Recent Posts

Friday, November 22, 2024
ದಕ್ಷಿಣ ಕನ್ನಡಬೆಳ್ತಂಗಡಿರಾಜಕೀಯಸುದ್ದಿ

ಕ್ಯಾಪ್ಟನ್ ಬ್ರಿಜೇಶ್ ಚೌಟರನ್ನು ದಾಖಲೆಯ ಮತಗಳ ಅಂತರದಿAದ ಗೆಲ್ಲಿಸೋಣ, ರಾಜ್ಯದ 28 ಕ್ಷೇತ್ರಗಳಲ್ಲೂ ಬಿಜೆಪಿ- ಜೆಡಿಎಸ್ ಗೆಲುವು, ಮೋದಿ ವಿಜಯಯಾತ್ರೆ ತಡೆಯಲು ಯಾರಿಂದಲೂ ಸಾಧ್ಯವಿಲ್ಲ : ಉಜಿರೆ ರೋಡ್ ಶೋದಲ್ಲಿ ವಿಜಯೇಂದ್ರ –ಕಹಳೆ ನ್ಯೂಸ್

ಬೆಳ್ತಂಗಡಿ:ದೇಶದ ಅಸಂಖ್ಯಾತ ಹಿಂದಗಳ ಹೃದಯ ಗೆದ್ದ ನರೇಂದ್ರ ಮೋದಿಯವರನ್ನು ಯಾವುದೇ ದುಷ್ಟ ಶಕ್ತಿಗಳು ತಡೆಯಲು ಸಾಧ್ಯವಿಲ್ಲ. ಪ್ರಜ್ಞಾವಂತ ಮತದಾರರು ಭಾರತದ ಸುರಕ್ಷೆ ಹಾಗೂ ಸರ್ವಾಂಗೀಣ ಅಭಿವೃದ್ಧಿಗಾಗಿ ಮೋದಿಯವರನ್ನು ಮತ್ತೆ ಅಧಿಕಾರಕ್ಕೆ ತರುವುದರಲ್ಲಿ ಸಂದೇಹವಿಲ್ಲ. ಕಳೆದ 10 ವರ್ಷಗಳಲ್ಲಿ ಅವರ ಆಡಳಿತ ಮತ್ತು ಅಭಿವೃದ್ಧಿಯನ್ನು ಜನ ನೋಡುತ್ತಿದ್ದಾರೆ. ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ ಕ್ಯಾಪ್ಟನ್ ಬ್ರಿಜೇಶ್ ಚೌಟರು ನಮ್ಮ ಅಭ್ಯರ್ಥಿ ಅವರನ್ನು ದಾಖಲೆ ಮತಗಳ ಅಂತರದಿAದ ಗೆಲ್ಲಿಸೋಣ.

ರಾಜ್ಯದ ಎಲ್ಲ 28 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿ ಪಕ್ಷ ಗೆಲ್ಲುವ ಮೂಲಕ ಕಾಂಗ್ರೆಸ್ ಗೆ ತಕ್ಕ ಉತ್ತರ ನೀಡಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದ್ದಾರೆ.
ಉಜಿರೆಯಲ್ಲಿ ಇಂದು ಸಂಜೆ ಬಿಜೆಪಿ ವತಿಯಿಂದ ಏರ್ಪಡಿಸಲಾದ ಬೃಹತ್ ರೋಡ್ ಶೋ ದಲ್ಲಿ ಮಾತನಾಡಿದರು. ಕಾಶ್ಮೀರದಲ್ಲಿ ಆರ್ಟಿಕಲ್ 370 ರ ಕಾಂಗ್ರೆಸ್ ತಪ್ಪು ನಿರ್ಧಾರದಿಂದ ಲಕ್ಷಾಂತರ ಯೋಧರು ಪ್ರಾಣ ಕಳೆದುಕೊಂಡರು. ಮೋದಿಯವರ ದಿಟ್ಟ ನಿರ್ಧಾರ,ಗೃಹ ಸಚಿವ ಅಮಿತ್ ಶಾ ಅವರಿಂದ ದೇಶದ ಸುರಕ್ಷೆ ಹಾಗು ಭದ್ರತೆಗಾಗಿ ಅದನ್ನು ಬುಡ ಸಹಿತ ಕೇಂದ್ರ ಸರಕಾರ ಕಿತ್ತು ಹಾಕಿದೆ. ಕಾಶ್ಮೀರದಲ್ಲಿ ಪ್ರವಾಸೋದ್ಯಮ, ನಕ್ಸಲ್ ಮತ್ತು ಉಗ್ರಗಾಮಿಗಳ ತಡೆಗೆ ದಿಟ್ಟ ನಿರ್ಧಾರದಿಂದಾಗಿ ಮೋದಿಯವರು 3ನೇ ಬಾರಿಗೆ ಪಧಾನಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.
ಕಾಂಗ್ರೆಸ್ ಪಕ್ಷಕ್ಕೆ ಅಭದ್ರತೆ ಕಾಡುತ್ತಿದೆ. ದರೋಡೆ ಮತ್ತಿತರ ಹಗರಣಗಳಿಂದ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದ ಕಾನೂನು ಸುವ್ಯವಸ್ಥೆ ಅಧೋಗತಿಗಿಳಿದಿದೆ. ವಿವಿಧ ಹಗರಣಗಳಿಂದ ಕಾಂಗ್ರೆಸ್ ಮುಖಂಡರು ಒಬ್ಬೊಬ್ಬರೇ ಜೈಲಿಗೆ ಹೋಗುತ್ತಿದ್ದಾರೆ. ಸಂವಿದಾನ ಮತ್ತು ಅಂಬೇಡ್ಕರ್ ಹೆಸರಿಗೆ ಅವಮಾನ ಮಾಡಿದ ಕಾಂಗ್ರೆಸ್ ಪಕ್ಷ ಹುಬ್ಬಳ್ಳಿಯಲ್ಲಿ ನೇಹಾ ಸಾವು ಲವ್ ಜಿಹಾದ್ ಅಲ್ಲ, ವೈಯಕ್ತಿಕ ಕಾರಣಗಳಿಂದ ಎಂದು ಅಭಿಪ್ರಾಯ ಪಡುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಸರಕಾರದಿಂದ ಹೆಣ್ಣು ಮಕ್ಕಳು ಸುರಕ್ಷಿತವಾಗಿ ಮನೆಗೆ ಹೋಗುವಂತಿಲ್ಲ. ರಾಜ್ಯದಲ್ಲಿ ಬಿಜೆಪಿ -ಜೆಡಿಎಸ್ ಮೈತ್ರಿ ಪಕ್ಷವನ್ನು ಗೆಲ್ಲಿಸುವ ಮೂಲಕ ಕಾಂಗ್ರೆಸ್ ಸರಕಾರಕ್ಕೆ ತಕ್ಕ ಉತ್ತರ ನೀಡಬೇಕಾಗಿದೆ. ದಕ್ಷಿಣ ಕನ್ನಡದಲ್ಲಿ ಕ್ಯಾ.ಬ್ರಿಜೇಶ್ ಚೌಟ ಅವರನ್ನು ಅತ್ಯಧಿಕ ಮತ ದಿಂದ ಗೆಲ್ಲಿಸುವ ಮೂಲಕ ಐತಿಹಾಸಿಕ ಗೆಲುವು ದೊರಕಿಸಿಕೊಡಬೇಕೆಂದು ಅವರು ಮನವಿ ಮಾಡಿಕೊಂಡರು.
ಬೆಳ್ತಂಗಡಿ ಕ್ಷೇತ್ರದ ಶಾಸಕ ಹರೀಶ್ ಪೂಂಜ, ರಾಜ್ಯಾಧ್ಜ್ಯಕ್ಷರನ್ನು ಕ್ಷೇತ್ರದ ಪರವಾಗಿ ಸ್ವಾಗತಿಸಿ, ಇದು ಹಿಂದುತ್ವದ ಚುನಾವಣೆ, ಶ್ರೀ ರಾಮನ ಚುನಾವಣೆ, ಮೋದಿಯವರ ಚುನಾವಣೆ. ಅಯೋಧ್ಯೆಯಲ್ಲಿ ಮೋದಿಯವರು ಶ್ರೀರಾಮನ ಪ್ರತಿಷ್ಠೆ ಮಾಡಿದಂತೆ ಮಥುರೆಯಲ್ಲಿ ಶ್ರೀಕೃಷ್ಣನ ಪ್ರತಿಷ್ಠೆ ಮಾಡುವ ಸಂಕಲ್ಪ ತೊಟ್ಟಿದ್ದಾರೆ. ಬಿಜೆಪಿಗೆ ಮತದಾನ ಮಾಡುವ ಮೂಲಕ ಆದರ್ಶ ಪುರುಷ ಶ್ರೀರಾಮನಿಗೆ ನೀಡುವ ಮತವಾಗಿ ಕೇಸರಿ ಪಡೆಯ ವಿಜಯೇಂದ್ರರಿಗೆ ರಾಜ್ಯದ ಮುಖ್ಯಮಂತ್ರಿಯಾಗಲು ಶಕ್ತಿಯಾಗಬೇಕು. ಹಿಂದೂ, ಹಿಂದುತ್ವ ಮತ್ತು ರಾಷ್ಟ್ರ ನಿರ್ಮಾಣ ಒಂದೇ ಧ್ಯೇಯ ನಮ್ಮದಾಗಿರಬೇಕು ಎಂದರು.
ಅಭೂತಪೂರ್ವ ಜಯ ದೊರಕಿಸಿ ; ಬ್ರಿಜೇಶ್ ಚೌಟ
ದ .ಕ. ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬೃಜೇಶ್ ಚೌಟ ಮಾತನಾಡಿ ಮುಂದಿನ 5 ದಿನಗಳಲ್ಲಿ ದೇಶದ ಶಕ್ತಿಯಾಗಿ, ಸ್ಪೂರ್ತಿಯಾಗಿ ಚುನಾವಣೆಯಲ್ಲಿ ಮೋದಿಯವರಿಗೆ ಶಕ್ತಿ ನೀಡಿ 400 ಸೀಟು ದೊರಕಿಸಿ ಕೊಟ್ಟು ಇದುವರೆಗೆ ನಡೆದಿಲ್ಲವೆಂಬAತೆ ಜಿಲ್ಲೆಯ ಜನ ಪಕ್ಷವನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು.
ಉಜಿರೆಯಲ್ಲಿ ಮನಸೆಳೆದ ಮೆರವಣಿಗೆ
ಉಜಿರೆಯ ಎಸ್ ಡಿ.ಎಂ. ಕಾಲೇಜು ಮುಂಭಾಗದಿAದ ಉಜಿರೆಯ ಮುಖ್ಯ ವೃತ್ತದ ಮೂಲಕ ಶ್ರೀ ಜನಾರ್ದನ ದೇವಸ್ಥಾನದ ರಥಬೀದಿಯ ವರೆಗೆ ಸಾಗಿ ಬಂದ ಬೃಹತ್ ರೋಡ್ ಶೋದಲ್ಲಿ ಬೆಳ್ತಂಗಡಿ ತಾಲೂಕಿ ನ 241 ಬೂತ್ ನಿಂದ ಬಂದ ಕಾರ್ಯಕರ್ತರು, ಸಮವಸ್ತ್ರಧಾರಿ ಮಹಿಳೆಯರು ಹಾಗು ಪುರುಷ ರು ಜಯಘೋಷ ಮಾಡಿ, ಕೇಸರಿ ಹಾಗು ಬಿಜೆಪಿ ಪಕ್ಷದ ಧ್ವಜ ಹಾರಿಸಿ ಮೆರವಣಿಗೆಯಲ್ಲಿ ಸಾಗಿ ಬಂದರು. ಸಾಮೂಹಿಕ ಚೆಂಡೆವಾದನ ವಿಶೇಷ ಆಕರ್ಷಣೆಯಾಗಿತ್ತು. ಬೃಹತ್ ರೋಡ್ ಶೋ ದಲ್ಲಿ ತೆರೆದ ವಾಹನದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ಜತೆಗೆ ವಿ.ಪ.ಶಾಸಕರಾದ ಪ್ರತಾಪಸಿಂಹ ನಾಯಕ್, ಭೋಜೇಗೌಡ, ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ, ಮಾಜಿ ಶಾಸಕ ಫ್ರಭಾಕರ ಬಂಗೇರ, ಬಿಜೆಪಿ ಜಿಲ್ಲಾ ಪ್ರಭಾರಿ ಹರಿಕೃಷ್ಣ ಬಂಟ್ವಾಳ, ಉದಯಕುಮಾರ್ ಶೆಟ್ಟಿ, ರಾಜೇಶ್, ಉಪಾಧ್ಯಕ್ಷ ಜಯಂತ ಕೋಟಿಯಾನ್ , ತಿಲಕರಾಜ್ ª

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು