Friday, November 22, 2024
ದಕ್ಷಿಣ ಕನ್ನಡಬೆಳ್ತಂಗಡಿಸುದ್ದಿ

ಎ.11ರಿಂದ ಎ.13ರವರೆಗೆ ಹೇರಾಜೆ ಶ್ರೀ ವಿಘ್ನೇಶ್ವರ ಭಜನಾ ಮಂದಿರ ಹಾಗೂ ಶ್ರೀ ವಿಘ್ನೇಶ್ವರ ಭಜನಾ ಸೇವಾ ಪ್ರತಿಷ್ಠಾನ(ರಿ.)ದ 21ನೇ ವರ್ಷದ ಪ್ರತಿಷ್ಠೋತ್ಸವ ಕಾರ್ಯಕ್ರಮ – ಕಹಳೆ ನ್ಯೂಸ್

ಬೆಳ್ತಂಗಡಿ : ಬೆಳ್ತಂಗಡಿ ತಾಲೂಕಿನ ಪುತ್ತಿಲ ಗ್ರಾಮದ ಹೇರಾಜೆ ಶ್ರೀ ವಿಘ್ನೇಶ್ವರ ಭಜನಾ ಮಂದಿರ ಹಾಗೂ ಶ್ರೀ ವಿಘ್ನೇಶ್ವರ ಭಜನಾ ಸೇವಾ ಪ್ರತಿಷ್ಠಾನ(ರಿ.) ನ 21ನೇ ವರ್ಷದ ಪ್ರತಿಷ್ಠೋತ್ಸವ ಮತ್ತು ವಾರ್ಷಿಕೋತ್ಸವ ಹಾಗೂ ನೂತನ ಉಪ ಕಟ್ಟಡದ ಉದ್ಘಾಟನೆ ಮತ್ತು ಸಭಾಭವನ ಶಂಕು ಸ್ಥಾಪನೆ ಕಾರ್ಯಕ್ರಮವು ಎ.11ರಿಂದ ಎ.13ರವರೆಗೆ ನಡೆಯಲಿದೆ.

ಎ.11ರಂದು ಬೆಳಗ್ಗೆ ಬೇಂಗಿಲ ಗುತ್ತುಮನೆಯಿಂದ ಶ್ರೀ ವಿಘ್ನೇಶ್ವರ ಭಜನಾ ಮಂದಿರದವೆರೆಗೆ ಮೆರವಣಿಗೆ ಮೂಲಕ ಹಸಿರುವಾಣಿ ಸಮರ್ಪಣೆಯಾಗಲಿದ್ದು, ಬೇಂಗಿಲ ಪುರುಷೋತ್ತಮ ಪೂಜಾರಿ ಚಾಲನೆ ನೀಡಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬಳಿಕ ಉಗ್ರಾಣ ಮುಹೂರ್ತಕ್ಕೆ ವೆಂಕಟೇಶ್ವರ ಭಟ್ ಎಕ್ಕಳ ಅವರು ದೀಪ ಬೆಳಗಿಸಿ ಚಾಲನೆ ನೀಡಲಿದ್ದು, ಮುರುಗೋಳಿ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘ ಬಾರ್ಯ ಇದರ ಅಧ್ಯಕ್ಷ ಪ್ರವೀಣ್ ರೈ ಪೊರ್ಕಳ ಕಾರ್ಯಾಲಯದ ಉದ್ಘಾಟಿಸಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸಭಾ ಕಾರ್ಯಕ್ರಮದ ನಂತರ ಸಾರ್ವಜನಿಕ ಅನ್ನಸಂತರ್ಪಣೆ ನಡೆದು, ಮಧ್ಯಾಹ್ನ ಮಡಂತ್ಯಾರು ಪಾರೆಂಕಿ ಶ್ರೀ ಮಹಿಷಮರ್ದಿನಿ ಯಕ್ಷಗಾನ ಸಂಘದ ಹವ್ಯಾಸಿ ಕಲಾವಿದರಿಂದ ಯಕ್ಷಗಾನ ತಾಳಮದ್ದಳೆ ನಡೆಯಲಿದೆ.

ಸಂಜೆ ವಿವಿಧ ಧಾರ್ಮಕ ಕಾರ್ಯಕ್ರಮಗಳ ಬಲಿಕ ಸಭಾ ಕಾರ್ಯಕ್ರಮ ಹಾಗೂ ಊರಿನ ಪ್ರತಿಭಾನ್ವಿತ ಪ್ರತಿಭೆಗಳಿಂದ ಮತ್ತು ಮಕ್ಕಳಿಂದ ಸಾಂಸ್ಕೃತಿಕ ವೈಭವ ಹಾಗೂ ಪ್ರಶಾಂತ ಎಸ್.ಕೆ. ಮತ್ತು ಸಚಿನ್ ಕಲಾಯ ಹಾಗೂ ಸಂಗಡಿಗರಿAದ ಭಕ್ತಿಗಾನ ರಸಮಂಜರಿ ಕಾರ್ಯಕ್ರಮ ಜರಗಲಿದೆ.

ಎ.12ರಂದು ಬೆಳಗ್ಗೆ ಗಣಹೋಮ, ಚಂಡಿಕಾಹೋಮ ಪ್ರಾರಂಭಗೊAಡು ಬಳಿಕ ನೂತನ ಉಪ ಕಟ್ಟಡದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಆ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ಹಾಗೂ ಸಂಜೆ ದುರ್ಗಾಪೂಜೆ, ಸಭಾ ಕಾರ್ಯಕ್ರಮ ನಡೆದು, ರಾತ್ರಿ ಮಂಜೇಶ್ವರದ ಶಾರದ ಆರ್ಟ್ಸ್ ಕಲಾವಿದರು(ರಿ.) ಇವರಿಂದ “ಕಥೆ ಎಡ್ಡೆಂಡು” ಎಂಬ ನಾಟಕ ಪ್ರದರ್ಶನಗೊಳ್ಳಲಿದೆ.

ಎ.13ರಂದು ಬೆಳಿಗ್ಗೆ ಸೂರ್ಯೋದಯದಿಂದ ಸ್ಥಳೀಯ ವಿವಿಧ ಭಜನಾ ಮಂದಿರಗಳ ಸಹಕಾರದಿಂದ ಅರ್ಧ ಏಕಾಹ ಭಜನೆ ನಡೆಯಲಿದೆ. ಆ ಬಳಿಕ 108 ತೆಂಗಿನಕಾಯಿ ಗಣಹೋಮ, ಶ್ರೀ ವಿಘ್ನೇಶ್ವರ ದೇವರಿಗೆ, ಶ್ರೀ ಸಿದ್ಧಿ ವಿನಾಯಕ ಪೂಜೆ, ಮಹಾಪೂಜೆ ಪಲ್ಲಪೂಜೆ ಹಾಗೂ ಪ್ರಸಾದ ವಿತರಣೆ ನಡೆಯಲಿದೆ.
ಸಂಜೆ ಸೂರ್ಯಾಸ್ತಕ್ಕೆ ಸರಿಯಾಗಿ ಅರ್ಧ ಏಕಾಹ ಭಜನೆಯ ಮಂಗಳ, ಹಾಗೂ ದೇವರಿಗೆ ಮಹಾ ಮಂಗಳಾರತಿ ನಡೆದು, ಬಳಿಕ ಸಭಾ ಕಾರ್ಯಕ್ರಮ ನಡೆಯಲಿದೆ. ರಾತ್ರಿ ಶ್ರೀ ವಿಘ್ನೇಶ್ವರ ಭಜನಾ ಮಂದಿರದ ಪ್ರಬುದ್ಧ ರಂಗಕಲಾವಿದರಿAದ ಹರೀಶ್ ಪಡುಬಿದ್ರೆ ವಿರಚಿತ ಅಜ್ಜಿಗ್ ಏರ್‌ಲಾ ಇಜ್ಜಿ ಎಂಬ ತುಳು ಹಾಸ್ಯಾಮಯ ನಾಟಕ ನಡೆಯಲಿದೆ.