Sunday, January 19, 2025
ಉಡುಪಿಬೈಂದೂರುಸುದ್ದಿ

ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಶಾಸಕರ ಬೂತ್ ಕಡೆಗೆ ಸಮೃದ್ಧ ನಡಿಗೆ ಶತ ಸಂಭ್ರಮ ಕಾರ್ಯಕ್ರಮ : ಕಾರ್ಯಕರ್ತರಲ್ಲಿ ಹೆಚ್ಚಿದ ಚುನಾವಣ ಉತ್ಸಾಹ – ಕಹಳೆ ನ್ಯೂಸ್

ಬೈಂದೂರು: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಅವರು ಬೈಂದೂರು ವಿಧಾನಸಭಾ ಕ್ಷೇತ್ರದಿಂದಲೇ 1 ಲಕ್ಷಕ್ಕೂ ಅಧಿಕ ಲೀಡ್ ಪಡೆದು ಬಹುದೊಡ್ಡ ಅಂತರದಲ್ಲಿ ಜಯ ಸಾಧಿಸಬೇಕು ಎಂಬ ಛಲದೊಂದಿಗೆ ಜನಪ್ರಿಯ ಶಾಸಕರಾದ ಗುರುರಾಜ ಗಂಟೆಹೊಳೆ ಯವರು ಆರಂಭಿಸಿದ ಬೂತ್ ಕಡೆಗೆ ಸಮೃದ್ಧ ನಡೆಗೆ ಒಂದು ವಾರದಲ್ಲಿಯೇ ನೂರು ಬೂತ್ ಗಳಲ್ಲಿ ಸಂಚಲನ ಮೂಡಿಸಿದೆ.

ಬಿ.ವೈ.ರಾಘವೇಂದ್ರ ಅವರು ಬೈಂದೂರಿನಲ್ಲಿ ಒಂದು ಲಕ್ಷ ಲೀಡ್ ಪಡೆದು ವಿಜಯಶಾಲಿಯಾಗುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲಪಡಿಸುವುದರೊಂದಿಗೆ ಅವರನ್ನು ಬೈಂದೂರಿಗೆ ಕರೆತರುವ ಸಂಕಲ್ಪವನ್ನು ಈಗಾಗಲೇ ಕೊಲ್ಲೂರಿಗೆ ಶ್ರೀ ಮೂಕಾಂಬಿಕಾ ಕ್ಷೇತ್ರದಲ್ಲಿ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಮತ್ತೊಮ್ಮೆ ದೇಶದ ಪ್ರಧಾನಿಯಾಗಿ ಕೊಲ್ಲೂರಿಗೆ ಬಂದು ಮೂಕಾಂಬಿಕಾ ಕಾರಿಡಾರ್ ರಚನೆಯ ಘೋಷಣೆ ಮಾಡುವುದನ್ನು ನಾವೆಲ್ಲರೂ ಕಾಣಬೇಕು ಮತ್ತು ಮೋದಿ ಅವರನ್ನು ಹತ್ತಿರದಿಂದ ಕ್ಷೇತ್ರದ ಜನತೆ ನೋಡಬೇಕು ಎಂಬ ಸದಾಶಯದೊಂದಿಗೆ ಬೂತ್ ಕಡೆಗೆ ಸಮೃದ್ಧ ನಡಿಗೆ ಯನ್ನು ಪರಿಣಾಮಕಾರಿಯಾಗಿ ನಡೆಸಲಾಗುತ್ತಿದೆ. ಬೂತ್ ಗಳಲ್ಲಿ ಮತದಾರರು, ಬಿಜೆಪಿಯ ಕಾರ್ಯಕರ್ತರು, ಪ್ರಮುಖರು, ಮುಖಂಡರು, ಹಿತೈಷಿಗಳು ಉತ್ಸಾಹದಿಂದ ಈ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಅಷ್ಟು ಮಾತ್ರವಲ್ಲದೆ ಶಾಸಕರು ಖುದ್ದು ಮತದಾರರು ಮತ್ತು ಜನತೆಯ ಅಹವಾಲುಗಳನ್ನು ಆಲಿಸಿ ಸ್ಥಳದಲ್ಲಿಯೇ ಪರಿಹಾರ ಸೂಚಿಸುವ ವ್ಯವಸ್ಥೆಯನ್ನು ಅಲ್ಲಲ್ಲಿ ಮಾಡುತ್ತಿರುವುದು ಶ್ಲಾಘನೀಯ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಶಾಸಕರಾದ ಗುರುರಾಜ ಗಂಟಿಹೊಳೆ ಯವರು, ಬೈಂದೂರು ಕ್ಷೇತ್ರದಿಂದ ಬಿ.ವೈ. ರಾಘವೇಂದ್ರ ಅವರಿಗೆ ಒಂದು ಲಕ್ಷ ಲೀಡ್ ನೀಡುವುದು, ಆ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೊಲ್ಲೂರಿಗೆ ಕರೆದುಕೊಂಡು ಬರುವುದು ಮತ್ತು ಕ್ಷೇತ್ರದ ಸಮಗ್ರವಾದ ಅಭಿವೃದ್ಧಿ ಕಲ್ಪನೆಯೊಂದಿಗೆ ಸಮೃದ್ಧ ನಡಿಗೆ ಪ್ರತಿ ಬೂತಗಳಲ್ಲೂ ನಡೆಸಲು ಉದ್ದೇಶಿಸಿದ್ದೇವೆ. ಅದರಂತೆ ಇದೀಗ ನೂರಕ್ಕೂ ಅಧಿಕ ಬೂತ್ಗಳನ್ನು ಸಂದರ್ಶಿಸಲಾಗಿದೆ. ಬೂತ್ ನಡಿಗೆ ಸಂದರ್ಭದಲ್ಲಿ ಕಾರ್ಯಕರ್ತರೊಂದಿಗೆ ಸೇರುವುದು, ಅವರ ದುಃಖ ದುಮ್ಮಾನಗಳನ್ನು ಆಲಿಸುವುದು, ಪ್ರತಿಜ್ಞೆ ಸ್ವೀಕಾರ ಇತ್ಯಾದಿಗಳು ಪರಿಣಾಮಕಾರಿಯಾಗಿ ನಡೆಯುತ್ತಿದೆ. ಹಿರಿಯ ಕಾರ್ಯಕರ್ತರಲ್ಲಿನ ಉತ್ಸಾಹ, ಹೊಸ ಕಾರ್ಯಕರ್ತರ ಸೇರ್ಪಡೆ, ಯುವಕರ ಚೈತನ್ಯ ಹೀಗೆ ಬೂತ್ ನಡಿಗೆಯಲ್ಲಿ ಎಲ್ಲವೂ ಪ್ರೇರಣಾದಾಯಿಯಾಗಿದೆ. ಅಲ್ಲದೆ ನಿತ್ಯವೂ ನಮ್ಮೊಂದಿಗೆ ಹಲವರು ಸೇರಿಕೊಳ್ಳುತ್ತಿರುವುದು ಇನ್ನೊಂದು ಖುಷಿಯ ವಿಚಾರವಾಗಿದೆ. ಒಂದು ಲಕ್ಷ ಲೀಡ್ ನ ಸ್ಪಷ್ಟ ಗುರಿ ಹಾಗೂ ಬೈಂದೂರು ಕ್ಷೇತ್ರದ ಅಭಿವೃದ್ಧಿಯ ಸ್ಪಷ್ಟ ಪರಿಕಲ್ಪನೆ ನಮ್ಮ ಈ ನಡಿಗೆಯಲ್ಲಿದೆ ಎಂದು ವಿವರ ನೀಡಿದರು.

ಬೂತ್ ನಡಿಗೆಯಲ್ಲಿ ಕಾರ್ಯಕರ್ತರ ಆರೋಗ್ಯಕ್ಕೂ ಆದ್ಯತೆ
ಬೂತ್ ನಡಿಗೆಯಲ್ಲಿ ಪ್ರತಿ ಶಕ್ತಿಕೇಂದ್ರ, ಮಹಾ ಶಕ್ತಿಕೇಂದ್ರ ಬೂತ್ ಗಳಲ್ಲಿ ಹೊಸ ಕಾರ್ಯಕರ್ತರು ಸೇರಿಕೊಳ್ಳುತ್ತಿದ್ದಾರೆ. ಹಿರಿಯರು ನಮ್ಮೊಂದಿಗೆ ನಿತ್ಯ ಜೊತೆಯಾಗುತ್ತಿದ್ದಾರೆ. ಆದರೂ ಈ ನಿರಂತರ ಪ್ರಕ್ರಿಯೆಯಲ್ಲಿ ಪ್ರತಿದಿನವೂ ಎಲ್ಲರಿಗೂ ಜೊತೆಯಾಗಲು ಸಾಧ್ಯವಾಗದೆ ಇರಬಹುದು. ನಮ್ಮೊಂದಿಗೆ ಬೂತ್ ಅಭಿಯಾನದಲ್ಲಿ ಇರುವ ಕಾರ್ಯಕರ್ತರ ಆರೋಗ್ಯದ ಬಗ್ಗೆಯೂ ವಿಶೇಷ ಗಮನ ಹರಿಸುತಿದ್ದೇವೆ. ಹವಾಮಾನ ವ್ಯತ್ಯಾಸ ಬಿಸಿಲು ಇತ್ಯಾದಿಗಳಿಂದ ಆರೋಗ್ಯ ಸಮಸ್ಯೆ ಆಗದಂತೆ ಎಚ್ಚರ ತೆಗೆದುಕೊಳ್ಳುತ್ತಿದ್ದೇವೆ.

ಸಾಮಾಜಿಕ ಕಾರ್ಯದಲ್ಲಿ ಸಾಥ್
ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಎಲ್ಲ ಬೂತ್ ಗಳನ್ನು ಮುಟ್ಟಲು ಸಾಧ್ಯವಾಗಿಲ್ಲ. ಆ ಸಂದರ್ಭದಲ್ಲಿ ಕೆಲವೊಂದು ಬೂತ್ ಗಳಿಗೆ ಪತ್ನಿ ಭೇಟಿ ನೀಡಿದ್ದಳು. ಈಗ ನಮಗೆ ಪ್ರತಿ ಬೂತ್ ಸಂದರ್ಶಿಸಿ, ಕಾರ್ಯಕರ್ತರೊಂದಿಗೆ ಬೆರೆಯುವ ಅವಕಾಶ ಮತ್ತೆ ದೊರೆತಿದೆ. ಈ ಕಾರ್ಯದಲ್ಲಿ ಮನೆಯವರು ಸಾಥ್ ನೀಡುತ್ತಿದ್ದಾರೆ. ನಾವು ಸಾಮಾಜಿಕ ಕಾರ್ಯಗಳನ್ನು ಒಟ್ಟಿಗೆ ಮಾಡಿದ್ದರಿಂದ ಇದೊಂದು ಸಾಮಾಜಿಕ ಕಾರ್ಯದ ಭಾಗವಾಗಿ ನಮ್ಮೊಂದಿಗೆ ಜೋಡಿಸಿಕೊಂಡಿದ್ದಾರೆ.

ವಿಷಯ ಮನದಟ್ಟು ಮಾಡಲು ಪ್ರತಿಜ್ಞೆ

ಬೂತ್ ನಡಿಗೆ ಸಂದರ್ಭದಲ್ಲಿ ಅನೇಕ ವಿಷಯಗಳು ಚರ್ಚೆಗೆ ಬರುತ್ತದೆ. ಇಂಥ ಸಂದರ್ಭದಲ್ಲಿ ಚುನಾವಣೆ ಸೀಮಿತವಾಗಿ ಕೆಲವೊಂದು ವಿಷಯಗಳನ್ನು ಸ್ಪಷ್ಟ ಮತ್ತು ನಿಖರವಾಗಿ ಮನದಟ್ಟು ಮಾಡಬೇಕಾಗಿರುತ್ತದೆ. ಅದಕ್ಕೆ ಪ್ರತಿಜ್ಞೆ ಸಹಕಾರಿಯಾಗುತ್ತದೆ. ಕ್ಷೇತ್ರದ ಅಭಿವೃದ್ಧಿಗಾಗಿ ಸಂಕಲ್ಪ ಮಾಡುತ್ತೇವೆ ಎನ್ನುವುದನ್ನು ಅವರಿಗೆ ಸ್ಪಷ್ಟಪಡಿಸುತ್ತಿದ್ದೇವೆ.

ಸಮೃದ್ಧ ನಡಿಗೆಯ ಭವಿಷ್ಯದ ಆಲೋಚನೆ

ಸಮೃದ್ಧ ನಡಿಗೆ ರಾಜಕೀಯ ಅಥವಾ ಚುನಾವಣಾ ವಿಷಯ ಎನ್ನುವುದಕ್ಕಿಂತ ಇದು ನಮ್ಮ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಇರುವ ಒಂದು ಆಂದೋಲನ, ಅಭಿಯಾನ. ಅಭಿವೃದ್ಧಿ, ಕಾರ್ಯಕರ್ತರು ಹಾಗೂ ಸಂಘಟನೆಯ ದೃಷ್ಟಿಯಿಂದ ಇದು ಪ್ರತಿಬೂತಗಳ ಸಮೃದ್ಧಿಯ ಕಾರ್ಯವಾಗಿದೆ. ಸಂಘಟನೆ ಗಟ್ಟಿಯಾದಂತೆ ಪಕ್ಷ ಭದ್ರವಾಗುವಂತೆ ಬೂತ್ ಗಟ್ಟಿಯಾದರೆ ಕ್ಷೇತ್ರ ಸಮೃದ್ಧವಾಗಲಿದೆ ಅಭಿವೃದ್ಧಿ ಹೊಂದಲಿದೆ.

ಭಿನ್ನ ವಾತಾವರಣ
ಎಲ್ಲ ಬೂತ್ ಒಂದೇ ರೀತಿ ಇರುವುದಿಲ್ಲ. ಕೆಲವು ಬೂತ್ ಗಳು ಬಿಜೆಪಿಗೆ ಪರವಾಗಿದ್ದರೆ ಇನ್ನು ಕೆಲವು ಬೂತಗಳಲ್ಲಿ ಕಾರ್ಯಕರ್ತರಿಗೆ ಅನೇಕ ಸಮಸ್ಯೆ ಎದುರಾಗಿರುತ್ತದೆ. ಕಾರ್ಯಕರ್ತನ ಮನೆಯಲ್ಲಿ ನಾವು ಸೇರಿರುವುದರಿಂದ ಇಲ್ಲಿ ಯಾವುದೇ ಆತಂಕದ ವಾತಾವರಣ ಅಥವಾ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ ಎಂಬ ಮಾನಸಿಕತೆ ಇರುವುದಿಲ್ಲ ಎಲ್ಲಾ ವಿಷಯಗಳ ಮುಕ್ತವಾಗಿ ಚರ್ಚೆಯಾಗುತ್ತದೆ ಮತ್ತು ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತದೆ. ಎಲ್ಲ ಬೂತ್ ಗಳನ್ನು ಸಮಾನವಾಗಿ ಸ್ವೀಕರಿಸುತ್ತೇವೆ.

ಬೈಂದೂರಿನ ಸುಂದರ ಕಾವ್ಯ

ತೊಂಬಟ್ಟು, ಮಚ್ಚಟ್ಟು ಮೊದಲಾದ ಬೂತ್ ಗಳಿಗೆ ಗುಡ್ಡದಾಟಿ, ನದಿದಾಟಿ ಹೋಗಬೇಕು. ಕರಾವಳಿ ಭಾಗದಲ್ಲಿ ಬೂತ್ ಗಳು ಒಂದಕ್ಕೊAದು ಅಂಟಿಕೊAಡಿವೆ. ಇನ್ನು ಕೆಲವು ಭಾಗದಲ್ಲಿ ಕಾಡಿನ ಮಧ್ಯೆ ಬೂತ್ ಗಳಿವೆ ಕತ್ತಲಾದ ಅನಂತರದಲ್ಲಿ ಓಡಾಟ ಕಷ್ಟ. ಹೀಗೆ ಒಟ್ಟಾರೆಯಾಗಿ ಬೈಂದೂರು ಕ್ಷೇತ್ರದ ಪೂರ್ಣ ದರ್ಶನವಾಗುತ್ತಿದೆ.

ಭಿನ್ನ ಅನುಭೂತಿ
ಬೂತ್ ನಡಿಗೆಯಲ್ಲಿ ಒಂದೊAದು ಬೂತ್ ನಲ್ಲಿ ಭಿನ್ನ ಅನುಭವ ಕಾಣಸಿಗುತ್ತಿದೆ. ಕೆಲವರು ಸಮಸ್ಯೆಯ ಆಳ ಅಗಲವನ್ನು ವಿಸ್ತೃತವಾಗಿ ಬಿಚ್ಚಿಟ್ಟರೇ ಇನ್ನು ಕೆಲವರು ಸ್ತೂಲವಾಗಿ ಪರಿಚಯಿಸುತ್ತಿದ್ದಾರೆ. ಬೂತ್, ವಾರ್ಡ್, ಗ್ರಾಮ, ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಕ್ಷೇತ್ರ, ಜಿಲ್ಲೆ, ರಾಜ್ಯ, ರಾಷ್ಟ್ರೀಯ ಸಮಸ್ಯೆಗಳು ಚರ್ಚೆಗೆ ಬರುತ್ತಿವೆ.

ಗ್ಯಾರಂಟಿ ಚರ್ಚೆಗೆ ಬರುತ್ತಿಲ್ಲ
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಯ ಯಾವುದೇ ಚರ್ಚೆ ನಡೆಸುತ್ತಿಲ್ಲ. ಯೋಜನೆಯಿಂದ ಜನರಿಗೆ ಅನುಕೂಲವಾದರೆ ಅದಕ್ಕೆ ನಮ್ಮ ಆಕ್ಷೇಪವು ಇಲ್ಲ. ಯೋಜನೆ ಸಿಗದಿರುವ ಬಗ್ಗೆ ಅನೇಕರು ಸಮಸ್ಯೆ ಹೇಳಿಕೊಳ್ಳುತ್ತಿದ್ದಾರೆ. ಕೊಡುವ ಸಾಮರ್ಥ್ಯ, ಆರ್ಥಿಕ ವ್ಯವಸ್ಥೆ, ಅಭಿವೃದ್ಧಿ, ಅನುದಾನ ಇತ್ಯಾದಿಗಳನ್ನು ಹಾಳು ಮಾಡಿಕೊಂಡು ಗ್ಯಾರಂಟಿ ಕೊಡುವುದರ ಬಗ್ಗೆ ಪ್ರಶ್ನೆ ಎತ್ತಿದ್ದೆವೆಯೇ ಹೊರತು, ಜನರಿಗೆ ಲಾಭ ಸಿಕ್ಕಿದ್ದನ್ನು ದೂರುವುದಿಲ್ಲ. ಈ ಬಗ್ಗೆಯೂ ನಮಗೆ ಸ್ಪಷ್ಟತೆಯಿದೆ ಎಂಬುದು ಶಾಸಕರಾದ ಗುರುರಾಜ ಗಂಟಿಹೊಳೆ ಅಭಿಪ್ರಾಯವಾಗಿದೆ.

ಹೀಗೆ ಬೂತ್ ಕಡೆಗೆ ಸಮೃದ್ಧ ನಡಿಗೆ ಚುನಾವಣೆಯ ದೃಷ್ಟಿಯಿಂದ ಬೈಂದೂರು ವಿಧಾನಸಭಾ ಕ್ಷೇತ್ರದಿಂದ ಬಿ.ವೈ. ರಾಘವೇಂದ್ರ ಅವರಿಗೆ 1 ಲಕ್ಷ ಲೀಡ್ ನೀಡುವ ಸಂಕಲ್ಪದ ಭಾಗವಾಗಿ ನಡೆಯುತ್ತಿದ್ದರೂ ಕಾರ್ಯಕರ್ತರಲ್ಲಿ ಹೊಸ ಚೈತನ್ಯ ಮೂಡಿಸುತ್ತಿದೆ. ಬೂತ್ ಹಂತದಲ್ಲಿ ಮುಖಂಡರು, ಪ್ರಮುಖರಿಗೆ ಉತ್ಸಾಹ ಹೆಚ್ಚಿಸುತ್ತಿದೆ. ಪಕ್ಷ ಸಂಘಟನೆಗೂ ಒತ್ತು ನೀಡುತ್ತಿರುವ ಶಾಸಕರ ಈ ಕಾರ್ಯ ಎಲ್ಲರಿಗೂ ಮಾದರಿಯಾಗಿದೆ.


ಬಿಜೆಪಿಯ ಹಿರಿಯರು ಯಾವ ಕನಸು ಕಂಡಿದ್ದಾರೋ ಮತ್ತು ಪಕ್ಷ ಸಂಘಟನೆಯಲ್ಲಿ ಯಾವ ವಿಧಾನ ಪರಿಣಾಮಕಾರಿಯಾಗಬಹುದು ಎಂಬುದನ್ನು ವಸ್ತುಸಹ ಅನುಷ್ಠಾನಕ್ಕೆ ತರುವ ಮೂಲಕ ಶಾಸಕರಾದ ಗುರುರಾಜ ಗಂಟಿಹೊಳೆಯವರು ಎಲ್ಲರಿಗಿಂತ ಮಾದರಿಯಾಗಿದೆ. ಒಂದು ಕ್ಷೇತ್ರದ ಎಲ್ಲ ಬೂತ್ ಗಳನ್ನು ಸೀಮಿತ ಅವಧಿಯಲ್ಲಿ ತಲುಪುವುದು, ಕಾರ್ಯಕರ್ತರ ಸಭೆ ನಡೆಸಿ, ಸಮಸ್ಯೆ ಆಲಿಸುವುದು ಸುಲಭದ ಕಾರ್ಯವಲ್ಲ. ಇಚ್ಛಾಶಕ್ತಿ ಹಾಗೂ ತಾಳ್ಮೆ ಎರಡೂ ಅವಶ್ಯಕ. ಅದನ್ನು ಅತ್ಯಂತ ಪರಿಣಾಮಕಾರಿಯಾಗಿ ಶಾಸಕರು ಮಾಡಿ ತೋರಿಸುತ್ತಿದ್ದಾರೆ. ಶಾಸಕರ ಈ ನಡೆ ಎಲ್ಲರಿಗೂ ಮಾದರಿಯಾಗಲಿ