Recent Posts

Monday, January 27, 2025
ಕ್ರೈಮ್ಬೆಂಗಳೂರುಸುದ್ದಿ

ನಟಿ ಹರ್ಷಿಕಾ ಪೂಣಚ್ಚ ದಂಪತಿಗಳ ಮೇಲೆ ಅನ್ಯಕೋಮಿನ ಪುಂಡರಿಂದ ಹಲ್ಲೆ…!! – ಕಹಳೆ ನ್ಯೂಸ್

ಬೆಂಗಳೂರು: ಸ್ಯಾಂಡಲ್​ವುಡ್ ನಟಿ ಹರ್ಷಿಕಾ ಪೂಣಚ್ಚ ದಂಪತಿಗಳ ಮೇಲೆ ಪುಂಡರು ಅಟ್ಟಹಾಸ ತೋರಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.ಬೆಂಗಳೂರಿನ ಫ್ರೆಜರ್ ಟೌನ್​ನ ರೆಸ್ಟೋರೆಂಟ್ ಬಳಿ ಗಲಾಟೆ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಊಟ ಮುಗಿಸಿ ವಾಪಸ್ ಬರುವ ವೇಳೆ ಹರ್ಷಿಕಾ ಪೂಣಚ್ಚ ದಂಪತಿ ಮೇಲೆ ಕೆಲವರು ಕಿರಿಕ್​ ಮಾಡಿದ್ದಾರೆ. ಭುವನ್ ಕೊರಳಿದ್ದ ಚಿನ್ನದ ಸರ ಕಿತ್ತಕೊಳ್ಳಲು ಯತ್ನಿಸಿದ್ದಾರೆಂದು ಆರೋಪಿಸಿದ್ದಾರೆ. ಕರಾಮಾ ಎಂಬ ರೆಸ್ಟೊರೆಂಟ್‌ ಬಳಿ ಅನವಶ್ಯಕವಾಗಿ ಜಗಳ ತೆಗೆದಿರುವ ಕಿಡಿಗೇಡಿಗಳು ಪುಂಡಾಟ ತೋರಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕನ್ನಡದಲ್ಲಿ ಮಾತಾಡ್ತಿದ್ದರಿಂದ ಗಲಾಟೆ ಜೋರು ಮಾಡಿದ್ದಾರೆ. ಅನ್ಯಕೋಮಿನವರಿಂದ ಈ ಗಲಾಟೆ ನಡೆದಿದ್ದು, ಕೆಟ್ಟದಾಗಿ ನಿಂದಿಸಿದ್ದಾರೆಂದು ಆರೋಪಿಸಿದ್ದಾರೆ. ಘಟನೆ ಬಗ್ಗೆ ವಿವರಿಸಿದ ನಟಿ ಹರ್ಷಿಕಾ, ನಮ್ಮೂರಲ್ಲಿ ನಮಗೆ ರಕ್ಷಣೆ ಇಲ್ವಾ ಎಂದು ಪ್ರಶ್ಮಿಸಿದ್ದಾರೆ. ದೈಹಿಕ ಹಲ್ಲೆಗೂ ಮುಂದಾದರೂ ಎಂದು ದೂರಿದ್ದಾರೆ.

ಪಾರ್ಕಿಂಗ್​ನಿಂದ ಕಾರು ತೆಗೆಯುವಾಗ ಮಾತಿಗೆ ಮಾತು ಬೆಳೆದು ಗಲಾಟೆ ನಡೆದಿದೆ. ಕಾರಿನ‌ ವಿಚಾರಕ್ಕೆ ಜಗಳ ತೆಗೆದು ಭುವನ್ ಚೈನ್ ಕಿತ್ತುಕೊಳ್ಳಲು ಮುಸ್ಲಿಂ ಯುವಕರು ಯತ್ನಿಸಿದ್ದಾರೆ. ಕನ್ನಡದಲ್ಲಿ ಮಾತನಾಡಿದಕ್ಕೆ ಭುವನ್ ಮೇಲೆ ಹಲ್ಲೆಗೂ ಯತ್ನಿಸಲಾಗಿದೆ. ಘಟನೆ ವೇಳೆ 20-30 ಜನರಿಂದ ಗ್ಯಾಂಗ್ ನಿಂದ ರಂಪಾಟ ನಡೆದಿದೆ. ಘಟನೆಯಿಂದ ಶಾಕ್ ಆಗಿರುವ ಹರ್ಷಿಕಾ ಪೂಣಚ್ಚ ದಂಪತಿಗಳು ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಘಟನೆಯ ಮಾಹಿತಿ ಶೇರ್ ಮಾಡಿದ್ದಾರೆ.