ಬಂಟ್ವಾಳ: ನಿಯಮ ಮೀರಿ ಚಾಲನೆ ಮಾಡಿ ಪೊಲೀಸರ ಕೈಗೆ ಸಿಕ್ಕಿಬಿದ್ದರೆ ದಂಡ ಗ್ಯಾರಂಟಿ – ಕಹಳೆ ನ್ಯೂಸ್
ಬಂಟ್ವಾಳ : ರಸ್ತೆಯಲ್ಲಿ ಟ್ರಾಫಿಕ್ ಪೊಲೀಸರು ದಂಡ ವಸೂಲಿ ಮಾಡುವ ವೇಳೆ ಸುಳ್ಳು ಹೇಳಿ ಬಚಾವಾಗಲು ಸಾಧ್ಯವಿಲ್ಲ, ಜೊತೆಗೆ ಅಸಭ್ಯ ವರ್ತನೆ ಮಾಡಿದರೆ ಜೋಕೆ, ಅವರ ಶರೀರದಲ್ಲಿ ಕಣ್ಗಾವಲು ಕ್ಯಾಮರಾ ಅಳವಡಿಸಿಲಾಗಿದ್ದು, ಸೂಕ್ಷ್ಮವಾಗಿ ಎಲ್ಲವನ್ನು ಸೆರೆ ಹಿಡಿಯುತ್ತದೆ. ಇನ್ಮುಂದೆ ಸಾರಿಗೆ ನಿಯಮಗಳನ್ನು ಮೀರಿ ಚಾಲನೆ ಮಾಡಿ ಸಿಕ್ಕಿಬಿದ್ದರೆ, ಏನಿದ್ದರೂ ದಂಡ ನೀಡಿ ತೆಪ್ಪಗೆ ಬರುವುದು ಸರಿ.
ಬಂಟ್ವಾಳ ಟ್ರಾಫಿಕ್ ಪೊಲೀಸ್ ಠಾಣೆಯ ದಂಡ ವಸೂಲಿ ಮಾಡುವ ಅಧಿಕಾರಿಗಳಿಗೆ ಎಂಬಂತೆ ನಾಲ್ಕು ಶರೀರದ ಮೇಲೆ ಅಳವಡಿಸುವ ಕ್ಯಾಮರಾ ಇಲಾಖೆ ನೀಡಿದ್ದು, ಇದೀಗ ಪೊಲೀಸರ ಮೇಲೆ ಕಣ್ಗಾವಲು ವ್ಯವಸ್ಥೆ ಕಲ್ಪಿಸಲಾಗಿದೆ.
ಟ್ರಾಫಿಕ್ ಪೊಲೀಸರು ದಂಡ ವಸೂಲಿ ಮಾಡುವ ವೇಳೆ ಅನಾವಶ್ಯಕವಾದ ವಾದವಿವಾದಗಳನ್ನು ತಡೆದು ನ್ಯಾಯಪರವಾಗಿ ಕಾರ್ಯನಿರ್ವಹಿಸಲು ಇಲಾಖೆ ಒಂದು ಉತ್ತಮ ವ್ಯವಸ್ಥೆ ಮಾಡಿದೆ.
ರಸ್ತೆಯಲ್ಲಿ ನಡೆಯುವ ಅನೇಕ ವಿಚಾರಗಳಿಗೆ ಈ ಕ್ಯಾಮರಾ ಉಪಯೋಗವಾಗಲಿದ್ದು, ಕನಿಷ್ಠ 24 ಗಂಟೆಯವರೆಗೆ ಇದು ಕಾರ್ಯಚರಿಸುತ್ತದೆ. ಉತ್ತಮ ಗುಣಮಟ್ಟದ ಕ್ಯಾಮರಾ ಇದಾಗಿದೆ .