Recent Posts

Sunday, January 19, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ಹೈವೇಯಲ್ಲಿರುವ ಅಪಾಯಕಾರಿ ತಿರುವು ತೆರವಿಗೆ ಶಾಸಕರ ಸೂಚನೆ : ಸೋಶಿಯಲ್ ಮೀಡಿಯಾದಲ್ಲಿ ಬಂದ‌‌ ಮನವಿಗೆ ಸ್ಪಂದಿಸಿದ ಶಾಸಕರು- ಕಹಳೆ ನ್ಯೂಸ್

ಪುತ್ತೂರು: ಮಾಣಿ – ಮೈಸೂರು ರಾ.ಹೆದ್ದಾರಿ 275ರ ಆರ್ಯಾಪು ಗ್ರಾಪಂ ವ್ಯಾಪ್ತಿಯ ಕಲ್ಲರ್ಪೆಯಲ್ಲಿ ಅಪಾಯಕಾರಿ ತಿರುವು ಇದ್ದು, ಅದನ್ನು ಶಾಸಕರಾದ ಅಶೋಕ್ ರೈ ವೀಕ್ಷಣೆ ಮಾಡಿದರು. ಈ ತಿರುವಿನಲ್ಲಿ ಅನೇಕ ವಾಹನ ಅಫಘಾತಗಳು ನಡೆದಿದ್ದು ಮೂವರು ಮೃತಪಟ್ಟ ಘಟನೆಯೂ ನಡೆದಿತ್ತು.

ಇಲ್ಲಿರುವ ಅಪಾಯಕಾರಿ ಧರೆಯನ್ನು ತೆರವು ಮಾಡಿ ವಾಹನ ಸಂಚಾರ ಗೋಚರಿಸುವಂತೆಬಮಾಡಬೇಕು ಎಂಬ ಆಗ್ರಹ ವ್ಯಕ್ತವಾಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ಶಾಸಕರಿಗೆ ಅನೇಕ ಮಂದಿ ಮನವಿ ಯನ್ನು ಮಾಡಿದ್ದರು.‌ಈ‌ಮನವಿಗೆ ಸ್ಪಂದಿಸಿದ ಶಾಸಕರು ಸ್ಥಳ ವೀಕ್ಷಣೆ ಮಾಡಿ ಅಫಾಯಕಾರಿ‌ಧರೆಯನ್ನು ತೆರವು‌ಮಾಡುವಂತೆ ರಾ. ಹೆದ್ದಾರಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಪ್ರಸಾದ್ ರವರಿಗೆ ಸೂಚನೆಯನ್ನು ನೀಡಿದ್ದಾರೆ. ಈ ಮೂಲಕ ಹಲವು ವರ್ಷಗಳ ಬೇಡಿಕೆಯೊಂದು ಓಡೇರಿದಂತಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು