶ್ವಿತ್ ಕುಮಾರ್ ನೀಡಿರುದ ದೂರಿನಲ್ಲಿ ಆರೋಪಿಸಿದ್ದಾರೆ.