Recent Posts

Monday, January 20, 2025
ಸುದ್ದಿ

ಪುತ್ತೂರಿನಲ್ಲಿ ದಿ ವಿಲನ್ ಚಿತ್ರ ಪ್ರದರ್ಶನದ ವೇಳೆ ಚಿತ್ರಮಂದಿರಕ್ಕೆ ನುಗ್ಗಿ ದಾಂದಲೆ – ಕಹಳೆ ನ್ಯೂಸ್

ಪುತ್ತೂರು: ಪುತ್ತೂರಿನ ಅರುಣಾ ಚಿತ್ರಮಂದಿರದಲ್ಲಿ ಚಿತ್ರ ನಟರಾದ ಸುದೀಪ್ ಮತ್ತು ಶಿವರಾಜ್ ಕುಮಾರ್ ನಟಿಸಿರುವ ಕನ್ನಡ ಚಲನ ಚಿತ್ರ ದಿ ವಿಲನ್ ಚಿತ್ರ ಪ್ರದರ್ಶನದ ವೇಳೆ ತಂಡವೊಂದು ಚಿತ್ರಮಂದಿರಕ್ಕೆ ನುಗ್ಗಿ ದಾಂದಲೆ ನಡೆಸಿ ಹಾನಿಯುಂಟು ಮಾಡಿದ ಘಟನೆ ನಡೆದಿದೆ.

ದಿ.ವಿಲನ್ ಚಿತ್ರಕ್ಕೆ ಸಂಬಂಧಿಸಿ ದಾವಣೆಗೆರೆಯಲ್ಲಿ ಹಿಂಸಾತ್ಮಕ ರೀತಿಯಲ್ಲಿ ಪ್ರಾಣಿ ಬಲಿ ಮಾಡಿದ ಹಿನ್ನೆಲೆಯಲ್ಲಿ ಚಿತ್ರ ಪ್ರದರ್ಶನವನ್ನು ನಿಲ್ಲಿಸಬೇಕೆಂದು ಗಲಾಟೆ ದೊಂಬಿ ಮಾಡಿ ಅಕ್ರಮ ಕೂಟ ಕಟ್ಟಿಕೊಂಡು ಚಿತ್ರಮಂದಿರಕ್ಕೆ ಸೊಡಾ ಬಾಟಲಿ ಎಸೆದು ಚಿತ್ರ ಪ್ರದರ್ಶನ ಪ್ರಚಾರದ ಬ್ಯಾರ‍್ನ್ನು ಹರಿದು ಹಾಕಿದ್ದಾರೆ ಎಂದು ಚಿತ್ರಮಂದಿರವನ್ನು ನಡೆಸಿಕೊಂಡು ಬರುತ್ತಿರುವ ನವೀನ್ ಅವರು ಪುತ್ತೂರು ನಗರ ಪೊಲೀಸರಿಗೆ ದೂರು ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು