Recent Posts

Sunday, January 19, 2025
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಬಂಟ್ವಾಳದ ಉಳಿ ಗ್ರಾಮದಲ್ಲಿ ಮತದಾರರ ಮನೆಗೆ ಬೇಟಿ ನೀಡಿ ಮತಯಾಚನೆ ನಡೆಸಿದ ಶಾಸಕ – ಕಹಳೆ ನ್ಯೂಸ್

ಬಂಟ್ವಾಳ: ಲೋಕ ಸಭಾ ಚುನಾವಣೆಯ ಹಿನ್ನಲೆಯಲ್ಲಿ ಕ್ಯಾ.ಬ್ರಿಜೇಶ್ ಚೌಟ ಅವರ ಗೆಲುವಿಗಾಗಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಗ್ರಾಮ,ಮನೆ,ಮನ ಅಭಿಯಾನದ ಅಂಗವಾಗಿ ಬಂಟ್ವಾಳದ ಉಳಿ ಗ್ರಾಮದಲ್ಲಿ ಮತದಾರರ ಮನೆಗೆ ಬೇಟಿ ನೀಡಿ ಮತಯಾಚನೆ ನಡೆಸಿದರು.

ಲೋಕಸಭಾ ಅಭ್ಯರ್ಥಿಯ ಪರಿಚಯ ಪತೃ, ಹಾಗೂ ಮೋದಿ ಸರಕಾರದ ಅವಧಿಯಲ್ಲಿ ನಡೆಸಲಾದ ಯೋಜನೆಗಳ ಮಾಹಿತಿ ಕರಪತ್ರವನ್ನು ಮತದಾರರಿಗೆ ನೀಡಿದರು. ಎ. 14 ರಂದು ಮಂಗಳೂರಿನಲ್ಲಿ ನಡೆಯಲಿರುವ ಚುನಾವಣಾ ಪ್ರಚಾರ ಸಭೆಗೆ ನರೇಂದ್ರ ಮೋದಿಯವರು ಆಗಮಿಸಲಿದ್ದು, ಈ ಕಾರ್ಯಕ್ರಮಕ್ಕೆ ಬಂಟ್ವಾಳ ವಿಧಾನಸಭಾ ಕ್ಷೇತ್ರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗುವಂತೆ ಮನವಿ ಮಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಬಳಿಕ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು ಜಗತ್ತುನ್ನು ನಂ.1 ನೇ ಸ್ಥಾನಕ್ಕೆ ತರುವ ಮೋದಿಯವರ ಮಹತ್ವಾಕಾಂಕ್ಷೆಯ ಕನಸಿಗೆ ಬೆಂಬಲ ನೀಡಬೇಕಾಗಿದೆ. ಮುಂದಿನ ಹಲವಾರು ವರ್ಷಗಳ ಕಾಲ ದೇಶವನ್ನು ಬಿಜೆಪಿ ಆಡಳಿತ ನಡೆಸಲಿದ್ದು, ಬಿಜೆಪಿಯ ಎಲ್ಲಾ ಅಜೆಂಡಾಗಳು ಸಾಕಾರಗೊಳ್ಳಲಿದೆ ಎಂದು ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಹಲವಾರು ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಬಹುಮತದಲ್ಲಿ ಬಿಜೆಪಿ ಅಭ್ಯರ್ಥಿಗಳು ಲೋಕಸಭೆಯನ್ನು ಪ್ರವೇಶ ಮಾಡಬೇಕು ಎಂಬ ಚಿಂತನೆಗೆ ನಾವು ಜೊತೆಯಾಗಬೇಕಿದೆ ಎಂದು ತಿಳಿಸಿದರು. ಪ್ರಧಾನಿ ಮೋದಿಯವರು ಕೇವಲ ವ್ಯಕ್ತಿಯಲ್ಲ ಒಬ್ಬ ಶಕ್ತಿಯಾಗಿದ್ದು, ಅವರನ್ನು ಪಡೆದಿರುವ ಭಾರತದ ಜನತೆ ನಿಜಕ್ಕೂ ಧನ್ಯರು.ಅಂತಹ ಮಹಾನ್ ವ್ಯಕ್ತಿಯ ಆಡಳಿತ ಅವಧಿಯಲ್ಲಿ ನಾವಿದ್ದೇವೆ ಎಂಬುದು ಸಂತಸದ ವಿಚಾರವಾಗಿದೆ.

ಪ್ರತಿ ಗ್ರಾಮ ರಾಮರಾಜ್ಯವಾಗಬೇಕು ಎಂಬ ಚಿಂತನೆಯ ಆಧಾರದ ಮೇಲೆ ಬಿಜೆಪಿ ಕಾರ್ಯಕರ್ತರು ಒಂದಾಗಿ ಕೆಲಸ ಮಾಡಬೇಕಾಗಿದೆ ,ಇದು ಆಯೋಧ್ಯೆ ರಾಮನ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಕಲ್ಪನೆಯಾಗಿದೆ ಎಂದು ತಿಳಿಸಿದರು. ವೈಯಕ್ತಿಕ ಯಾವುದೇ ವಿಚಾರಗಳಿದ್ದರೆ ಅದನ್ನು ಪಕ್ಷಕ್ಕೆ ತರಬೇಡಿ, ದೇಶದ ಭವಿಷ್ಯದ ದೃಷ್ಟಿಯಿಂದ ಕಾರ್ಯಕರ್ತರು ಒಗ್ಗಟ್ಟಿನ ಆಧಾರದಲ್ಲಿ ಲೋಕಸಭಾ ಚುನಾವಣೆಯಲ್ಲಿ ಕೆಲಸ ಮಾಡಿ ಎಂದು ಅವರು ಮನವಿ ಮಾಡಿದರು.
ಹರಿಕೃಷ್ಣ ಬಂಟ್ವಾಳ ಮಾತನಾಡಿ, ದೇಶದ ಸಂಸ್ಕøತಿ,ಪರಂಪರೆಯನ್ನು ಉಳಿಸಿಕೊಂಡು ಅಭಿವೃದ್ಧಿಯನ್ನು ಮಾಡಿದ್ದು ಪ್ರಧಾನಿ ನರೇಂದ್ರ ಮೋದಿಯವರು. ಭಯೋತ್ಪಾದನಾ ಶಕ್ತಿಗಳಿಗೆ ಬೆಂಬಲ ನೀಡುವ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಬೇಡಿ, ಕಾಂಗ್ರೆಸ್ ಜಾತಿ ಜಾತಿಗಳ ಮಧ್ಯೆ ಸಂಘರ್ಷ ಉಂಟು ಮಾಡಿ ಮತ ಪಡೆಯಲು ಮುಂದಾಗಿದೆ. ಇದು ರಾಷ್ಟ್ರೀಯ ವಿಚಾರಗಳಿಗೆ ಸಂಬಂಧಿಸಿದಂತೆ ನಡೆಯುವ ಚುನಾವಣಾ ಇದಾಗಿದ್ದು, ಮತದಾರರು ಗೊಂದಲಕ್ಕೆ ಅವಕಾಶ ಕೊಡದೆ ಜಿಲ್ಲೆಯ ಅಭಿವೃದ್ಧಿಗಾಗಿ ಬ್ರಿಜೇಶ್ ಚೌಟ ಅವರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸಿಕೊಡಿ ಎಂದು ಮನವಿ ಮಾಡಿದರು.

ದೇಶಕ್ಕೆ ಸ್ವಾತಂತ್ರ್ಯ ಹೋರಾಟ ಮಾಡಿದ, ಸಂಸ್ಕೃತಿಗಾಗಿ ಹೋರಾಡಿದ ಮಹನೀಯರ ಬಗ್ಗೆ ಯುವಸಮುದಾಯಕ್ಕೆ ತಿಳಿಸುವ ಕಾರ್ಯ ಆಗಬೇಕು ಎಂದು ಅವರು ತಿಳಿಸಿದರು.

ಜಿ.ಪಂಮಾಜಿ ಸದಸ್ಯ ಎಂ.ತುಂಗಪ್ಪ ಬಂಗೇರ ಮಾತನಾಡಿ, ಮೋದಿ ಪ್ರಧಾನಿಯಾದ ಬಳಿಕ ಹಿಂದೂ ಸಮಾಜಕ್ಕೆ ಗೌರವ ಬಂದಿದೆ. ಮುಂದಿನ ದಿನಗಳಲ್ಲಿ ತಾಲೂಕಿನ ಪ್ರತಿಯೊಂದು ಮನೆ ಮತ್ತು ಮನ ಬಿಜೆಪಿಯಾಗಬೇಕು, ಹಿಂದುತ್ವದ ಮನೆಯಾಗಬೇಕು ಎಂದು ಮನವಿ ಮಾಡಿದರು.
ಉಳಿ ಗ್ರಾಮಪಂಚಾಯತ್ ಅಧ್ಯಕ್ಷೆ ರೇವತಿ ಮುದಲಾಡಿ, ಉಪಾಧ್ಯಕ್ಷ ವಸಂತ್ ರಾಮನಗರ, ಸದಸ್ಯರಾದ ಸುರೇಶ್ ಮೈರ, ಚೇತನ್ ಊರ್ದೊಟ್ಟು, ಶಾರದಾ ಕೊಡಂಗೆ, ಪ್ರಮುಖರಾದ ವಸಂತ ಗೌಡ ಅಗ್ಪಲ, ಶಾಂತಪ್ಪಗೌಡ ಪಿಲಿಬೈಲು, ಚಂದ್ರಪೂಜಾರಿ ಜಾರಿಗೆ, ಶಿವಾನಂದ ಕಜೆಕೋಡಿ, ಸುಂದರ ಗೌಡ ಅಗ್ಪಲ, ವಿಶ್ವನಾಥ ನಾಯ್ಕ್,ರೋಹಿನಾಥ ಕಕ್ಯೆಪದವು, ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ದಿನೇಶ್ ಶೆಟ್ಟಿ ದಂಬೆದಾರ್, ಶಕ್ತಿ ಕೇಂದ್ರದ ಅಧ್ಯಕ್ಷ ಚಿದಾನಂದ ರೈ ಕಕ್ಯ,ಯಶೋಧರ ಶೆಟ್ಟಿ ದಂಡೆ,ಹರೀಶ್ ಪ್ರಭು, ಮತ್ತಿತರರು ಉಪಸ್ಥಿತರಿದ್ದರು.

ಬಿಜೆಪಿಯ ಚುನಾವಣಾ ಪ್ರಚಾರದ ವೇಳೆ ಕಾರ್ಯಕರ್ತರು ಕೇಸರಿ ಶಾಲು ಧರಿಸಿ ಪ್ರಧಾನಿ ಮೋದಿಯವರ ಭಾವಚಿತ್ರದ ಬನಿಯಾನ್ ಧರಿಸಿದ್ದು ವಿಶೇಷ ಆಕರ್ಷಣೆಯಾಗಿತ್ತು.