Recent Posts

Monday, January 20, 2025
ಸುದ್ದಿ

ಎಚ್ ಡಿ ದೇವೇಗೌಡ ಹೇಳಿಕೆಗೆ ಟ್ವೀಟ್ ಮೂಲಕ ತಿರುಗೇಟು ನೀಡಿದ ಬಿಜೆಪಿ – ಕಹಳೆ ನ್ಯೂಸ್

ಬೆಂಗಳೂರು: ದಕ್ಷಿಣ ಭಾರತದಲ್ಲಿ ಬಿಜೆಪಿಯ ಹೆಬ್ಬಾಗಿಲು ಮುಚ್ಚಿಸುತ್ತೇನೆ ಎಂದು ಹೇಳಿಕೆ ನೀಡಿದ್ದ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡರಿಗೆ ಬಿಜೆಪಿ ತಿರುಗೇಟು ನೀಡಿದೆ.

ಕರ್ನಾಟಕದಲ್ಲಿ ನಡೆಯಲಿರುವ ಲೋಕಸಭೆ ಉಪಚುನಾವಣೆಯಲ್ಲಿ ಬಿಜೆಪಿ ಸೋಲಿಸುವ ವಿಚಾರವಾಗಿ ಮಾತನಾಡಿದ ದೇವೇಗೌಡರಿಗೆ ಕರ್ನಾಟಕ ಬಿಜೆಪಿ ಟ್ವೀಟ್ ಮಾಡುವ ಮೂಲಕ ತಿರುಗೇಟು ಕೊಟ್ಟಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮೋದಿ ಪ್ರಧಾನಿಯಾದರೆ ದೇಶ ಬಿಡುತ್ತೇನೆ ಎನ್ನುವುದರಿಂದ ತೊಡಗಿ ದಕ್ಷಿಣ ಭಾರತದಲ್ಲಿ ಬಿಜೆಪಿಯನ್ನು ತಡೆಯುತ್ತೇನೆ ಎನ್ನುವುದರವರೆಗೆ ಮಾಜಿ ಪ್ರಧಾನಿಗಳು ಸತ್ಯ ತಿಳಿದುಕೊಂಡಂತೆ ಕಾಣುತ್ತಿಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು

ದೇವೇಗೌಡ ಅವರೇ ದಕ್ಷಿಣ ಭಾರತದಲ್ಲಿ ಬಿಜೆಪಿಯನ್ನು ತಡೆಯುವುದಿರಲಿ, ನಾವು ಈಗಾಗಲೇ ನಿಮ್ಮ ಭದ್ರಕೋಟೆ ಹಾಸನಕ್ಕೆ ಲಗ್ಗೆಯಿಟ್ಟಿದ್ದೇವೆ ಎಂದು ವ್ಯಂಗ್ಯ ಮಾಡಿದೆ.