Sunday, January 19, 2025
ಉದ್ಯೋಗಕಾರ್ಕಳದಕ್ಷಿಣ ಕನ್ನಡಪುತ್ತೂರುಶಿಕ್ಷಣಸುದ್ದಿ

ಎ.09ರಂದು ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಸಂಸ್ಥೆಯಾಗಿರುವ ವಿದ್ಯಾಮಾತಾ ಅಕಾಡೆಮಿಯ ನೂತನ ಶಾಖೆ ಕಾರ್ಕಳದಲ್ಲಿ ಶುಭಾರಂಭ – ಕಹಳೆ ನ್ಯೂಸ್

ಪುತ್ತೂರು : ಕರಾವಳಿ ಭಾಗದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವವರೇ ಇಲ್ಲ ಎನ್ನುವ ಕೂಗಿನ ಮಧ್ಯೆ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಜಾಗೃತಿಯನ್ನು ಮೂಡಿಸುವುದರ ಜೊತೆಗೆ ಉತ್ತಮ ತರಬೇತಿ ನೀಡಿ ನೂರಾರು ವಿದ್ಯಾರ್ಥಿಗಳ ಸರಕಾರಿ ಹುದ್ದೆಗೆ ಏರಿಸುವಲ್ಲಿ ಯಶಸ್ವಿಯಾಗಿರುವ ವಿದ್ಯಾಮಾತಾ ಅಕಾಡೆಮಿಯು ಕಾರ್ಕಳದಲ್ಲಿ ಎ.09ರಂದು ತನ್ನ ಶಾಖೆಯನ್ನು ಪ್ರಾರಂಭಿಸುತ್ತಿದ್ದು ಕಾರ್ಕಳದಲ್ಲಿಯೂ ಕೂಡ ಸ್ಪರ್ಧಾತ್ಮಕ ಪರೀಕ್ಷೆಗಳ ಜಾಗೃತಿಯನ್ನು ಮೂಡಿಸುವ ಮುಖಾಂತರ ಆಸಕ್ತಿ ವಿದ್ಯಾರ್ಥಿಗಳ ಸರಕಾರಿ ಹುದ್ದೆಗಳ ಕನಸನ್ನು ನನಸು ಮಾಡು ವತ್ತಾ ಉತ್ತಮ ಅಡಿಪಾಯವನ್ನು ಹಾಕಿ ಕೊಡಲಿದೆ.


ಮಾತೃ ಸಂಸ್ಥೆಯಾದ ವಿದ್ಯಾಮಾತಾ ಫೌಂಡೇಶನ್ (ರಿ) ಮೂಲಕ 2017 ರಿಂದ ಈವರೆಗೆ 3 ರಾಜ್ಯಮಟ್ಟದ ಉದ್ಯೋಗ ಮೇಳಗಳು 600ಕ್ಕೂ ಮಿಕ್ಕಿದ ಉದ್ಯೋಗ ನೇರ ಸಂದರ್ಶನಗಳ ಮೂಲಕ ಸುಮಾರು 5 ಸಾವಿರಕ್ಕೂ ಮಿಕ್ಕಿದ ಉದ್ಯೋಗ ಆಕಾಂಕ್ಷಿಗಳಿಗೆ ಖಾಸಗಿ ಕಂಪನಿಗಳಲ್ಲಿ ಉದ್ಯೋಗಗೊಳಿಸಿದ ಹೆಗ್ಗಳಿಕೆ ವಿದ್ಯಾಮಾತಾ ಅಕಾಡೆಮಿಯದ್ದಾಗಿದೆ. 2020ರಿಂದ ಪುತ್ತೂರಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯನ್ನು ಪ್ರಾರಂಭಿಸಿ ಒಂದೇ ವೇದಿಕೆಯಲ್ಲಿ ಬ್ಯಾಂಕಿAಗ್ , ಎಫ್. ಡಿ .ಎ, ಎಸ್. ಡಿ. ಎ ,ಶಿಕ್ಷಕರ ನೇಮಕಾತಿ ,ಭಾರತೀಯ ಸೇನೆ , ಪೊಲೀಸ್, ಅರಣ್ಯ ಇಲಾಖೆ ಇತ್ಯಾದಿ ನೇಮಕಾತಿಗಳಿಗೆ ತರಬೇತಿಯನ್ನು ನೀಡುವುದರ ಮುಖಾಂತರ 120 ರಷ್ಟು ವಿದ್ಯಾರ್ಥಿಗಳನ್ನು ನೇಮಕಾತಿ ಪರೀಕ್ಷೆಗಳಲ್ಲಿ ಉತ್ತೀರ್ಣರಾಗುವಂತೆ ಮಾಡಿದ ಕೀರ್ತಿ ವಿದ್ಯಾಮಾತಾ ಅಕಾಡೆಮಿಯದ್ದು. ಕಾರ್ಪೊರೇಟ್ ಸಂಸ್ಥೆಗಳಲ್ಲಿ ಉದ್ಯೋಗ ಮಾಡಬೇಕೆಂಬ ಹಂಬಲ ಇರುವ ವಿದ್ಯಾರ್ಥಿಗಳಿಗೆ ಅಕೌಂಟಿAಗ್ , ಎಚ್. ಆರ್ , ಅಡ್ಮಿನ್ ತರಬೇತಿಗಳನ್ನು ನೀಡುವುದರ ಮುಖಾಂತರ ಕಾರ್ಪೊರೇಟ್ ಸಂಸ್ಥೆಗಳಲ್ಲಿ ಕೂಡ ಉತ್ತಮ ಹುದ್ದೆಗೆರುವ ಉದ್ಯೋಗಕಾಂಕ್ಷಿಗಳ ಕನಸು ಕೂಡ ವಿದ್ಯಾಮಾತಾ ಅಕಾಡೆಮಿಯು ನನಸು ಮಾಡುತ್ತಿದೆ.
15 ಕ್ಕೂ ಮಿಕ್ಕಿದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಒಂದೇ ಸೂರಿನಡಿಯಲ್ಲಿ ತರಬೇತಿ ನೀಡುವುದಲ್ಲದೆ ಜೊತೆಗೆ ತರಬೇತಿ ಪಡೆಯುವ ಎಲ್ಲಾ ವಿದ್ಯಾರ್ಥಿಗಳಿಗೆ ಉದ್ಯೋಗ ಕೌಶಲ್ಯತೆ ,ಉಚಿತ ಸ್ಪೋಕನ್ ಇಂಗ್ಲೀಷ್ , ಉಚಿತ ಕಂಪ್ಯೂಟರ್, ಉಚಿತ ದೈಹಿಕ ಸದೃಢತೆಯ ತರಬೇತಿ ನೀಡುವುದರ ಜೊತೆಗೆ ಎರಡು ವರ್ಷಗಳ ಕಾಲ ಉಚಿತವಾಗಿ ಸರಕಾರಿ ಹುದ್ದೆಗಳ ಅರ್ಜಿ ಸಲ್ಲಿಕೆಯನ್ನು , ಮಾಹಿತಿಯನ್ನು ನೀಡಲಾಗುತ್ತದೆ. ಬಿಪಿಎಲ್ ,ಅಂತ್ಯೋದಯ ಕಾರ್ಡುದಾರರಿಗೆ ವಿದ್ಯಾರ್ಥಿಗಳಿಗೆ 6000 ರೂ ವಿದ್ಯಾರ್ಥಿವೇತನವನ್ನು ತನ್ನ ಮಾತೃ ಸಂಸ್ಥೆಯಾದ ವಿದ್ಯಾಮಾತಾ ಫೌಂಡೇಶನ್ ನ ಮೂಲಕ ನೀಡಲಾಗುತ್ತಿದ್ದು ಅಷ್ಟು ಮೊತ್ತವನ್ನು ತರಬೇತಿ ಶುಲ್ಕದಲ್ಲಿ ಕಡಿತಗೊಳಿಸಲಾಗುತ್ತದೆ , ಪ್ರತಿ ವರ್ಷ 50 ವಿದ್ಯಾರ್ಥಿಗಳಿಗೆ ಈ ಸೌಲಭ್ಯವನ್ನು ಕಳೆದ ಮೂರು ವರ್ಷಗಳಿಂದ ನೀಡಲಾಗುತ್ತಿದೆ .ಹೈಸ್ಕೂಲ್ /ಪದವಿಪೂರ್ವ /ಪದವಿ/ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಕಾಲೇಜುಗಳಲ್ಲಿ ಉಚಿತವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಮತ್ತು ಉದ್ಯೋಗ ಸಂದರ್ಶನಗಳನ್ನು ಎದುರಿಸುವ ಬಗೆಗಿನ ಮಾಹಿತಿ ಕಾರ್ಯಗಳನ್ನು ನಡೆಸುವ ಮುಖಾಂತರ ಜಾಗೃತಿ ಮೂಡಿಸಲಾಗುವುದು. ತರಬೇತಿಯು ನೇರ ತರಗತಿಗಳ ಮೂಲಕ ಹಾಗೂ ಉದ್ಯೋಗಸ್ಥರಿಗೆ ,ವಿದ್ಯಾರ್ಥಿಗಳಿಗೆ ,ಗೃಹಿಣಿಯರಿಗೆ ಅನುಕೂಲವಾಗುವಂತೆ ರಾತ್ರಿ 8 ರಿಂದ 9 ರವರೆಗೆ ದಿನನಿತ್ಯ ಆನ್ಲೈನ್ ಮೂಲಕ ಲಭ್ಯವಿರುತ್ತದೆ . ವಿದ್ಯಾಮಾತಾ ಅಕಾಡೆಮಿ ಆಡಳಿತ ನಿರ್ದೇಶಕರಾಗಿ ಭಾಗ್ಯೇಶ್ ರೈ ರವರು ಸಂಸ್ಥೆ ಯಶಸ್ವಿಗೆ ಶ್ರಮಿಸುತ್ತಿದ್ದು ವಿದ್ಯಾಮಾತಾ ಅಕಾಡೆಮಿಯ ಆಡಳಿತ ಕಚೇರಿ ಪುತ್ತೂರಿನಲ್ಲಿದೆ .ಸುಳ್ಯದಲ್ಲಿ ಕೂಡ ಶಾಖೆಯನ್ನು ಹೊಂದಿದ್ದು ,ಸದ್ಯ ಕಾರ್ಕಳದಲ್ಲಿಯೂ ಶಾಖೆಯನ್ನು ಪ್ರಾರಂಭವಾಗುತ್ತಿದೆ. ಕಾರ್ಕಳ ಶಾಖೆಯ ಸಂಚಾಲಕಿಯಾಗಿ ಶ್ರೀಮತಿ ರಮಿತಾ ಶೈಲೇಂದ್ರ ಅವರು ಕಾರ್ಕಳ ಶಾಖೆಯನ್ನು ಇವರು ಮುನ್ನಡೆಸಲಿದ್ದಾರೆ. ಕಾರ್ಕಳದಲ್ಲಿ ಕೂಡ ನಿವೃತ್ತ ಶಿಕ್ಷಕರು ,ಅಧಿಕಾರಿಗಳು, ಗಣ್ಯರನ್ನು ಒಳಗೊಂಡ ಗೌರವ ಸಲಹಾ ಸಮಿತಿಯು ಕೂಡ ಅಸ್ತಿತ್ವಕ್ಕೆ ಬರಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು