Recent Posts

Thursday, November 21, 2024
ಕ್ರೈಮ್ದಕ್ಷಿಣ ಕನ್ನಡಪುತ್ತೂರುಸುದ್ದಿ

ಪುತ್ತೂರು: ವಾಹನ ತೆರಿಗೆ ಬಾಕಿ ಪ್ರಕರಣ ಆರೋಪಿ ದೋಷಮುಕ್ತ –ಕಹಳೆ ನ್ಯೂಸ್

ಪುತ್ತೂರು: ವಾಹನ ಸಂಖ್ಯೆ ಕೆ.ಎ-21-ಸಿ-4541 ಮಾಲಕರಾದ ಶ್ರೀ. ಹೆಚ್. ಮಧುಕರ್ ಆಚಾರ್ ರವರು ದಿನಾಂಕ. 01/12/2007 ರಿಂದ 28/02/2015 ರವರೆಗೆ ರೂ. 99,069/- ರೂಗಳನ್ನು ಸಾರಿಗೆ ಇಲಾಖೆಗೆ ತೆರಿಗೆ ಪಾವತಿ ಬಾಕಿ ಇದ್ದು ಅದನ್ನು ವಸೂಲಿ ಮಾಡಿಕೊಡಬೇಕೆಂದು ಕೋರಿ ಸಾರಿಗೆ ಇಲಾಖೆ ಪುತ್ತೂರು ಸಲ್ಲಿಸಿದ ಪ್ರಕರಣವೊಂದರಲ್ಲಿ ಆರೋಪಿಯೆನ್ನಲಾಗಿದ್ದ ಶ್ರೀ. ಹೆಚ್. ಮಧುಕರ್ ಎಂಬವರರನ್ನು ಪುತ್ತೂರಿನ ಮಾನ್ಯ ಹೆಚ್ಚುವರಿ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ರವರ ನ್ಯಾಯಾಧೀಶರಾದ ಶ್ರೀ. ಶಿವಣ್ಣ ಹೆಚ್ ಆರ್. ನಿರಪರಾದಿಯೆಂದು ಆದೇಶಿಸಿ ಬಿಡುಗಡೆಗೊಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಘಟನೆ ವಿವರ:
ಪುತ್ತೂರು ಪ್ರಾದೇಶಿಕ ಸಾರಿಗೆ ಅಧಿಕಾರಿಯವರ ಕಛೇರಿ ನಡಾವಳಿ ಸಂಖ್ಯೆ. 24/2007-08ರಂತೆ ದಿನಾಂಕ. 01/12/2007 ರಿಂದ 28/02/2015 ರವರೆಗೆ ಬಾಕಿ ತೆರಿಗೆ ರೂ. 99,069/- ರೂಗಳನ್ನು ಪಾವತಿಸುವಂತೆ ವಾಹನ ಸಂಖ್ಯೆ ಕೆ.ಎ-21-ಸಿ-4541 ಮಾಲಕರಾದ ಶ್ರೀ. ಹೆಚ್. ಮಧುಕರ್ ಆಚಾರ್ ರವರಿಗೆ ದಿನಾಂಕ 22/11/2014ರಂದು ತೆರಿಗೆ ತಗಾದೆ ನೋಟೀಸನ್ನು ನೀಡಿದ್ದು, ಸದ್ರಿ ನೋಟೀಸನ್ನು ಆರೋಪಿಯು ಸ್ವಿಕರಿಸಿರುತ್ತಾರೆ, ಸದ್ರಿ ನೋಟೀಸನ್ನು ಸ್ವಿಕರಿಸಿದ ನಂತರ 30 ದಿನಗಳೊಳಗೆ ಸಂಬAಧಪಟ್ಟ ಮೇಲ್ಮನವಿ ಪ್ರಾಧಿಕಾರಕ್ಕೆ ಅಂದರೆ ಜಂಟಿ ಸಾರಿಗೆ ಆಯುಕ್ತರು ಶಿವಮೊಗ್ಗ ಇವರಿಗೆ ಮೇಲ್ಮನವಿ ಸಲ್ಲಿಸಲು ಅವಕಾಶವಿದ್ದು ಸದ್ರಿ ಪ್ರಕರಣದಲ್ಲಿ ಆರೋಪಿಯು ಯಾವುದೇ ಮೇಲ್ಮನವಿಯನ್ನು ಸಲ್ಲಿಸಿಲ್ಲ ಎಂದು ಆರೋಪಿಸಿ ಹಾಗೂ ಸದ್ರಿ ತೆರಿಗೆ ವಸೂಲಾತಿಯನ್ನು ಕೋರಿ ಅಂದಿನ ಸಾರಿಗೆ ಆಯುಕ್ತರಾದ ಆನಂದ ಗೌಡ ರವರು ನ್ಯಾಯಾಲಯಕ್ಕೆ ವರದಿಯನ್ನು ಸಲ್ಲಿಸಿರುತ್ತಾರೆ. ಮುಂದುವರಿದು ದಿನಾಂಕ 01/12/2007 ರಿಂದ ತನ್ನ ವಾಹನವನ್ನು ನಿರುಪಯೋಗದಲ್ಲಿಡುವುದಾಗಿ ವಾಹನದ ಮಾಲೀಕನಾದ ಆರೋಪಿಯು ದಿನಾಂಕ 01/12/2007 ರಂದು ನಮೂನೆ-30 ಅರ್ಜಿ ಸಲ್ಲಿಸಿ ವಾಹನಕ್ಕೆ ಸಂಬAದಪಟ್ಟ ದಾಖಲೆಗಳನ್ನು ಆದ್ಯಾರ್ಪಣಗೊಳಿಸಿದ್ದು ಸದರಿ ವಾಹನವನ್ನು ಎಂ.ಎಸ್ ಶಬರಿ ಮೋಟರ್ ರ‍್ಕ್್ಸ, ಎನ್.ಹೆಚ್ 17 ಕೂಳೂರು, ಮಂಗಳೂರು ಎಂಬಲ್ಲಿ ನಿರುಪಯೋಗದಲ್ಲಿ ಇಡಲಾಗಿದೆ ಎಂದು ಅರ್ಜಿಯಲ್ಲಿ ಹೇಳಿಕೊಂಡಿದ್ದು, ಆ ಸಮಯದಲ್ಲಿ ದಿನಾಂಕ 17/12/2012ರಂದು ಪ್ರಾದೇಶಿಕ ಕಛೇರಿ ಮಂಗಳೂರು ಇವರು ಸಲ್ಲಿಸಿದ ವರದಿಯಲ್ಲಿ ಕೆ.ಎ.-21-ಸಿ-4541 ವಾಹಾನ ಶಬರಿ ಮೋಟಾರ್ ರ‍್ಕ್್ಸನಲ್ಲಿ ಇಲ್ಲ ಎಂದು ಸಲ್ಲಿಸಿದ್ದು.ಅದರಂತೇ ಷರತ್ತು ಉಲ್ಲಂಘನೆ ಮಾಡಲಾಗಿದೆ ಎಂಬಿತ್ಯಾದಿಯಾಗಿ ಆರೋಪಿಸಲಾಗಿತ್ತು. ಈ ಪ್ರಕರಣವನ್ನು ತನಿಖೆ ಕೈಗೆತ್ತಿಕೊಂಡ ಮಾನ್ಯ ನ್ಯಾಯಾಲಯವು ಅಬಿಯೋಜನ ಪರ ಸಾಕ್ಷ÷್ಯ ವಿಚಾರಣೆಯನ್ನು ಮಾಡಿ ಸುಮಾರು 3 ದಾಖಲೆಗಳನ್ನು ಮತ್ತು ಆರೋಪಿಯ ಪರ 5 ದಾಖಲೆಯನ್ನು ಗುರುತಿಸಿರುತ್ತಾರೆ. ನಂತರ ವಾದ-ವಿವಾದಗಳನ್ನು ಆಲಿಸಿದ ಮಾನ್ಯ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀ. ಶಿವಣ್ಣ ಹೆಚ್ ಆರ್. ರವರು ಸದ್ರಿ ಪ್ರಕರಣದಲ್ಲಿ ಆರೋಪಿಯು ವಾಹನವನ್ನು ಕಾನೂನುಬದ್ದವಾಗಿ ಆದ್ಯಾರ್ಪಣೆಗೊಳಿಸಿದ್ದು, ಸದ್ರಿ ವಾಹನವು ಆರೋಪಿಯ ಸ್ವಾಧೀನದಲ್ಲಿಯೇ ಇರಲಿಲ್ಲ ಎಂಬಿತ್ಯಾದಿ ಅಂಶಗಳನ್ನು ಪೂರಕವಾದ ಸಾಕ್ಷಾ÷್ಯಧಾರಗಳ ಹಿನ್ನಲೆಯಲ್ಲಿ ಪರಿಗಣಿಸಿ, ಪ್ರೋಸಿಕ್ಯೂಷನ್ ಈ ಪ್ರಕರಣವನ್ನು ಸ0ಶಯಾತೀತವಾಗಿ ಸಾಭೀತುಪಡಿಸಲು ವಿಫಲಗೊಂಡಿದೆ ಎ0ದೂ ತೀರ್ಮಾನಿಸಿ, ಆರೋಪಿಯನ್ನು ನಿರಪರಾದಿಯೆಂದು ಖುಲಾಸೆಗೊಳಿಸಿದೆ. ಆರೋಪಿಯ ಪರ ವಕೀಲರಾದ ಶ್ರೀ.ಮಹೇಶ್ ಕಜೆಯವರು÷ವಾದಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು