Friday, September 20, 2024
ಸುದ್ದಿ

ನವೀಕರಣದ ಜೊತೆ ಹೊಸ ಫೀಚರ್‌ಗಳನ್ನು ಬಳಕೆದಾರರಿಗೆ ಪರಿಚಯಿಸಲಿರುವ ವಾಟ್ಸಾಪ್ – ಕಹಳೆ ನ್ಯೂಸ್

ಬೆಂಗಳೂರು: ಎಲ್ಲರ ಅಚ್ಚುಮೆಚ್ಚಿನ ವಾಟ್ಸಾಪ್, ಇದೀಗ ಖಾತೆಯನ್ನು ಇನ್ನಷ್ಟು ಸುರಕ್ಷಿತಗೊಳಿಸಲು ಮುಂದಾದ ವಾಟ್ಸಾಪ್ ಕೆಲ ದಿನಗಳಿಂದ ನವೀಕರಣದ ಜೊತೆ ಹೊಸ ಫೀಚರ್‌ಗಳನ್ನು ಬಳಕೆದಾರರಿಗೆ ಶೀಘ್ರದಲ್ಲಿಯೇ ಪರಿಚಯಿಸಲಿದೆ.

ಡಬ್ಲ್ಯೂ ಎ ಬೀಟಾ ಇನ್ಫೋ ಮಾಹಿತಿ ಪ್ರಕಾರ ವಾಟ್ಸಾಪ್ ಸದ್ಯವೇ ವಾಟ್ಸಾಪ್ ಟಚ್ ಐಡಿ ಹಾಗೂ ಫೇಸ್ ಐಡಿ ಫೀಚರ್ ಶುರು ಮಾಡ್ತಿದೆ. ವಾಟ್ಸಾಪ್‌ನ್ನು ಇನ್ನಷ್ಟು ಸುರಕ್ಷಿತಗೊಳಿಸಲು ಈ ಫೀಚರ್ ಶುರು ಮಾಡಲಾಗುತ್ತಿದ್ದು, ಹೊಸ ಫೀಚ ರ್ ಶುರುವಾದ ನಂತರ ವಾಟ್ಸಾಪ್ ಅಕೌಂಟನ್ನು ಬೇರೆಯವರು ಓಪನ್ ಮಾಡಲು ಸಾಧ್ಯವಿಲ್ಲ. ಗೌಪ್ಯತಾ ಸೆಟ್ಟಿಂಗ್ ಅಡಿಯಲ್ಲಿ ಈ ವೈಶಿಷ್ಟ್ಯಗಳು ಲಭ್ಯವಾಗಲಿದ್ದು, ನಿಮ್ಮ ಮುಖ ನೋಡಿದ್ರೆ ಮಾತ್ರ ವಾಟ್ಸಾಪ್ ಓಪನ್ ಆಗಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

ಬಳಕೆದಾರರು ವಾಟ್ಸಾಪ್ ಐಡಿ ಓಪನ್ ಮಾಡಲು ಫೇಸ್ ಐಡಿ ಹಾಗೂ ಟಚ್ ಐಡಿ ಇನ್ನೂ ಅನಿವಾರ್ಯವಾಗಲಿದೆ. ಟಚ್ ಐಡಿ 9 ಐಫೋನ್ ನಲ್ಲಿ ಲಭ್ಯವಿದ್ದು, ಸದ್ಯ ಐಫೋನ್ ಹಾಗೂ ಐಪ್ಯಾಡ್ ಮೇಲೆ ಪರೀಕ್ಷೆ ನಡೆಸಲಾಗಿದೆ.