Recent Posts

Sunday, January 19, 2025
ಉಡುಪಿಸುದ್ದಿ

ಪರ್ಕಳ ಬಾವಿಯಲ್ಲಿ ಉಕ್ಕಿ ಬರುವ ನೀರು ಇರುವ ಪ್ರದೇಶದ ಪಕ್ಕದ ಗದ್ದೆಯಲ್ಲಿ ಭೂಕುಸಿತ ಗುಹಾ ಸಮಾಧಿಯ ಇರುವಂತಹ ಕುರುಹು ಪತ್ತೆ!- ಕಹಳೆ ನ್ಯೂಸ್

ಪರ್ಕಳ ಗರೋಡಿ ಹಿಂಬದಿಯಲ್ಲಿ ಇರುವ ತುಳಜಾ ಭವಾನಿ ಮರಾಠಿಗರು ಪೂಜಿಸುವಂತಹ. ತುಳಜಾ ಭವಾನಿದೇವಿ ಕಟ್ಟೆಯ ಬಳಿ. ಸುಮಾರು ಅಂದಾಜುಎರಡು ಮೂರು ವರ್ಷದ ಹಿಂದೆ ಏಕಾಏಕಿಯಾಗಿ ಹೊಂಡ ಆಗಿರುವುದು ಕಂಡುಬಂದಿದೆ. ತಮ್ಮ ಮನೆಯ ಸಾಮಾಗ್ರಿಗಳನ್ನು ಟೆಂಪೋಮೂಲಕ ಮನೆ ಕಡೆಗೆ ಒಯ್ಯು ವಾಗ ಟೆಂಪೋ ಈ ಹೊಂಡದೊಳಗೆ ಸಿಲುಕಿ ಮುಂದಕ್ಕೆ ಚಲಿಸದೆ ಇದ್ದಾಗ ಬುಲ್ಡೋಜರ್ ಮೂಲಕ. ಟೆಂಪೋವನ್ನು ಮೇಲಕ್ಕೇ ಎತ್ತಲಾಯಿತು ಎಂದು ಸ್ಥಳೀಯ ನಿವಾಸಿ ಪಾರ್ವತಿ ನಾಯ್ಕ ತಿಳಿಸಿದ್ದಾರೆ. ನಮ್ಮ ಮನೆಯ ಎದುರುಗಡೆ ಗದ್ದೆಯಲ್ಲಿ . ಬಾವಿಯಂತಿರುವ ಕುಸಿದು ಹೋದ ಜಾಗವನ್ನು ತೋರಿಸಿಕೊಟ್ಟಿದ್ದಾರೆ.

ಕಳೆದ ಎರಡು ಮೂರು ವರ್ಷದ ಹಿಂದೆ ಈ ಘಟನೆ ನಡೆದಿದೆ. ಎಂದಿದ್ದಾರೆ ನಮ್ಮ ನಾಯಿಮರಿ ಈ ಹೊಂಡಕ್ಕೆ ಬಿದ್ದಿತ್ತು. ಮತ್ತು ಪಕ್ಕದಲ್ಲಿ ಕ್ರಿಕೆಟ್ ಆಡುವ ಮಕ್ಕಳ ಚೆಂಡು ಈ ಹೊಂಡಕ್ಕೆ ಆಗಾಗ ಬೀಳುತ್ತಾ ಇರುತ್ತದೆ ಆ ದೃಷ್ಟಿಯಿಂದ ಮಣ್ಣು ತುಂಬಿಸುವಷ್ಟು ತುಂಬಿಸಿದ್ದೇವೆ. ಆದರೆ ಹೋಂಡ ದೊಡ್ಡದಾಗಿದೆ. ಪೂರ್ಣ ಪ್ರಮಾಣದಲ್ಲಿ ಹೊಂಡ ವನ್ನು ಮುಚ್ಚಲು ಸಾಧ್ಯವಾಗಿಲ್ಲ ಮಳೆಗಾಲದಲ್ಲಿ ಮಳೆ ನೀರು ಗದ್ದೆಯಲ್ಲಿ ತುಂಬುತ್ತದೆ. ನಂತರ ಈ ಹೊಂಡದೊಳಗೆ ನೀರುಹರಿದು ಹೋಗುತ್ತದೆ ಎಂದಿದ್ದಾರೆ ಅನತಿ ದೂರದ ಪಕ್ಕದಲ್ಲಿ ನಾಲ್ಕೈದು. ಬಾವಿ ಗಳಲ್ಲಿಏಳು ವರ್ಷಗಳ ಹಿಂದೆ ಬಾವಿಯಲ್ಲಿ ನೀರು ಮೇಲ್ಮುಖವಾಗಿ ಕಾಣುತ್ತಿತ್ತು. ಮತ್ತು ನೀರು ತೋಡಿನಲ್ಲಿ ಹರಿಯುತ್ತಿತ್ತು. ಈ ವರ್ಷ ಮತ್ತೆ ಬಾವಿಯಲ್ಲಿ ನೀರು ತುಂಬಿ ತುಳುಕುತ್ತಾ ಇದೆ. ಮೇಲ್ಮುಖವಾಗಿ ಕಾಣುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕೃತಕವಾಗಿ ಕಂಡುಬಂದಂತಹ ಹೊoಡ ಗುಹಾ ಸಮಾಧಿ ಯಾಗಿರಬಹುದೇ… ಎಂದು ಪುರಾತತ್ವ ಸಂಶೋಧಕ ರಾದ ಪ್ರೊಫೆಸರ್. ಟೀ ಮುರುಗೇಶಿಯವರಿಗೆ ಸ್ಥಳೀಯರಾದ ಕ್ಷೇತ್ರ ಸಂಶೋಧನೆಯಲ್ಲಿ ಆಸಕ್ತರಾದ. ಸಾಮಾಜಿಕ ಕಾರ್ಯಕರ್ತ ಗಣೇಶ್ ರಾಜ್ ಸರಳೇ ಬೆಟ್ಟು ಮಾಹಿತಿ ನೀಡಿದಾಗ ಇದನ್ನು ಗುಹಾ ಸಮಾಧಿಯಾಗಿದೆ ಎಂದಿದ್ದಾರೆ.. ನಾಳೆ ಬೆಳಗ್ಗೆ ನೀಡುತ್ತೇನೆ ಎಂದಿದ್ದಾರೆ.ಈ ಹಿಂದೆ. ಇದೇ ರೀತಿ ಗದ್ದೆಯಲ್ಲಿ ನೀರು ಒಳತುಂಬುವ ಘಟನೆ ಯು ಬೆಳ್ಳಂಪಳ್ಳಿಯಲ್ಲಿ ಯಾಗಿದ್ದು ಅಲ್ಲಿಯೂ ಕೂಡ ಗುಹಾಸಮಾಧಿ ಇರುವುದು ಕಂಡುಬಂದಿತ್ತು. ಪತ್ತೆಯಾಗಿತ್ತು ಹಾಗೂ ಪರ್ಕಳಪರಿಸರದ ಶೆಟ್ಟಿ ಬೆಟ್ಟು ಪರಿಸರದ ಗದ್ದೆಯಲ್ಲಿ ಗದ್ದೆಯಲ್ಲಿಯೂ ಗುಹಾ ಸಮಾಧಿ ಕಂಡು ಬಂದಿತ್ತುಅಲ್ಲಿಯೂ ಗದ್ದೆಯಲ್ಲಿ ತುಂಬಿದ ನೀರು ಗುಹಾ ಸಮಾಧಿ ಒಳಗೆ ಹೋಗುವ ದೃಶ್ಯ ಕಂಡು ಬಂದಿತ್ತು ಈ ರೀತಿ ಆಗುವ ಘಟನೆ ವರದಿಯಾದಾಗ ರಾಜ್ಯಾದ್ಯಂತ ವೀಕ್ಷಿಸಿದ ವೀಕ್ಷಕರು ಬಂದು ಸ್ಥಳವನ್ನು ಪರಿಶೀಲನೆ ಮಾಡಿ ಗುಹಾ ಸಮಾಧಿ ಇರುವ ಪ್ರದೇಶಕ್ಕೆ ಭೇಟಿ ನೀಡಿದ್ದರು. ಎಂದುಗಣೇಶ್ ರಾಜ್ ಸರಳಬೆಟ್ಟು ನೆನಪಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ರಾಜೇಶ ಪ್ರಭು. ಪರ್ಕಳ. ರತ್ನಾಕರ ನಾಯಕ್. ಜೊತೆಗಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು