3.18ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಟ್ರಾಫಿಕ್ ಪೊಲೀಸ್ ಠಾಣೆಯ ಕಾಮಗಾರಿ ವೀಕ್ಷೀಸಿದ ಪೋಲಿಸ್ ಹೌಸಿಂಗ್ ಕಾರ್ಪೋರೇಸನ್ ಎಡಿಜಿಪಿ ರಾಮಚಂದ್ರರಾವ್ – ಕಹಳೆ ನ್ಯೂಸ್
ಬಂಟ್ವಾಳ : ಬಿಸಿರೋಡಿನ ಪಾಣೆಮಂಗಳೂರಿನಲ್ಲಿ ಅಂದಾಜು ರೂ.3.18 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಟ್ರಾಫಿಕ್ ಪೋಲೀಸ್ ಠಾಣೆಯ ಕಾಮಗಾರಿಯನ್ನು ಪೋಲಿಸ್ ಹೌಸಿಂಗ್ ಕಾರ್ಪೋರೇಸನ್ ಎಡಿಜಿಪಿ ರಾಮಚಂದ್ರರಾವ್ ವೀಕ್ಷಣೆ ನಡೆಸಿದರು.
ಉತ್ತಮ ಗುಣಮಟ್ಟದಲ್ಲಿ ಠಾಣೆಯ ಕೆಲಸವನ್ನು ಮಾಡುವ ಜವಬ್ದಾರಿಯನ್ನು ಗುತ್ತಿಗೆದಾರರಿಗೆ ಈ ಸಂದರ್ಭದಲ್ಲಿ ನೆನಪಿಸಿದರು.ನೆರೆ ನೀರು ನಿಲ್ಲುವ ಗುಂಡಿಯಾದ ಸ್ಥಳದಲ್ಲಿ ಪೋಲೀಸ್ ಠಾಣೆಯ ನಿರ್ಮಾಣವಾಗಿದ್ದರಿಂದ ಆಧುನಿಕ ತಂತ್ರಜ್ಞಾನದ ಹೆಚ್ಚವರಿ ರಿಟೈಂನಿAಗ್ ವಾಲ್ ನಿರ್ಮಾಣದ ವಿಚಾರವನ್ನು ಗುತ್ತಿಗೆದಾರರ ಗಮನಕ್ಕೆ ತಂದಿದ್ದು, ಈ ನಿಟ್ಟಿನಲ್ಲಿ ಕೆಲವೊಂದು ಸಲಹೆ,ಸೂಚನೆಗಳನ್ನು ನೀಡಿದರು. ಕಟ್ಟಡದ ನಿರ್ಮಾಣದ ವೇಳೆ ಉತ್ತಮ ಗುಣಮಟ್ಟದ ಮೂಲಭೂತವಾದ ವಸ್ತುಗಳನ್ನು ಬಳಸಿ ಎಂದು ಇದೇ ಸಂದರ್ಭದಲ್ಲಿ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಅಡಿಸನಲ್ ಎಸ್.ಪಿ.ಜಗದೀಶ್, ಬಂಟ್ವಾಳ ಡಿವೈ.ಎಸ್.ಪಿ.ವಿಜಯಪ್ರಸಾದ್, ಬಂಟ್ವಾಳ ನಗರ ಪೋಲೀಸ್ ಇನ್ಸ್ ಪೆಕ್ಟರ್ ಅನಂತ ಪದ್ಮನಾಭ, ಟ್ರಾಫಿಕ್ ಎಸ್.ಐ.ಸುತೇಶ್, ಪಿಎಚ್.ಸಿ.ಕ್ವಾಲಿಟಿ & ಕಂಟ್ರೋಲ್ ಇಂಜಿನಿಯರ್ ಶಿವಪ್ರಸಾದ್,ಎಕ್ಸ್ ಕ್ಯೂಟಿವ್ ಇಂಜಿನಿಯರ್ ಸಣ್ಣೇಗೌಡ, ಎ.ಇ.ಇ.ರಾಜೇಶ್, ಮತ್ತಿತರರು ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಉಪಸ್ಥಿತರಿದ್ದರು.