ಲೋಕಕಲ್ಯಾಣಾರ್ಥವಾಗಿ ವಿಶ್ವ ಹಿಂದೂ ಪರಿಷತ್, ಭಜರಂಗದಳ ಬಂಟ್ವಾಳ ಪ್ರಖಂಡ ವತಿಯಿಂದ ನಡೆದ “ನಮ್ಮ ನಡೆ ಪೊಳಲಿ ದೇವಸ್ಥಾನದ ಕಡೆ” ಬೃಹತ್ ಪಾದಯಾತ್ರೆ – ಕಹಳೆ ನ್ಯೂಸ್
ಬಂಟ್ವಾಳ: ವಿಶ್ವ ಹಿಂದೂ ಪರಿಷತ್,ಭಜರಂಗದಳ ಬಂಟ್ವಾಳ ಪ್ರಖಂಡ ವತಿಯಿಂದ ಲೋಕಕಲ್ಯಾಣಾರ್ಥವಾಗಿ “ನಮ್ಮನಡೆ ಪೊಳಲಿ ದೇವಸ್ಥಾನದ ಕಡೆ” ಬೃಹತ್ ಪಾದಯಾತ್ರೆ ನಡೆಯಿತು.
ಬೆಳಗ್ಗಿನ ಜಾವ 5.30 ರ ವೇಳೆಗೆ ಕಡೆಗೋಳಿ ಪೊಳಲಿ ದ್ವಾರ, ಬಿ.ಸಿ.ರೋಡಿನ ಕೈಕಂಬದಲ್ಲಿರುವ ಪೊಳಲಿ ದ್ವಾರ ಹಾಗೂ ಗುರುಪುರ ಕೈಕಂಬ ಪೊಳಲಿ ದ್ವಾರದಿಂದ ಏಕಕಾಲದಲ್ಲಿ ಪಾದಯಾತ್ರೆ ಹೊರಟು ಪೊಳಲಿ ದೇವಸ್ಥಾನದಲ್ಲಿ ಸಂಪನ್ನಗೊ0ಡಿತು.
ವಿ.ಹಿ0.ಪ.ಬ0ಟ್ವಾಳ ಪ್ರಖಂಡದ ಅಧ್ಯಕ್ಷ ಪ್ರಸಾದ್ ಕುಮಾರ್ ರೈ,ವಿ.ಹಿಂ.ಪ. ಹಾಗೂ ಭಜರಂಗದಳದ ಪ್ರಮುಖರಾದ ರಘ ಸಕಲೇಶಪುರ, ಡಾ.ಕೃಷ್ಣಪ್ರಸನ್ನ,ಭರತ್ ಕುಮ್ಡೇಲ್,ಗುರುರಾಜ್ ಬಂಟ್ವಾಳ,ಸ0ತೋಷ್ ಸರಪಾಡಿ,ಶಿವಪ್ರಸಾದ್ ತುಂಬೆ,ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ ಸಹಿತ ನೂರಾರು ಸಂಖ್ಯೆಯಲ್ಲಿ ಸಂಘಟನೆಯ ಕಾರ್ಯಕರ್ತರು,ಭಕ್ತರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಪೊಳಲಿ ಕ್ಷೇತ್ರದಲ್ಲಿ ವಸ್ತ್ರ ಸಂಹಿತೆ ಕ್ರಮಬದ್ಧವಾಗಿ ಜಾರಿಗೊಳಿಸಬೇಕು, ಕ್ಷೇತ್ರದ ವತಿಯಿಂದ ಗೋಶಾಲೆ ನಿರ್ಮಾಣಗೊಳ್ಳಬೇಕು, ಹಿಂದೂ ಸಮಾಜಕ್ಕೆ ಧಾರ್ಮಿಕ ಶಿಕ್ಷಣದ ಅಗತ್ಯತೆ ಇರುವುದರಿಂದ ಬಾಲ ಸಂಸ್ಕಾರ ಕೇಂದ್ರದ0ತಹ ಧಾರ್ಮಿಕ ಶಿಕ್ಷಣ ಕೇಂದ್ರ ಸ್ಥಾಪನೆ ಮಾಡಬೇಕು, ಬಡ ಹಿಂದೂ ಕುಟುಂಬಗಳಿಗೆ ನೆರವಾಗುವಂತೆ ಸಾಮೂಹಿಕ ಮದುವೆ ಕಾರ್ಯಕ್ರಮ ನಡೆಯಬೇಕು ಎಂದು ಆಗ್ರಹಿಸಿ ಪೊಳಲಿ ಶ್ರೀರಾಜರಾಜೇಶ್ವರಿ ದೇವಳದ ಆಡಳಿತ ಸಮಿತಿಗೆ ಮನವಿಯನ್ನು ಸಲ್ಲಿಸಲಾಯಿತು. ದೇವಳದ ಪರವಾಗಿ ನಾಗೇಶ್ ರಾವ್ ಮನವಿಯನ್ನು ಸ್ವೀಕರಿಸಿದರು.