Friday, November 22, 2024
ಸುದ್ದಿ

ಈಜಲು ತೆರಳಿದ್ದ ವಿದ್ಯಾರ್ಥಿಗಳು: ಪ್ರಾಣಾಪಾಯದಿಂದ ಪಾರು – ಕಹಳೆ ನ್ಯೂಸ್

ಮಂಗಳೂರು: ಶಾಲೆಗೆ ರಜೆ ಸಿಕ್ಕರೆ ಮಕ್ಕಳ ಪಾಲಿಗೆ ಹಬ್ಬ. ಈಜಾಡುವುದು, ಹೀಗೆ ಏನಾದರೊಂದು ಸಾಹಸಮಯ ಕಾರ್ಯಕ್ಕೆ ತೊಡಗುತ್ತಾರೆ. ನಾವೂರು ಗ್ರಾಮದ ಬಳಿ ಆಗಿದ್ದು ಇಂತಹದ್ದೇ ಘಟನೆ. ಈಜಾಟವಾಡುವ ಸಾಹಸಕ್ಕೆ ಕೈ ಹಾಕಿ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ ವಿದ್ಯಾರ್ಥಿಗಳು.

ವಾಲ್ಮೀಕಿ ಜಯಂತಿ ಸಲುವಾಗಿ ಶಾಲೆಗೆ ರಜೆ ಇತ್ತು. ಹಾಗಾಗಿ 11 ಜನ ವಿದ್ಯಾರ್ಥಿಗಳು ಸೇರಿ ಈಜಾಡುವ ಸಾಹಸಕ್ಕೆ ಮುಂದಾಗಿದ್ದಾರೆ. ಲಕ್ಷ್ಮಿ ವಿಷ್ಣು ಮೂರ್ತಿ ದೇವಸ್ಥಾನದ ಸಮೀಪದ ನೇತ್ರಾವತಿ ನದಿಗೆ ತೆರಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇವರು ಈಜಾಡುತ್ತಿದ್ದ ವೇಳೆ ಶಂಭೂರು ಎಎಂಆರ್ ಡ್ಯಾಂ ನಿಂದ ಏಕಾಏಕಿ ನೀರನ್ನು ಹೊರಬಿಟ್ಟಿದ್ದಾರೆ. ನೀರಿನ ಹರಿವು ಗಮನಿಸಿದ 6 ಮಂದಿ ಈಜಿ ದಡ ಸೇರಿದರೆ ಉಳಿದ 5 ಮಂದಿಗೆ ಈಜಾಡುವುದಕ್ಕೆ ಆಗದೇ ದೊಡ್ಡ ಬಂಡೆಯ ಮೇಲೆ ಹತ್ತಿ ಪರದಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸಹಾಯ ಯಾಚಿಸಿ ವಿದ್ಯಾರ್ಥಿಗಳು ಬೊಬ್ಬೆ ಹೊಡೆದಾಗ ಸ್ಥಳೀಯರು ಹಗ್ಗಕೊಟ್ಟು ಒಬ್ಬೊಬ್ಬರನ್ನೇ ರಕ್ಷಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ವಿದ್ಯಾರ್ಥಿಗಳಿಗೆ ಬೈದು ತಿಳುವಳಿಕೆ ಹೇಳಿದ್ದಾರೆ.