Recent Posts

Monday, January 20, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ಜಾತ್ರೋತ್ಸವದಲ್ಲಿ ಸುಡು ಮದ್ದು ಪ್ರದರ್ಶನ, ರಥೋತ್ಸವ ಸಮಯ ಮೀರದಂತೆ ನಡೆಸುವಂತೆ ಮಹಾಲಿಂಗೇಶ್ವರ ಭಕ್ತಾದಿಗಳಿಂದ ಸಹಾಯಕ ಆಯುಕ್ತರಿಗೆ ಮನವಿ -ಕಹಳೆ ನ್ಯೂಸ್

ಪುತ್ತೂರು: ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವ ಸಂಧರ್ಭದಲ್ಲಿ ಅಂಗಡಿ, ಸಂತೆ ಇತ್ಯಾದಿಗಳನ್ನು ವ್ಯವಸ್ಥಿತವಾಗಿ ಆಯೋಜಿಸುವುದು, ಸುಡುಮದ್ದು ಪ್ರದರ್ಶನ ಮತ್ತು ರಥೋತ್ಸವವನ್ನು ನಿಶ್ಚಿತ ಸಮಯದಲ್ಲಿ ನಡೆಸುವಂತೆ ಶ್ರೀ ಮಹಾಲಿಂಗೇಶ್ವರ ದೇವರ ಭಕ್ತಾದಿಗಳು ಏ.12ರಂದು ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದರು.

ರಥೋತ್ಸವದ ದಿನ ಶ್ರೀ ದೇವರು ರಥಾರೋಹಣದ ವೀಕ್ಷಣೆಗೆ ಭಕ್ತಾದಿಗಳಿಗೆ ಅನುಕೂಲವಾಗುವಂತೆ ರಥಬೀದಿಯಿಂದ ಕನಿಷ್ಠ 75-80ಮೀಟರ್ ದೂರದಲ್ಲಿ ವ್ಯಾಪಾರ ಮಳಿಗೆಗಳನ್ನು ಅಳವಡಿಸುವುದು. ಸುಡುಮದ್ದು ಪ್ರದರ್ಶನವನ್ನು ಸಾಕಷ್ಟು ದೂರದ ಸುರಕ್ಷಿತ ಪ್ರದೇಶದಲ್ಲಿ ವ್ಯವಸ್ಥೆಗೊಳಿಸುವುದು, ರಥೋತ್ಸವವನ್ನು ಮುಹೂರ್ತ ಸಮಯ ಮೀರದಂತೆ ಹಾಗೂ ವಿಳಂಭವಾಗದAತೆ ಸಮಯ ನಿಗದಿಪಡಿಸುವುದು. ದೂರದ ಊರುಗಳಿಂದ ಆಗಮಿಸುವ ಭಕ್ತಾದಿಗಳಿಗೆ ಬಸ್ಸಿನ ಸೌಲಭ್ಯಗಳ ಬಗೆ ಸ್ಪಷ್ಟ ಮಾಹಿತಿಯನ್ನು ಧ್ವನಿವರ್ಧಕದ ಮೂಲಕ ಹಾಗೂ ಪತ್ರಿಕೆಗಳಲ್ಲಿ ಮುಂಚಿತವಾಗಿ ಮಾಹಿತಿ ನೀಡುವುದು, ಜಾತ್ರಾ ಗದ್ದೆಯಲ್ಲಿ ಅಂಗಡಿ, ಆಹಾರ ಮಳಿಗೆಗಳಲ್ಲಿ ಆಹಾರದ ಶುಚಿತ್ವ, ನೈರ್ಮಲ್ಯತೆ ಮತ್ತು ಆರೋಗ್ಯ ಸುರಕ್ಷತೆಯ ಬಗ್ಗೆ ಕಟ್ಟು ನಿಟ್ಟಿನ ನಿಗಾ ಮತ್ತು ಮೇಲ್ವಿಚಾರಣೆ ನಡೆಸುವ ಬಗ್ಗೆ ಆಹಾರ ಭದ್ರತಾ ಅಧಿಕಾರಿಗಳು ಅಥವಾ ಸಬಂಧಿಸಿದ ಆರೋಗ್ಯಾಧಿಕಾರಿಗಳು ಸೂಕ್ತ ಕ್ರಮ ವಹಿಸಲು ಆದೇಶ ನೀಡುವುದು. ಜಾತ್ರಾ ಗದ್ದೆಯಲ್ಲಿ ಶುದ್ಧ ಕುಡಿಯುವ ನೀರಿನ ಸೌಲಭ್ಯವನ್ನು ದೇವಸ್ಥಾನ ಅಥವಾ ನಗರ ಸಭೆ ಅಳವಡಿಸುವುದು ಹಾಗೂ ಸಾಂಕ್ರಾಮಿಕ ರೋಗಗಳು ಬರದಂತೆ ಅಗತ್ಯ ಕ್ರಮ ಕೈಗೊಳ್ಳಲು ಇಲಾಖೆಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಮನವಿಯಲ್ಲಿ ವಿನಂತಿಸಿದ್ದಾರೆ. ನ್ಯಾಯವಾದಿಗಳಾದ ಗಿರೀಶ್ ಮಳಿ, ನರಸಿಂಹ ಪ್ರಸಾದ್,ಕೃಷ್ಣ ನಾಯ್ಕ್ ತೆoಕಿಲ, ಕೃಷ್ಣಪ್ರಸಾದ್ ನಡ್ಸಾರ್, ಕೃಷ್ಣಪ್ಪ ಗೌಡ, ಬನ್ನೂರು ಗ್ರಾ.ಪಂ ಮಾಜಿ ಸದಸ್ಯ ಅಣ್ಣಿ ಪೂಜಾರಿ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು