Saturday, November 23, 2024
ದಕ್ಷಿಣ ಕನ್ನಡಪುತ್ತೂರುಶಿಕ್ಷಣಸುದ್ದಿ

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿರಾಜ್ಯಕ್ಕೆ 10ನೇ ಸ್ಥಾನ ಪಡೆದ ನರೇಂದ್ರ ಪ.ಪೂ. ಕಾಲೇಜಿನ ವಿದ್ಯಾರ್ಥಿನಿ ಭೂಮಿಕಾ ಜಿ. ಇವರಿಗೆ ಸನ್ಮಾನ – ಕಹಳೆ ನ್ಯೂಸ್

ಪುತ್ತೂರು : 2024 ರ ಮಾರ್ಚ್ನಲ್ಲಿ ನಡೆದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು,ತೆoಕಿಲ ನರೇಂದ್ರ ಪ.ಪೂ.ಕಾಲೇಜಿನ ವಾಣಿಜ್ಯ ವಿಭಾಗದಕು, ಭೂಮಿಕಾ ಜಿ.589(98.16%)ಅಂಕಗಳನ್ನು ಗಳಿಸಿ ರಾಜ್ಯದಲ್ಲಿ ಹತ್ತನೇ ಸ್ಥಾನ ಪಡೆದುಕೊಂಡಿದ್ದಾರೆ.ಪುತ್ತೂರು ತಾಲೂಕಿಗೆ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಭೂಮಿಕಾ ಜಿ. ಇವರು ಲೆಕ್ಕಶಾಸ್ತç-98,ಅರ್ಥಶಾಸ್ತç-97,ಸಂಸ್ಕೃತ-100,ಮೂಲಗಣಿತ-100,ವ್ಯವಹಾರ ಅಧ್ಯಯನ-98,ಇಂಗ್ಲಿಷ್-96 ಅಂಕಗಳೊAದಿಗೆ ಅತ್ಯುತ್ತಮ ಸಾಧನೆಯನ್ನು ಮಾಡಿರುವುದರ ಜೊತೆಗೆ ರಾಜ್ಯಕ್ಕೆ ಹತ್ತನೇ ಸ್ಥಾನವನ್ನು ಪಡೆದಿರುತ್ತಾರೆ.ಈಕೆ ಪುತ್ತೂರಿನ ಹಾರಾಡಿ ನಿವಾಸಿಗಳಾದ ಗಣೇಶ್ ಆಚಾರ್ಯ ಮತ್ತು ಚಂದ್ರಕಲಾ ಜಿ. ದಂಪತಿಗಳ ಪುತ್ರಿ.ವಿಜ್ಞಾನ ವಿಭಾಗದಲ್ಲಿ ಕು. ಸಂಜನಾ ಸತೀಶ ಕಲ್ಲೂರಾಯ 585(97.5) ಇವರು ಭೌತಶಾಸ್ತç-96, ರಸಾಯನಶಾಸ್ತç-97, ಗಣಿತ-95,ಗಣಕ ವಿಜ್ಞಾನ -100,ಸಂಸ್ಕೃತ-100,ಇAಗ್ಲಿಷ್-97 ಅಂಕಗಳನ್ನು ಗಳಿಸಿಅತ್ಯುತ್ತಮ ಸಾಧನೆಯನ್ನು ಮಾಡಿರುತ್ತಾರೆ.ಈಕೆ ಪುತ್ತೂರಿನಕುಂಜೂರುಪAಜ ನಿವಾಸಿಗಳಾದ ಸತೀಶ ಕಲ್ಲೂರಾಯ ಮತ್ತು ಶ್ರೀಮತಿ ರೂಪಶ್ರೀ ದಂಪತಿಗಳ ಪುತ್ರಿ.ಇವರನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು .

ಈ ಸಮಾರಂಭದಲ್ಲಿ ಪುತ್ತೂರಿನವಿವೇಕಾನಂದ ವಿದ್ಯಾವರ್ಧಕ ಸಂಘದ ಕೋಶಾಧಿಕಾರಿಗಳಾದ ಅಚ್ಯುತ ನಾಯಕ್ ಇವರು ಸನ್ಮಾನಿಸಿ ಶುಭಹಾರೈಸಿದರು,ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಕಾಂತ ಕೊಳತ್ತಾಯ,ಸಂಚಾಲಕರಾದ ಸಂತೋಷ ಬಿ.,ಸದಸ್ಯರಾದ ಸಂಪತ್ ಕುಮಾರ್,ಪ್ರಾಂಶುಪಾಲರಾದ ಪ್ರಸಾದ್ ಶ್ಯಾನಭಾಗ್ ,ಉಪನ್ಯಾಸಕರು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದು, ವಿದ್ಯಾರ್ಥಿನಿಯರಾದ ಕು. ಭೂಮಿಕಾ ಜಿ. ಮತ್ತು ಸಂಜನಾ ಸತೀಶ ಕಲ್ಲೂರಾಯ ಅವರನ್ನು ಅಭಿನಂದಿಸಿ ಅವರ ಉಜ್ವಲ ಭವಿಷ್ಯಕ್ಕೆ ಶುಭಹಾರೈಸಿದರು.