Monday, January 27, 2025
ದಕ್ಷಿಣ ಕನ್ನಡಬಂಟ್ವಾಳರಾಜಕೀಯಸುದ್ದಿ

ಲೋಕಸಭಾ ಚುನಾವಣೆಯಲ್ಲಿ ಕ್ಯಾ.ಬ್ರಿಜೇಶ್ ಚೌಟ ಅವರನ್ನು ಬಹುಮತದಿಂದ ಗೆಲ್ಲಿಸಿಕೊಡುವ ನಿಟ್ಟಿನಲ್ಲಿ “ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಗ್ರಾಮ,ಮನೆ,ಮನ ಸಂಪರ್ಕ ಅಭಿಯಾನ –ಕಹಳೆ ನ್ಯೂಸ್

2024 ರ ಎ. 26 ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಕ್ಯಾ.ಬ್ರಿಜೇಶ್ ಚೌಟ ಅವರನ್ನು ಬಹುಮತದಿಂದ ಗೆಲ್ಲಿಸಿಕೊಡುವ ನಿಟ್ಟಿನಲ್ಲಿ “ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಗ್ರಾಮ,ಮನೆ,ಮನ ಸಂಪರ್ಕ ಅಭಿಯಾನ” ಎಂಬ ನೂತನ ಕಾರ್ಯಕ್ರಮ ಆಯೋಜಿಸಿದ್ದು, ಎ.16 ರಂದು ಬಂಟ್ವಾಳದ ಕಳ್ಳಿಗೆ ಗ್ರಾಮದ ಬೆಂಜನಪದವು ,ದರಿಬಾಗಿಲು, ಚಂದ್ರಿಗೆ,ಗಾAದೋಡಿ ಮತದಾರರ ಮನೆಗೆ ಬೇಟಿ ನೀಡಿ ಮತಯಾಚನೆ ನಡೆಸಿದರು. ಲೋಕಸಭಾ ಅಭ್ಯರ್ಥಿಯ ಪರಿಚಯ ಪತ್ರ,ಹಾಗೂ ಮೋದಿ ಸರಕಾರದ ಅವಧಿಯಲ್ಲಿ ನಡೆಸಲಾದ ಯೋಜನೆಗಳ ಮಾಹಿತಿ ಕರಪತ್ರವನ್ನು ಮತದಾರರಿಗೆ ಶಾಸಕ ರಾಜೇಶ್ ,ಮಾಜಿ ಶಾಸಕ ಎ.ರುಕ್ಮಯ ಪೂಜಾರಿ ಹಾಗೂ ಜಿಪಂ.ಮಾಜಿ ಸದಸ್ಯ ಎಂ.ತುAಗಪ್ಪ ಬಂಗೇರ ಅವರು ಜೊತೆಯಾಗಿ ನೀಡಿದರು.

ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಮಾತನಾಡಿ, ಬಂಟ್ವಾಳ ವಿಧಾನ ಸಭಾ ಕ್ಷೇತ್ರದಲ್ಲಿ ಅತೀ ಹೆಚ್ಚಿನ ಮತವನ್ನು ಲೋಕಸಭಾ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಅವರಿಗೆ ನೀಡಬೇಕು. ನಾನು ಕ್ಷೇತ್ರದ ಜನರ ಮೇಲೆ ಇಟ್ಟಿರುವ ಪ್ರೀತಿ ವಿಶ್ವಾಸಕ್ಕೆ ಧಕ್ಕೆಯಾಗದಂತೆ ಮನವಿಗೆ ಬೆಲೆ ನೀಡುತ್ತೀರಿ ಎಂಬ ಭರವಸೆ ನನಗಿದೆ. ಅಮೂಲಕ ಹಿಂದುತ್ವದ ಶಕ್ತಿಯನ್ನು ರಾಷ್ಟ್ರ ಮಟ್ಟದಲ್ಲಿ ಗುರುತಿಸುವಂತೆ ಮಾಡುತ್ತೀರಿ ಎಂಬ ದೃಡವಿಶ್ವಾಸ ನನಗಿದೆ ಎಂದು ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಿದ ಮೋದಿಯವರಿಗೆ ಬೆಂಬಲವಾಗಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡಬೇಕಾಗಿದೆ.ಧಾರ್ಮಿಕ ಚಿಂತನೆಯ ಅವರ ಕಾರ್ಯಕ್ಕೆ ಮತದಾರರು ಗೌರವ ನೀಡುಬೇಕಾಗಿದೆ ಎಂದು ತಿಳಿಸಿದರು. ಸಾಮಾನ್ಯ ಜನರ ಜೀವನಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಯೋಜನೆಗಳನ್ನು ಜಾರಿ ಮಾಡಿದೆ.ಇದರ ಜೊತೆಗೆ ಕೃಷಿಕರಿಗೆ, ಹಿರಿಯ ನಾಗರಿಕರಿಗೆ, ಶಿಕ್ಷಣಕ್ಕೆ , ಆರೋಗ್ಯ ಹೀಗೆ ಸರ್ವ ಕ್ಷೇತ್ರಕ್ಕೂ, ಸರ್ವವರ ಬಾಳಿಗೆ ನೆರವಾಗುವ ರೀತಿಯಲ್ಲಿ ಸಹಬಾಳ್ವೆಗೆ ಸಹಕಾರವಾಗುವ ರೀತಿಯ ಬದುಕಿಗೆ ಪೂರಕವಾದ ವಾತವರಣವನ್ನು ಮೋದಿಯವರು ನಿರ್ಮಾಣ ಮಾಡಿಕೊಟ್ಟಿದ್ದಾರೆ ಎಂದು ಅವರು ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಮಾಜಿ ಶಾಸಕ ಎ.ರುಕ್ಮಯ ಪೂಜಾರಿ ಮಾತನಾಡಿ, ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಿಂದ ಸ್ವಾರ್ಥದ ರಾಜಕೀಯ ಲಾಭಕ್ಕಾಗಿ ಮತದಾರರ ಹಾದಿ ತಪ್ಪಿಸುವ ಕೆಲಸ ಆಗುತ್ತಿದೆ. ಚುನಾವಣೆಯ ಸಂದರ್ಭದಲ್ಲಿ ನೀಡುವ ಭರವಸೆಗೆ ಮಾರುಹೋಗದೆ, ದೇಶದ ಭದ್ರತೆ ಹಾಗೂ ಭವಿಷ್ಯದ ಬಗ್ಗೆ ಚಿಂತನೆ ನಡೆಸಿ ಮೋದಿಯವರು ಜಾರಿ ಮಾಡಲಾದ ಮಹತ್ವಪೂರ್ಣ ಯೋಜನೆಗಳ ಬಗ್ಗೆ ನೆನಪು ಮಾಡಿಕೊಳ್ಳುವ ಸಮಯ ಇದಾಗಿದೆ ಎಂದು ಅವರು ತಿಳಿಸಿದರು. ಸುಭದ್ರವಾದ ಸಮಾಜ ನಿರ್ಮಾಣಕ್ಕೆ ಮೋದಿಯವರ ಕೊಡುಗೆ ಅನನ್ಯವಾಗಿದೆ.ಮುಂದಿನ ಅವಧಿಯಲ್ಲಿ ಇನ್ನಷ್ಟು ಯೋಜನೆಗಳಿಗೆ ಶಕ್ತಿ ತುಂಬುವ ದೃಷ್ಟಿಯಿಂದ ಮೋದಿಯವರ ಕೈ ಬಲಪಡಿಸೋಣ ಎಂದು ಅವರು ತಿಳಿಸಿದರು.

ಸಿದ್ದರಾಮಯ್ಯ ನೇತ್ರತ್ವದ ಕಾಂಗ್ರೇಸ್ ಸರಕಾರದ ಆಡಳಿತದಿಂದಾಗಿ ರೈತರ ಜೀವನ ಕಂಗೆಟ್ಟಿದೆ.
ಈ ದೇಶವನ್ನು ಉಳಿಸುವ ಸಲುವಾಗಿ ,ಸಂಸ್ಕೃತಿ, ಅಚಾರ ವಿಚಾರಗಳನ್ನು ಉಳಿಸುವ ನಿಟ್ಟಿನಲ್ಲಿ ಜಾತಿಮತ,ಪಂಥ,ಪAಗಡವನ್ನು ದೂರ ಮಾಡಿ ಬಿಜೆಪಿಗೆ ಪವಿತ್ರವಾದ ಮತವನ್ನು ನೀಡಿ ಎಂದು ಅವರು ಮನವಿ ಮಾಡಿದರು.

ಜಿ.ಪಂ.ಮಾಜಿ ಸದಸ್ಯ ಎಂ.ತುAಗಪ್ಪ ಬಂಗೇರ ಮಾತನಾಡಿ, ಕಾಂಗ್ರೆಸ್ ಜೊತೆ ಕೆಲವು ನಕಲಿ ಹಿಂದುತ್ವವಾದಿಗಳು ಸೇರಿಕೊಂಡು ಮತದಾರರ ದಾರಿ ತಪ್ಪಿಸಲು ಪ್ರಯತ್ನ ಮಾಡುತ್ತಿದ್ದು, ಬಿಜೆಪಿಯ ಮತದಾರರು ಇಂತಹ ನಕಲಿಗಳ ಮಾತಿಗೆ ಬೆಲೆ ನೀಡದೆ ಭವ್ಯಭಾರತದ ಕನಸು ಹೊಂದಿರುವ ಪ್ರಧಾನಿಮೋದಿಯವರನ್ನು ಬೆಂಬಲಿಸುವ ಎಂದು ಮನವಿ ಮಾಡಿದರು.
ಗ್ರಾಮ ಗ್ರಾಮದಲ್ಲಿ ಬಿಜೆಪಿಯನ್ನು ಸಂಘಟನೆ ಮಾಡಿದಾಗ ರಾಜ್ಯ,ರಾಷ್ಟ್ರದಲ್ಲಿ ಬಿಜೆಪಿಯ ಗೆಲುವು ಸಾಧ್ಯವಾಗುತ್ತದೆ ಎಂದು ತಿಳಿಸಿದರು. ಹಾಗಾಗಿ ಚುನಾವಣಾ ದಿನದಂದು ಬಿಜೆಪಿಯ ಮತದಾರರನ್ನು ಕಡ್ಡಾಯವಾಗಿ ಮತದಾನ ಮಾಡುವಂತಹ ಜವಬ್ದಾರಿಯನ್ನು ಕಾರ್ಯಕರ್ತರು ಮಾಡಬೇಕು ಎಂದು ಮನವಿ ಮಾಡಿದರು.ಚುನಾವಣೆಯಲ್ಲಿ ಜಾತಿ ಮುಖ್ಯವಲ್ಲ ,ದೇಶ ಮುಖ್ಯ,ದೇಶ ಉಳಿದರೆ ನಾವು ಉಳಿಯುತ್ತೇವೆ, ದೇಶ ಉಳಿದರೆ ನಮ್ಮ ಮಕ್ಕಳಿಗೆ ಉತ್ತಮ ಭವಿಷ್ಯದ ಚಿಂತನೆ ಮಾಡಬಹುದು. ಮಕ್ಕಳ ಉತ್ತಮ ಜೀವನಕ್ಕೆ ಮೋದಿಯವರ ಆಡಳಿತದಿಂದ ಮಾತ್ರ ಸಾಧ್ಯ ಎಂದು ಅವರು ತಿಳಿಸಿದರು.