ಸುಳ್ಯ: ಕರ್ನಾಟಕ- ಕೇರಳ ಗಡಿ ಪ್ರದೇಶದ ಮಂಡೆಕೋಲು ಸಮೀಪದ ಮುರೂರು ಚೆಕ್‌ಪೋಸ್ಟ್ ಬಳಿ ರಾತ್ರಿ ವೇಳೆ ಕಾಡಾನೆಯೊಂದು ಪ್ರತ್ಯಕ್ಷಗೊಂಡಿದೆ.
ಚುನಾವಣೆ ಹಿನ್ನೆಲೆಯಲ್ಲಿ ಮುರೂರು ಎಂಬಲ್ಲಿ ಚೆಕ್‌ಪೋಸ್ಟ್ ತೆರೆದು ವಾಹನ ತಪಾಸಣೆ ನಡೆಸಲಾಗುತ್ತಿದೆ. ಈ ಚೆಕ್‌ಪೋಸ್ಟ್ನ ಕೂಗಳತೆ ದೂರದಲ್ಲೇ ಒಂಟಿ ಕಾಡಾನೆ ರಸ್ತೆಯಲ್ಲಿ ನಡೆದುಕೊಂಡು ಬಂದಿದೆ. ಬಳಿಕ ಅರಣ್ಯದತ್ತ ತೆರಳಿದೆ ಎನ್ನಲಾಗಿದೆ. ಒಂಟಿಸಲಗವನ್ನು ಚೆಕ್‌ಪೋಸ್ಟ್ನಲ್ಲಿದ್ದ ಅಧಿಕಾರಿಗಳು, ಸಿಬಂದಿ ನೋಡಿದ್ದು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಕೇರಳ ಹಾಗೂ ಸುಳ್ಯದ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯಿAದ ಚೆಕ್‌ಪೋಸ್ಟ್ನಲ್ಲಿ ಕರ್ತವ್ಯ ನಿರ್ವಹಿಸುವವರು, ವಾಹನ ಸವಾರರು ಆತಂಕಕ್ಕೊಳಗಾಗಿದ್ದಾರೆ.