Recent Posts

Sunday, January 19, 2025
ದಕ್ಷಿಣ ಕನ್ನಡಮಂಗಳೂರುರಾಜಕೀಯಸುದ್ದಿ

ಮಹಿಳೆಯರ ಸಬಲೀಕರಣ, ಸ್ವಾಲಂಬನೆಯ ಬದುಕು, ಸಮಾನ ಗೌರವ ಕಾಪಾಡಲು ಮೋದಿಯವರನ್ನು ಬೆಂಬಲಿಸಿ: ಕ್ಯಾಪ್ಟನ್ ಬ್ರಿಜೇಶ್ ಚೌಟ-ಕಹಳೆ ನ್ಯೂಸ್

ದೇಶದ ಮಹಿಳೆಯರ ಸಬಲೀಕರಣ, ಸ್ವಾಲಂಬನೆಯ ಬದುಕು, ಸಮಾನ ಗೌರವ ಹಾಗೂ ಮಹಿಳೆಯರಿಗೆ ನ್ಯಾಯವನ್ನು ಕೊಡುವ ಪ್ರಧಾನಿ ನರೇಂದ್ರ ಮೋದಿಯವರ ಸಂಕಲ್ಪವನ್ನು ಸಾಕಾರ ಮಾಡಲು ನಿಮ್ಮೆಲ್ಲರ ಆಶೀರ್ವಾದ ಬೇಕು ಎಂದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಮನವಿ ಮಾಡಿದರು.

ಮಂಗಳೂರು ನಗರ ಉತ್ತರ ಮಂಡಲದ ವತಿಯಿಂದ ನಡೆದ ನಾರಿಶಕ್ತಿ ಸಮಾವೇಶದಲ್ಲಿ ಮಾತನಾಡಿದ ಅವರು ಇಂದಿನ ವಿತ್ತ ಸಚಿವರು ಮಹಿಳೆ, ದೇಶದ ರಾಷ್ಟ್ರಪತಿ ಹುದ್ದೆ ಅಲಂಕರಿಸಿರುವುದು ಮಹಿಳೆ, ಭಾರತೀಯ ಸೇನೆಯಲ್ಲಿ ವಿವಿಧ ಹಂತದ ಹುದ್ದೆಗಳಲ್ಲಿ ಮಹಿಳೆಯರು ಕಾರ್ಯನಿರ್ವಹಿಸುವ ಅವಕಾಶ ದೊರೆತಿರುವುದು ಭಾರತೀಯ ಜನತಾ ಪಾರ್ಟಿ ಅಧಿಕಾರದಲ್ಲಿರುವ ಕಾರಣಕ್ಕೆ ಎಂದು ಹೇಳಿದರು
ಮುಂಬರುವ ಚುನಾವಣೆ ಬಹಳ ಮಹತ್ತರವಾದದ್ದು, ಬಡತನದಿಂದ ಬಂದ ಪ್ರಧಾನಿಗಳಿಗೆ ಮಹಿಳೆಯರ ಕಷ್ಟಗಳನ್ನು ನೋಡಿ ಶೌಚಾಲಯಗಳ ನಿರ್ಮಾಣಕ್ಕೆ ಆಧ್ಯತೆ ಕೊಟ್ಟರು, ಸಮಾಜದ ಬದಲಾವಣೆ ತರುವ ಶಕ್ತಿಯಿರುವುದು ಮಹಿಳೆಯರಿಗೆ ಮಾತ್ರ, ತಾಯಂದಿರು ಆಶೀರ್ವಾದ ಮಾಡುವ ಜೊತೆಗೆ ನೀವುಗಳು ಪ್ರಧಾನಮಂತ್ರಿಗಳ ಮಹಿಳಾ ಕೇಂದ್ರೀಕೃತ ಯೋಜನೆಗಳ ಬಗ್ಗೆ ಮತದಾರರಿಗೆ ತಿಳಿಸುವ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಲು ಆಶೀರ್ವದಿಸಬೇಕೆಂದು ಮನವಿ ಮಾಡಿದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷರು ಮಾಳವಿಕ ಅವಿನಾಶ್, ಶಾಸಕರು ಡಾ.ಭರತ್ ಶೆಟ್ಟಿ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷರಾದ ಮಂಜುಳಾ ರಾವ್, ರೇಖಾ ರಾಜೇಶ್, ರೂಪಾ ಬಂಗೇರ ಹಾಗೂ ಇತರರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಭಾರತೀಯ ಜನತಾ ಪಾರ್ಟಿ ಮಹಿಳಾ ಮೋರ್ಚಾವತಿಯಿಂದ ಬಂಟ್ವಾಳ ಮಂಡಲದ ವತಿಯಿಂದ ನಡೆದ “ನಾರಿಶಕ್ತಿ ಸಮಾವೇಶದಲ್ಲಿ” ಭಾಗವಹಿಸಿದ್ದರು ನಂತರದಲ್ಲಿ ಪುತ್ತೂರಿನ ‘CAMPCO’ ಚಾಕೊಲೇಟ್ ಫ್ಯಾಕ್ಟರಿಗೆ ಭೇಟಿ ನೀಡಿ ಸಿಬ್ಬಂದಿಗಳೊAದಿಗೆ ಮಾತುಕತೆ ನಡೆಸಿದರು ನಂತರ ಪುತ್ತೂರು ನಗರದ ವಿವಿಧೆಡೆಗೆ ತೆರಳಿ ಮತಯಾಚಿಸಿದರು

ಜಾಹೀರಾತು
ಜಾಹೀರಾತು
ಜಾಹೀರಾತು