Tuesday, January 21, 2025
ದಕ್ಷಿಣ ಕನ್ನಡಸುದ್ದಿ

ರೋಟರಿ ಯುವ ನೇತೃತ್ವದಲ್ಲಿ ನಿರ್ಗತಿಕ ವ್ಯಕ್ತಿಯ ರಕ್ಷಣೆ ಪುನರ್ವಸತಿ ಕೇಂದ್ರಕ್ಕೆ ರವಾನೆ – – ಕಹಳೆ ನ್ಯೂಸ್

ಪುತ್ತೂರು, ; ಕಳೆದ ಅನೇಕ ಸಮಯಗಳಿಂದ ಸಂಪ್ಯ ಬಸ್ಸು ನಿಲ್ದಾಣದಲ್ಲಿ ಅನಾರೋಗ್ಯ ಪೀಡಿತ ಸ್ಥಿತಿಯಲ್ಲಿ ಕಂಡುಬoದ ತಿಮ್ಮಪ್ಪ ಎಂಬ ವ್ಯಕ್ತಿಯನ್ನು ಸಂಪ್ಯ ಗ್ರಾಮಾಂತರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ರಂಗ ಸೋಮಯ್ಯ ಎಂ. ವೈ ಹಾಗೂ ಎಸ್. ಐ ಜಂಬೂರಾಜ್ ಮಹಾಜನ್ ಅವರ ಸೂಚನೆಯ ಮೇರೆಗೆ ಈಗಾಗಲೇ ಪುತ್ತೂರಿನಲ್ಲಿ ಏಕಕಾಲದಲ್ಲಿ 12 ಮಂದಿ ನಿರ್ಗತಿಕರನ್ನ ಪುನರ್ವಸತಿ ಕೇಂದ್ರಕ್ಕೆ ಸೇರಿಸುವ ಮೂಲಕ ಮನೆ ಮಾತಾಗಿದ್ದ ಪುತ್ತೂರು ಉಮೇಶ್ ನಾಯಕ್ ಅವರ ನೇತೃತ್ವದಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಗೂ ರೋಟರಿ ಕ್ಲಬ್ ಪುತ್ತೂರು ಯುವ ಸಹಕಾರದೊಂದಿಗೆ ನಿರ್ಗತಿಕರ ಪುನರ್ವಸತಿ ಕೇಂದ್ರಕ್ಕೆ ಸೇರಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು


ಪುನರ್ವಸತಿ ಕೇಂದ್ರಕ್ಕೆ ಸೇರಿಸುವ ಮುನ್ನ ಸಂಪ್ಯ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಶ್ರೀಮತಿ ಆಶಾ ಅವರ ಮುತುವರ್ಜಿಯಲ್ಲಿ ಡಾ ಆಶಾ ಪುತ್ತೂರಾಯ ಅವರ ಸಹಕಾರದಲ್ಲಿ 15 ದಿನಗಳ ಕಾಲ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ನೀಡಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕಾರ್ಯಾಚರಣೆಯಲ್ಲಿ ಸರಕಾರಿ ಆಸ್ಪತ್ರೆಯ ರಕ್ಷಾ ಸಮಿತಿಯ ಸದಸ್ಯರಾದ ಆಸ್ಕರ್ ಆನಂದ್, ರೋಟರಿಯ ನಿಯೋಜಿತ ಅಸಿಸ್ಟೆಂಟ್ ಗವರ್ನರ್ ಡಾ. ಹರ್ಷ ಕುಮಾರ್ ರೈ, ಸಂಪ್ಯ ಠಾಣೆಯ ಹೆಡ್ ಕಾನ್ಸ್ಟೇಬಲ್ ಶ್ರೀಮತಿ ಆಶಾ ಹಾಗೂ ಪುತ್ತೂರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಉಮೇಶ್ ನಾಯಕ್ ಅವರು ಭಾಗಿಯಾಗಿದ್ದರು. ಕೆಯ್ಯೂರು ಬಜರಂಗದಳದ ವತಿಯಿಂದ ಆಂಬುಲೆನ್ಸ್ ಸೇವೆಯನ್ನು ಒದಗಿಸಿದ್ದರು.