ಉಪ್ಪಿನಂಗಡಿ ಕರ್ವೇಲು ನಿವಾಸಿ ಹಕೀಂಗೆ ಕಾರಿನಲ್ಲಿ ಬಂದ ತಂಡದಿಂದ ಚೂರಿ ಇರಿತ – ಕಹಳೆ ನ್ಯೂಸ್
ಉಪ್ಪಿನಂಗಡಿ, ಏ 13 : ಕಾರಿನಲ್ಲಿ ಬಂದ ತಂಡವೊಂದು ಯುವಕನಿಗೆ ಚೂರಿ ಇರಿದು ಪರಾರಿಯಾದ ಘಟನೆ ಬಿಳಿಯೂರು ಗ್ರಾಮದ ಕರ್ವೇಲು ಬಳಿ ಎ.12ರಂದು ನಡೆದಿದೆ.
ಕರ್ವೇಲು ಜನತಾ ಕಾಲನಿ ನಿವಾಸಿ ಹಕೀಂ (34) ಚೂರಿ ಇರಿತಕ್ಕೆ ಒಳಗಾಗಿ, ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಕೀಂ ಕರ್ವೇಲು ಜಂಕ್ಷನ್ ಬಳಿ ನಿಂತಿದ್ದ ಸಮ್ದರ್ಭ ಅಲ್ಲಿಗೆ ಕಾರಿನಲ್ಲಿ ಬಂದ ತಂಡ ಚೂರಿಯಿಂದ ಇರಿದು ಪರಾರಿಯಾಗಿರುವುದಾಗಿ ದೂರಲಾಗಿದೆ.
ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.