Recent Posts

Sunday, January 19, 2025
ಸುದ್ದಿ

ದೇಯಿಬೈದೇತಿ ಅಪಮಾನ ಖಂಡಿಸಿ ಬೃಹತ್ ಪಾದಾಯಾತ್ರೆಗೆ ಪುತ್ತೂರಿನಲ್ಲಿ ಚಾಲನೆ.

ಪುತ್ತೂರು : ಸಾಮಾಜಿಕ ಜಾಲತಾಣಗಲ್ಲಿ ಈಗಾಗಲೇ ವೈರಲ್ ಆದ ದೇಯಿ ಬೈದೇತಿಗೆ ಅಪಮಾನ ಮಾಡುವಂತಹ ಚಿತ್ರಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಬಿ.ಜೆ.ಪಿ. ಖಂಡಿಸಿದ್ದು, ಬಿಜೆಪಿ ದ.ಕ ಜಿಲ್ಲೆ ವತಿಯಿಂದ ದೇಯಿ ಬೈದೇತಿ ವಿಗ್ರಹ ಅಪಮಾನ ಖಂಡಿಸಿ ಪುತ್ತೂರಿನಿಂದ ದೇಯಿಬೈದೆತಿ ಔಷಧವನದವರೆಗೆ ಬೃಹತ್ ಪಾದಯಾತೆ ಬೆಳಗ್ಗೆ 9.30 ರಿಂದ ಪುತ್ತೂರು ಮಹಾಲಿಂಗೇಶ್ವರ ದೇವಳದ ಗದ್ದೆಯಲ್ಲಿ ಸಂಸದ ನಳೀನ್ ಕುಮಾರ್ ಕಟೀಲ್ ಚಾಲನೆ ನೀಡಿದರು.

ಹಿಂದೂ ಧರ್ಮದ ಶ್ರದ್ಧಾ ಕೇಂದ್ರದ ಮೇಲಿನ ಅಪಮಾನ ಖಂಡಿಸಿ ಪಾದಾಯಾತ್ರೆ ನಡೆಯಲಿದೆ. ಪಾದಾಯಾತ್ರೆಯಲ್ಲಿ ಬಿ.ಜೆ.ಪಿ. ಜಿಲ್ಲಾಧ್ಯಕ್ಷರಾದ ಸಂಜೀವ ಮಠಂದೂರು, ವಿಧಾನ ಪರಿಷತ್ತಿನ ಮುಖ್ಯ ಸಚೇತಕರಾದ ಕ್ಯಾ.ಗಣೇಶ್ ಕಾರ್ಣಿಕ್, ಕೋಟಾ ಶ್ರೀನಿವಾಸ್ ಪೂಜಾರಿ, ಯುವಮೋರ್ಛಾ ಜಿಲ್ಲಾಧ್ಯಕ್ಷರಾದ ಹರೀಶ್ ಪೂಂಜಾ, ಸತ್ಯಜಿತ್ ಸುರತ್ಕಲ್ ,ಉಮಾನಾಥ ಕೋಟಿಯಾನ್ ರಾಜೇಶ್ ನಾಯ್ಕ್ ಉಳಿಪ್ಪಾಡಿ ಗುತ್ತು, ಅರುಣ್ ಕುಮಾರ್ ಪುತ್ತಿಲ, ಚನಿಲ ತಿಮ್ಮಪ್ಪ ಶೆಟ್ಟಿ, ಗೋಪಾಲಕೃಷ್ಣ ಹೇರಳೆ, ಪುಲಸ್ಯಾ ರೈ, ಸುಲೋಚನಾ ಭಟ್, ಮಲ್ಲಿಕಾಪ್ರಸಾದ್, ವಿದ್ಯಾ ಆರ್ ಗೌರಿ, ಜೀವಂಧರ್ ಜೈನ್, ಶಿವರಂಜನ್ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

https://youtu.be/sVY8iS-Pzss

Leave a Response