45 ವಿದ್ಯಾರ್ಥಿಗಳಿಗೆ ರಾಜ್ಯದ ಟಾಪ್ 10 ಸ್ಥಾನ, 682 ವಿದ್ಯಾರ್ಥಿಗಳು ಶೇಕಡಾ 95ಕ್ಕಿಂತ ಅಧಿಕ ಅಂಕ : ಪಿಯುಸಿ ಇತಿಹಾಸದಲ್ಲಿ ಆಳ್ವಾಸ್ ಸಾರ್ವತ್ರಿಕ ದಾಖಲೆ – ಕಹಳೆ ನ್ಯೂಸ್
ಮೂಡುಬಿದಿರೆ: ಕರ್ನಾಟಕ ರಾಜ್ಯ ಪದವಿ ಪೂರ್ವ ಶಿಕ್ಷಣದ ಇತಿಹಾಸದಲ್ಲೇ ಆಳ್ವಾಸ್ ಪದವಿ ಪೂರ್ವ ಕಾಲೇಜಿನ 682 ವಿದ್ಯಾರ್ಥಿಗಳು 95% ಶೇಕಡಾಕ್ಕಿಂತ ಅಧಿಕ ಅಂಕವನ್ನು ಪಡೆದು ಹೊಸ ದಾಖಲೆ ನಿರ್ಮಿಸಿದ್ದಾರೆ. ರಾಜ್ಯದ ಟಾಪ್ ಟೆನ್ ರ‍್ಯಾಂಕ್‌ನಲ್ಲಿ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ ಒಟ್ಟು 45 ವಿದ್ಯಾರ್ಥಿಗಳು ಸ್ಥಾನವನ್ನು ಪಡೆಯುವ ಮೂಲಕ ಆಳ್ವಾಸ್ ಸಂಸ್ಥೆಯು ಶೈಕ್ಷಣಿಕ ಕ್ಷೇತ್ರದಲ್ಲಿ ಮಹತ್ಸಾಧನೆ ಮೆರೆಯುವಂತೆ ಮಾಡಿದೆ.
ವಿಜ್ಞಾನ ವಿಭಾಗದಲ್ಲಿ ನೂತನ ಆರ್ ಗೌಡ, 600ರಲ್ಲಿ 595ಅಂಕ ಪಡೆದು ರಾಜ್ಯಕ್ಕೆ 4ನೇ ಸ್ಥಾನ ಪಡೆದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ತರುಣ್ ಕುಮಾರ್ ಪಾಟೀಲ್ 594ಅಂಕ ಪಡೆದು 4ನೇ ಸ್ಥಾನ ಪಡೆದಿದ್ದಾರೆ. ಆಕಾಶ್ ಪಿಎಸ್, ಅನಿರುದ್ಧ ಪಿ ಮೆನನ್, ಸುಮಿತ್ ಸುದೀಂದ್ರ 4ನೇ ರ‍್ಯಾಂಕ್ ಗಳಿಸಿದರೆ, ಸಹನಾ ಕೆ, ಶಿವಷೇಶ 6ನೇ ರ‍್ಯಾಂಕ್, ವಾಣಿ ಕೆ, ಮೇಧಾ ವಿ, ಜೀವಿಕಾ ಎಸ್, ಹರೀಶ್ ಉದಯ್, ಭೂಮಿ, ಷಾನ್ ಪಿಂಟೋ, ಅಶೋಕ್ ಸುತಾರ್, ಮಂಜುನಾಥ್ ಡಿ. 7ನೇ ರ‍್ಯಾಂಕ್ ಪಡೆದ ವಿದ್ಯಾರ್ಥಿಗಳಾಗಿದ್ದಾರೆ.
29ವಿದ್ಯಾರ್ಥಿಗಳು 98.33%ಕ್ಕೂ ಅಧಿಕ, 56 ವಿದ್ಯಾರ್ಥಿಗಳು 98%ಕ್ಕೂ ಅಧಿಕ ಫಲಿತಾಂಶ ಪಡೆದಿದ್ದು, 682ವಿದ್ಯಾರ್ಥಿಗಳು 95% ಕ್ಕಿಂತಲೂ ಅಧಿಕ, 2027 ವಿದ್ಯಾರ್ಥಿಗಳು 90%ಕ್ಕಿಂತಲೂ ಅಧಿಕ, 2882 ವಿದ್ಯಾರ್ಥಿಗಳು 85% ಕ್ಕೂ ಅಧಿಕ ಅಂಕಗಳನ್ನು ಗಳಿಸಿದ್ದಾರೆ. ಕನ್ನಡ ವಿಷಯದಲ್ಲಿ 22, ಸಂಸ್ಕೃತದಲ್ಲಿ 54, ಬೌತಶಾಸ್ತ್ರದಲ್ಲಿ 9, ರಸಾಯನ ಶಾಸ್ತ್ರದಲ್ಲಿ 81, ಗಣಿತದಲ್ಲಿ 232, ಜೀವಶಾಸ್ತ್ರದಲಿ 290, ಗಣಕ ವಿಜ್ಞಾನದಲ್ಲಿ 39, ಅಕೌಂಟೆನ್ಸಿ-53, ಸಂಖ್ಯಾಶಾಸ್ತ್ರದಲ್ಲಿ 07, ಇಲೆಕ್ಟ್ರಾನಿಕ್ಸ್ ನಲ್ಲಿ 4, ಅರ್ಥಶಾಸ್ತ್ರದಲ್ಲಿ 35, ಬ್ಯುಸಿನೆಸ್ ಸ್ಟಡೀಸ್ ನಲ್ಲಿ 09, ಬೇಸಿಕ್ ಮ್ಯಾತ್ಸ್ ನಲ್ಲಿ 27, ಸಮಾಜಶಾಸ್ತ್ರದಲ್ಲಿ 2, ರಾಜ್ಯಶಾಸ್ತçದಲ್ಲಿ 2 ವಿದ್ಯಾರ್ಥಿಗಳು 100ಕ್ಕೆ ನೂರು ಅಂಕಗಳನ್ನು ಗಳಿಸಿದ್ದಾರೆ.
4 ವಿಷಯಗಳಲ್ಲಿ ನೂರಕ್ಕೆ ನೂರು ಅಂಕವನ್ನು 9 ವಿದ್ಯಾಥಿಗಳು ಪಡೆದರೆ, 3 ವಿಷಯಗಳಲ್ಲಿ ನೂರಕ್ಕೆ ನೂರು 38 ವಿದ್ಯಾರ್ಥಿಗಳು, 2 ವಿಷಯಗಳಲ್ಲಿ 148 ವಿದ್ಯಾಥಿಗಳು ನೂರಕ್ಕೆ ನೂರು ಅಂಕವನ್ನು ಪಡೆದರೆ, ಒಂದು ವಿಷಯದಲ್ಲಿ 571ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕವನ್ನು ಪಡೆದಿದ್ದಾರೆ. ಆಳ್ವಾಸ್ ಪದವಿಪೂರ್ವ ಕಾಲೇಜಿನ 5 ಜನ ವಿಶೇಷಚೇತನ ವಿದ್ಯಾರ್ಥಿಗಳು ದ್ವಿತೀಯ ಪಿಯು ಪರೀಕ್ಷೆಯಲ್ಲಿ ಉತ್ತಮ ಅಂಕವನ್ನು ಪಡೆದು ಸಾಧನೆ ಮೆರೆದಿದ್ದಾರೆ. ಈ ಸಂದರ್ಭದಲ್ಲಿ ಪ್ರಾಂಶುಪಾಲ ಪ್ರೊ. ಎಂ. ಸದಾಕತ್, ಕಾಮರ್ಸ್ ವಿಭಾಗದ ಡೀನ್ ಪ್ರಶಾಂತ್ ಎಂ. ಡಿ, ಉಪಸ್ಥಿತರಿದ್ದರು.