Recent Posts

Sunday, January 19, 2025
ಸುದ್ದಿ

ಪರಪ್ಪನ ಅಗ್ರಹಾರ ಅವ್ಯವಹಾರ : ಐಪಿಎಸ್ ಅಧಿಕಾರಿ ರೂಪಾಗೆ ಜಯ!

ಬೆಂಗಳೂರು : ಪರಪ್ಪನ ಅಗ್ರಹಾರ ಜೈಲು ಅವ್ಯವಹಾರದ ತನಿಖೆ ನೇತೃತ್ವ ವಹಿಸಿದ್ದ ವಿನಯ್ ಕುಮಾರ್ ಅವರು ಸರಕಾರಕ್ಕೆ ವರದಿಯನ್ನು ಕೊಟ್ಟಾಗಿದೆಯಾ? ಆ ವರದಿಯು ರೂಪಾ ಮೌದ್ಗಿಲ್ ಪರವಾಗಿದೆ ಎಂಬ ಕಾರಣಕ್ಕೆ ಅದನ್ನು ಸರಕಾರವು ಬಹಿರಂಗ ಮಾಡುತ್ತಿಲ್ಲವಾ ಎಂಬ ಪ್ರಶ್ನೆ ಎದುರಾಗಿದೆ.
ಏಕೆಂದರೆ, ತನಿಖೆಗಾಗಿ ನೇಮಿಸಿದ್ದ ತಂಡ, ಅದರ ಕಚೇರಿ ಸ್ಥಳ ಯಾವುದೂ ಸದ್ಯಕ್ಕೆ ಕಾರ್ಯ ನಿರ್ವಹಿಸುತ್ತಿಲ್ಲ ಎಂಬುದು ಮೂಲಗಳಿಂದ ಬಂದಿರುವ ಮಾಹಿತಿ. ಇನ್ನು ಈ ಬಗ್ಗೆ ಪ್ರಶ್ನೆ ಮಾಡುವುದಕ್ಕೆ ವಿನಯ್ ಕುಮಾರ್ ಅವರು ಕೂಡ ಮಾಧ್ಯಮಗಳಿಗೆ ಸಂಪರ್ಕಕ್ಕೆ ಸಿಗುತ್ತಿಲ್ಲ. ಇನ್ನೊಂದು ಕಡೆ, ವಿನಯ್ ಕುಮಾರ್ ಅವರಿಗೆ ಹುಷಾರಿಲ್ಲ ಎಂಬ ಮಾತುಗಳು ಹರಿದಾಡುತ್ತಿವೆ.
ಆದರೆ, ಈ ಬಗ್ಗೆ ಡಿ.ರೂಪಾ ಅವರು ಭ್ರಷ್ಟಾಚಾರ ನಿಗ್ರಹ ದಳಕ್ಕೆ ನೀಡಿದ್ದ ದೂರಿನ ಕಥೆ ಏನಾಯಿತು ಎಂಬುದು ಕೂಡ ರಹಸ್ಯವಾಗಿದೆ.
ಕಾನೂನು ತಜ್ಞರು ಹೇಳುವ ಪ್ರಕಾರ, ಎಸಿಬಿಯು ಈ ವೇಳೆಗಾಗಲೇ ತನಿಖೆ ಪೂರ್ಣ ಮಾಡಿ, ವರದಿ ನೀಡಬೇಕಿತ್ತು. ಈ ಬಗ್ಗೆ ಲಲಿತಾ ಕುಮಾರಿ ವರ್ಸಸ್ ಉತ್ತರ ಪ್ರದೇಶದ ಸರಕಾರದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನಿಂದ ಕಾಲಾವಧಿ ವಿಚಾರದ ಸ್ಪಷ್ಟ ಸೂಚನೆ ಇದೆ.
ಹಾಗಾದರೆ ರೂಪಾ ಅವರು ಎಸಿಬಿಗೆ ನೀಡಿದ ದೂರಿನ ತನಿಖೆ ಎಲ್ಲಿವರೆಗೆ ಬಂತು, ರಾಜ್ಯ ಮಾನವ ಹಕ್ಕು ಆಯೋಗ ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡಿದ್ದ ದೂರಿನ ವರದಿಯಲ್ಲಿ ಏನಿದೆ ಇನ್ನಷ್ಟು ಅಸಕ್ತಿಕರ ಸಂಗತಿಗಳಿವೆ. ಮುಂದೆ ಓದಿ.
ಕೃಷ್ಣಕುಮಾರಿ ಆಣತಿ
ಮೂವತ್ತೆರಡು ಕೈದಿಗಳ ಸ್ಥಳಾಂತರ
ಎಐಡಿಎಂಕೆ ನಾಯಕಿಯಾಗಿದ್ದ ವಿ.ಕೆ.ಶಶಿಕಲಾಗೆ ರಾಜಾತಿಥ್ಯ ನೀಡುತ್ತಿದ್ದದ್ದು ಸೇರಿದಂತೆ ಪರಪ್ಪನ ಅಗ್ರಹಾರದಲ್ಲಿ ನಡೆಯುತ್ತಿದ್ದ ಅವ್ಯವಹಾರದ ಬಗ್ಗೆ ರೂಪಾ ಮೌದ್ಗಿಲ್ ಅವರಿಗೆ ಮಾಹಿತಿ ನೀಡಿದ್ದರು ಎಂಬ ಗುಮಾನಿ ಮೇಲೆ ಕೃಷ್ಣಕುಮಾರ್ ಆಣತಿಯಂತೆ, ಮೂವತ್ತೆರಡು ಮಂದಿಯನ್ನು ಮನಸೋ ಇಚ್ಛೆ ಬಡಿದು ಬಳ್ಳಾರಿ, ಬೆಳಗಾವಿ, ಮೈಸೂರು ಹೀಗೆ ನಾನಾ ಜೈಲುಗಳಿಗೆ ಸ್ಥಳಾಂತರ ಮಾಡಲಾಗಿತ್ತು ಎಂಬ ಆರೋಪ ಕೇಳಿಬಂದಿತ್ತು.

ಪುಷ್ಟಿ ನೀಡುವಂಥ ಅಂಶಗಳು
ಕೈದಿಗಳ ಮೇಲಿನ ಹಲ್ಲೆ ದೃಢ
ಈ ವಿಚಾರದಲ್ಲಿ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದ ರಾಜ್ಯ ಮಾನವ ಹಕ್ಕುಗಳ ಆಯೋಗವು ವಿಚಾರಣೆ ಪೂರ್ಣಗೊಳಿಸಿ, ವರದಿ ಸಿದ್ಧಪಡಿಸಿರುವ ಮಾಹಿತಿ ಸಿಕ್ಕಿದೆ. ಆ ಪ್ರಕಾರ, ಕೈದಿಗಳ ಮೇಲೆ ಹಲ್ಲೆ ನಡೆಸಿರುವುದನ್ನು ದೃಢಪಡಿಸಿದ್ದು, ರೂಪಾ ಅವರ ಆರೋಪಗಳಿಗೆ ಪುಷ್ಟಿ ನೀಡುವಂಥ ಅಂಶಗಳನ್ನು ಉಲ್ಲೇಖಿಸಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ನಾನಾ ಜೈಲುಗಳಿಗೆ ಸ್ಥಳಾಂತರ
ರಾಜ್ಯ ಮಾನವ ಹಕ್ಕು
ಈ ಬಗ್ಗೆ ಒನ್ ಇಂಡಿಯಾ ಕನ್ನಡಕ್ಕೆ ಪ್ರತಿಕ್ರಿಯೆ ನೀಡಿದ ರೂಪಾ ಮೌದ್ಗಿಲ್, ಕೇಂದ್ರ ಕಾರಾಗೃಹದ ಅವ್ಯವಹಾರದ ಬಗ್ಗೆ ಮಾಹಿತಿ ನೀಡಿದ್ದರು ಎಂಬ ಗುಮಾನಿ ಮೇಲೆ ಮೂವತ್ತೆರಡು ಕೈದಿಗಳ ಮೇಲೆ ಹಲ್ಲೆ ನಡೆದು, ಬಳ್ಳಾರಿ, ಬೆಳಗಾವಿ ಹಾಗೂ ಧಾರವಾಡ ಜೈಲುಗಳಿಗೆ ಸ್ಥಳಾಂತರ ಮಾಡಲಾಗಿತ್ತು ಎಂಬ ಆರೋಪವಿದ್ದದ್ದನ್ನು ಮಾನವ ಹಕ್ಕು ಆಯೋಗ ಖಾತ್ರಿ ಪಡಿಸುವ ವರದಿ ನೀಡಿದೆ ಎಂಬ ಬಗ್ಗೆ ಮಾಧ್ಯಮಗಳಿಂದ ಗೊತ್ತಾಯಿತು.
ಈ ಬಗ್ಗೆ ಇನ್ನಷ್ಟು ತನಿಖೆ ನಡೆದು ಆ ಕೈದಿಗಳಿಗೆ ನ್ಯಾಯ ಸಿಗಬೇಕು. ಈ ಪ್ರಕರಣದಲ್ಲಿ ರಾಜ್ಯ ಮಾನವ ಹಕ್ಕು ಆಯೋಗಕ್ಕೆ ನಾನು ಅಭಿನಂದನೆ ಹೇಳ್ತೀನಿ, ಧನ್ಯವಾದ ಹೇಳ್ತೀನಿ ಎಂದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಉತ್ತರಿಸಲು ನಿರಾಕರಿಸಿದ ರೂಪಾ
ಕಾಣದ ಕೈಗಳ ಅಡ್ಡಗಾಲು
ಆದರೆ, ಈ ಮಧ್ಯೆ ರೂಪಾ ಅವರನ್ನು ಭೇಟಿ ಮಾಡುವ ಅಥವಾ ಅವರ ಅಭಿಪ್ರಾಯ ಪಡೆಯುವ ಮಾಧ್ಯಮಗಳ ಪ್ರಯತ್ನಕ್ಕೆ ಕಾಣದ ಕೈಗಳು ಅಡ್ಡಿ ಮಾಡುತ್ತಿವೆ. ಈ ಬಗ್ಗೆ ರೂಪಾರನ್ನೇ ಪ್ರಶ್ನೆ ಮಾಡಿದಾಗ, ಉತ್ತರಿಸಲು ನಿರಾಕರಿಸಿದರು. ನಾನು ಸರಕಾರಿ ಉದ್ಯೋಗಿ. ನನ್ನ ಕೆಲಸ ಮಾಡಿದ್ದೀನಿ. ಅದು ನನ್ನ ಜವಾಬ್ದಾರಿ. ನೀವು ಹೇಳಿದ ವಿಚಾರದ ಬಗ್ಗೆ ಗೊತ್ತಿಲ್ಲ ಎಂದರು.

Leave a Response