Recent Posts

Sunday, January 19, 2025
ದಕ್ಷಿಣ ಕನ್ನಡಶಿಕ್ಷಣಸುದ್ದಿ

ದ್ವಿತೀಯ ಪಿ.ಯು.ಸಿ. ಫಲಿತಾಂಶ – ವಿವೇಕಾನಂದ ಪದವಿಪೂರ್ವಕಾಲೇಜಿನ ವಿದ್ಯಾರ್ಥಿಗಳಿಂದ ಅತ್ತ್ಯುತ್ತಮ ಸಾಧನೆ – ಕಹಳೆ – ಕಹಳೆ ನ್ಯೂಸ್

 ಕಲಾ ವಿಭಾಗದ ಪುರೋಹಿತ್ ಖುಷಿಬೆನ್‌ರಾಜ್ಯಕ್ಕೆ 3ನೇ ಸ್ಥಾನ
 482 ವಿದ್ಯಾರ್ಥಿಗಳಿಗೆ ಅತ್ತು್ಯನ್ನತ ಶ್ರೇಣಿ
 331 ವಿದ್ಯಾರ್ಥಿಗಳಿಗೆ ಪ್ರಥಮ ಶ್ರೇಣಿ
 ಕಾಲೇಜಿಗೆ 98.33% ಫಲಿತಾಂಶ

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಕಳೆದ ಮಾರ್ಚ್ನಲ್ಲಿ ನಡೆಸಿದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ -1 ರಲ್ಲಿ ವಿವೇಕಾನಂದ ಪದವಿ ಪೂರ್ವಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆಯನ್ನು ಮಾಡಿರುತ್ತಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು


ಕಲಾ ವಿಭಾಗದಲ್ಲಿ ಪುರೋಹಿತ ಖುಷಿಬೆನ್‌ರಾಜೇಂದ್ರಕುಮಾರ್ (ಉಪ್ಪಿನಂಗಡಿಯರಾಜೇಂದ್ರಕುಮಾರ್ ಹಾಗೂ ಮನೀಷಾಬೆನ್‌ಇವರ ಪುತ್ರಿ) ಇವರು 594 ಅಂಕಗಳನ್ನು ಗಳಿಸಿಕೊಳ್ಳುವುದರ ಮೂಲಕ ಕಾಲೇಜಿಗೆ ಪ್ರಥಮ ಸ್ಥಾನಿಯಾಗಿದ್ದಾರೆ ಹಾಗೂ ರಾಜ್ಯಕ್ಕೆತೃತೀರ‍್ಯಾಂಕ್ ಗಳಿಸಿರುತ್ತಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವಿಜ್ಞಾನ ವಿಭಾಗದಲ್ಲಿ ನೇತ್ರಾ ಡಿ. (ಬಂಟ್ವಾಳದ ಅರುಣ್‌ಕುಮಾರ್ ಹಾಗೂ ವಿಜಯಾ ಡಿ. ಇವರ ಪುತ್ರಿ) 592 ಅಂಕಗಳನ್ನು ಗಳಿಸಿ ರಾಜ್ಯಕ್ಕೆ 6ನೇ ರ‍್ಯಾಂಕ್ ಗಳಿಸಿರುತ್ತಾರೆ.
ವಾಣಿಜ್ಯ ವಿಭಾಗದ ವರ್ಷಾ ಪ್ರಕಾಶ್ (ತುಮಕೂರಿನ ಕೆ.ಎಸ್.ಪ್ರಕಾಶ್ ಹಾಗೂ ಟಿ.ಎಲ್. ನಳಿನಾ ಇವರ ಪುತ್ರಿ) ಇವರು 588 ಅಂಕಗಳನ್ನು ಗಳಿಸಿರುತ್ತಾರೆ.

ವಿಜ್ಞಾನ ವಿಭಾಗದಲ್ಲಿ ಗಮನ ಗೌರಿಎಸ್.ಎಮ್. (ಬೆಳ್ತಂಗಡಿಯ ಮಹೇಶ್‌ಎಸ್ ಹಾಗೂ ದೀಪಾ ಇವರ ಪುತ್ರಿ) 591 ಅಂಕಗಳನ್ನು ಗಳಿಸಿರುತ್ತಾರೆ ಹಾಗೂ ತನುಷ್ (ಪುತ್ತೂರಿನ ಹರೀಶ್ ನಾೈಕ್ ಹಾಗೂ ಅನಿತಾಇವರು ಪುತ್ರ), ನಿಶ್ಚಯ್‌ರೈ (ಕಡಬದಉಮೇಶ್‌ರೈ ಹಾಗೂ ಸುನೀತಾರೈಇವರ ಪುತ್ರ) 590 ಅಂಕಗಳನ್ನು ಗಳಿಸಿರುತ್ತಾರೆ.

ಕಲಾ ವಿಭಾಗದಲ್ಲಿ ಅನಿಕಾ ರಶ್ಮಿ ಕೃಷ್ಣ (ಪುತ್ತೂರಿನಅರುಣ್ ಕೃಷ್ಣ ಹಾಗೂ ರುಚಿತಾ ಕೃಷ್ಣ ಇವರ ಪುತ್ರಿ) 588 ಅಂಕಗಳನ್ನು ಗಳಿಸಿರುತ್ತಾರೆ ಹಾಗೂ ವೈಷ್ಣವಿ(ಬಂಟ್ವಾಳದ ರಮೇಶ್‌ಚಂದ್ರಎನ್. ಎಸ್ ಹಾಗೂ ಪಿ.ಪ್ರೇಮಲತಾಇವರ ಪುತ್ರಿ) , 587 ಅಂಕಗಳನ್ನು ಗಳಿಸಿರುತ್ತಾರೆ.

ವಾಣಿಜ್ಯ ವಿಭಾಗದಲ್ಲಿ ಮಹೇಂದ್ರಗೋಪಾಲ್ ವಿಭಾಸ್ ಕೆ. (ಪುತ್ತೂರಿನ ಪ್ರಸಾದ್ ಕೆ.ವಿ.ಎಲ್.ಎನ್ ಹಾಗೂ ಅನುಪಮಾಎಸ್. ಇವರ ಪುತ್ರ), ಕೆ.ಪ್ರಜ್ಞೇಶ್‌ಆಚಾರ್ಯ ( ಬಂಟ್ವಾಳದ ಕೆ.ರಮೇಶ್‌ಆಚಾರ್ಯ ಹಾಗೂ ಆಶಾ ಆಚಾರ್ಯಇವರ ಪುತ್ರಿ) ರಿತೀಕ್ಷಾ ಬಿ. (ಪೆರ್ಲದ ಸುಬ್ಬಣ್ಣ ಪೂಜಾರಿ ಹಾಗೂ ರುಕ್ಮಿಣಿಇವರ ಪುತ್ರಿ), ರಕ್ಷಾಎಮ್. (ಬಂಟ್ವಾಳದ ಮೋಹನ್ ನಾಯಕ್ ಹಾಗೂ ಜಯಲಕ್ಷಿ್ಮಇವರ ಪುತ್ರಿ )587 ಅಂಕಗಳನ್ನು ಗಳಿಸಿರುತ್ತಾರೆ.ನಿಶ್ಮಿತಾ (ಬಂಟ್ವಾಳದ ಮಂಜಪ್ಪ ಮೂಲ್ಯ ಮತ್ತುಉಮಾವತಿಇವರ ಪುತ್ರಿ) 586 ಅಂಕಗಳನ್ನು ಗಳಿಸಿರುತ್ತಾರೆ.

ವಿಜ್ಞಾನ ವಿಭಾಗದಲ್ಲಿ 327 ವಿದ್ಯಾರ್ಥಿಗಳುಉನ್ನತ ಶ್ರೇಣಿ ಹಾಗೂ 218 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, ವಾಣಿಜ್ಯ ವಿಭಾಗದಲ್ಲಿ 130 ವಿದ್ಯಾರ್ಥಿಗಳುಉನ್ನತ ಶ್ರೇಣಿ ಹಾಗೂ 62ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, ಕಲಾ ವಿಭಾಗದಲ್ಲಿ 25ವಿದ್ಯಾರ್ಥಿಗಳುಉನ್ನತ ಶ್ರೇಣಿ ಹಾಗೂ 11ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿಉತ್ತೀರ್ಣರಾಗಿರುತ್ತಾರೆ.ಒಟ್ಟು 482 ಉನ್ನತ ಶ್ರೇಣಿ ಲಭಿಸಿರುತ್ತದೆ.

ವಿಜ್ಞಾನ ವಿಭಾಗದಲ್ಲಿ 560 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 550 ವಿದ್ಯಾರ್ಥಿಗಳುಉತ್ತೀರ್ಣರಾಗಿದ್ದು 98.21% ಫಲಿತಾಂಶದಾಖಲಾಗಿರುತ್ತದೆ.ವಾಣಿಜ್ಯ ವಿಭಾಗದಲ್ಲಿ 241 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು237 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು98.34% ಫಲಿತಾಂಶದಾಖಲಾಗಿರುತ್ತದೆ. ಕಲಾ ವಿಭಾಗದಲ್ಲಿ 38 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದುಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು100% ಫಲಿತಾಂಶದಾಖಲಾಗಿರುತ್ತದೆ.
ಎಲ್ಲಾ ವಿದ್ಯಾರ್ಥಿಗಳಿಗೆ ಕಾಲೇಜು ಆಡಳಿತಮಂಡಳಿ, ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಅಭಿನಂದನೆಗಳನ್ನು ತಿಳಿಸಿರುತ್ತಾರೆ.