Tuesday, January 21, 2025
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಕಾವಳ ಮೂಡೂರು ಗ್ರಾಮದಲ್ಲಿ ಮತಯಾಚನೆ ಮಾಡಿದ “ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಹಾಗೂ ಜಿ.ಪಂ.ಮಾಜಿ ಸದಸ್ಯ ಎಂ.ತುAಗಪ್ಪ ಬಂಗೇರ – ಕಹಳೆ ನ್ಯೂಸ್

ಲೋಕಸಭಾ ಚುನಾವಣೆಯಲ್ಲಿ ಕ್ಯಾ.ಬ್ರಿಜೇಶ್ ಚೌಟ ಅವರನ್ನು ಬಹುಮತದಿಂದ ಗೆಲ್ಲಿಸಿಕೊಡುವಂತೆ “ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹಾಗೂ ಜಿ.ಪಂ.ಮಾಜಿ ಸದಸ್ಯ ಎಂ.ತುoಗಪ್ಪ ಬಂಗೇರ ಅವರು ಗ್ರಾಮ,ಮನೆ,ಮನ ಸಂಪರ್ಕ ಅಭಿಯಾನ” ಕಾರ್ಯಕ್ರಮದ ಮೂಲಕ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಕಾವಳಮೂಡೂರು ಗ್ರಾಮದಲ್ಲಿ ಮನೆಗಳಿಗೆ ಬೇಟಿ ನೀಡಿ ಮತಯಾಚನೆ ನಡೆಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಲೋಕಸಭಾ ಅಭ್ಯರ್ಥಿಯ ಪರಿಚಯ ಪತ್ರ,ಹಾಗೂ ನರೇಂದ್ರ ಮೋದಿಯವರ ಸರಕಾರದ ಅವಧಿಯಲ್ಲಿ ನಡೆಸಲಾದ ಯೋಜನೆಗಳ ಮಾಹಿತಿ ಕರಪತ್ರವನ್ನು ಮತದಾರರಿಗೆ ಅವರು ಜೊತೆಯಾಗಿ ನೀಡಿದರು.
ಕಾರ್ಯಕರ್ತರ ಜೊತೆ ಮಾತನಾಡಿದ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು, ಅವಶ್ಯ ಕೆಲಸ ಹೊರತುಪಡಿಸಿ, ತಮ್ಮ ಎಲ್ಲಾ ಕೆಲಸ ಕಾರ್ಯಗಳನ್ನು ಬದಿಗೊತ್ತಿ, ಮುಂದಿನ ಸೀಮಿತ ದಿನಗಳನ್ನು ಚುನಾವಣಾ ಪ್ರಚಾರಕ್ಕೆ ಕಾರ್ಯಕರ್ತರು ನಿಗದಿಗೊಳಿಸಿ, ಮತದಾರರನ್ನು ಬಿಜೆಪಿಯತ್ತ ಸೆಳೆಯಲು ಪ್ರಯತ್ನ ಮಾಡಬೇಕು ಎಂದು ತಿಳಿಸಿದರು.
ಯಾವುದೇ ಕಾರಣಕ್ಕೆ ಬಂಟ್ವಾಳದಲ್ಲಿ ಬಿಜೆಪಿಯ ಮತಗಳು ವಿಭಜನೆಯಾಗಬಾರದು, ಸುಳ್ಳು ವದಂತಿಗಳಿಗೆ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರು ಬಲಿಯಾಗಬೇಡಿ, ಬಿಜೆಪಿ ಪಕ್ಷ ಸಂಘಟಿತವಾಗಿ ಹೋರಾಟ ಮಾಡುತ್ತದೆ, ಮತ್ತೆ ಕೇಂದ್ರದಲ್ಲಿ ನರೇಂದ್ರ ಮೋದಿಯವರು ಪ್ರಧಾನಿಯಾಗುತ್ತಾರೆ, ಜಿಲ್ಲೆಯಿಂದ ಕ್ಯಾ.ಬ್ರಿಜೇಶ್ ಚೌಟ ಅವರು ಗೆಲುವು ಸಾಧಿಸುತ್ತಾರೆ.
ಆದರೆ ಕೇಂದ್ರದಲ್ಲಿ 400 ಕ್ಕೂ ಅಧಿಕ ಸ್ಥಾನವನ್ನು ಗೆಲ್ಲುವುದು ಮತ್ತು ಕ್ಯಾ.ಬ್ರಿಜೇಶ್ ಚೌಟ ಅವರ ಗೆಲುವಿನ ಅಂತರವನ್ನು ಹೆಚ್ಚಿಸುವುದು ನಮ್ಮ ಜವಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಕಾರ್ಯಕರ್ತರು ಒಂದಾಗಿ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.

ಜಿ.ಪಂ.ಮಾಜಿ ಸದಸ್ಯ ಎಂ.ತುAಗಪ್ಪ ಬಂಗೇರ ಮಾತನಾಡಿ, ಬಿಜೆಪಿ ಅವಿಭಕ್ತ ಕುಟುಂಬವಿದ್ದAತೆ, ಬಿಜೆಪಿ ಎಂಬ ಒಗ್ಗಟ್ಟಿನ ಮನೆಯನ್ನು ವಿರೋಧಿಗಳು ಜಾತಿ ಹೆಸರಿನಲ್ಲಿ ಒಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ಇವರ ಯಾವುದೇ ಆಮಿಷಕ್ಕೆ ಬಿಜೆಪಿಯ ಮತದಾದರು,ಕಾರ್ಯಕರ್ತರು ಬೆಲೆ ನೀಡಿಲ್ಲ,ಮುಂದೆಯೂ ನೀಡುವುದಿಲ್ಲ. ಜಾತಿ ವ್ಯವಸ್ಥೆಯಲ್ಲಿ ಮತಪಡೆಯುವ ಹುನ್ನಾರ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದು ಮಾರಕವಾಗಿದೆ ಎಂದು ತಿಳಿಸಿದರು.

ದೇಶಕ್ಕೆ ನರೇಂದ್ರ ಮೋದಿಯವರು ಬೇಕು, ಜನಸಾಮಾನ್ಯರಿಗೆ ಬಿಜೆಪಿ ಸರಕಾರ ಬೇಕು ಹಾಗಾಗಿ ಈ ಬಾರಿ ಮತ್ತೆ ಕೇಂದ್ರದಲ್ಲಿ ಬಿಜೆಪಿಯ ಸರಕಾರ ಬರುವುದು ನಿಶ್ಚಿತ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಕಾರಿಂಜ ದೇವಸ್ಥಾನದ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಪುಳಿಮಜಲು, ಗ್ರಾ.ಪಂ.ಅಜಿತ್ ಶೆಟ್ಟಿ ಕಾರಿಂಜ, ಉಪಾಧ್ಯಕ್ಷ ಪ್ರಶಾಂತ್ ಶೆಟ್ಟಿ ಪೆರುವಾರು, ಸದಸ್ಯರಾದ ರಾಜಗೋಪಾಲ ನಾಯಕ್, ಗಣೇಶ್ ದೇವಾಡಿಗ, ಜಯಲಕ್ಮೀ ದೇವಾಡಿಗ, ವೀಣಾ ನಾಯ್ಕ, ರೇವತಿ ಕರಂಬಾರು, ಪ್ರಮುಖರಾದ ಕುಮಾರ್ ಆಳ್ವ, ಮಾಯಿಲಪ್ಪ ಪೂಜಾರಿ, ಪ್ರಕಾಶ್ ಶೆಟ್ಟಿ, ದಿನೇಶ್ ನಾಯಕ್, ಅರುಣ ಶೆಟ್ಟಿ, ಸುರೇಶ್ ಪೂಜಾರಿ, ಮುತ್ತಣ್ದ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ನಾರಾಯಣ ಶೆಟ್ಟಿ, ಮೋಹನ್ ನಾಯ್ಕ, ರವೀಂದ್ರ ನಾಯಕ್, ತುಕಾರಾಂ ಗೌಡ,ಗಿರಿಯಪ್ಪ ಪೂಜಾರಿ, ಮಾದವ ಪೂಜಾರಿ ಮತ್ತಿತರು ಉಪಸ್ಥಿತರಿದ್ದರು