ಮೂಡುಬಿದಿರೆ: ಶ್ರೀ ಮಹಾವೀರ ಕಾಲೇಜಿನಲ್ಲಿ ಭಗವಾನ್ ಶ್ರೀ ಮಹಾವೀರ ಸ್ವಾಮಿಯ 2623ನೇಯ ಜನ್ಮಕಲ್ಯಾಣೋತ್ಸವವನ್ನು ಆಚರಿಸಲಾಯಿತು.
ಮಾಜಿ ಸಚಿವ, ಶ್ರೀ ಮಹಾವೀರ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಕೆ.ಅಭಯಚಂದ್ರ ಜೈನ್ ಅವರು ಮಾತನಾಡಿ ವಿಶ್ವಕ್ಕೆ ಶಾಂತಿಯ ಸಂದೇಶ ಸಾರಿದ ಭಗವಾನ್ ಮಹಾವೀರರು ಜೈನ ತೀರ್ಥಂಕರರಲ್ಲಿ ಕೊನೆಯವರು. ಇವರು ಮಹಾರಾಜರಾಗಿದ್ದು ನಂತರ ವೈರಾಗ್ಯವನ್ನು ಹೊಂದಿ ವೈಭವದ ಜೀವನ ಬೇಡವೆಂದು ಕಾಡಿಗೆ ಹೋಗಿ ತಪಸ್ಸು ಮಾಡಿ ಮೋಕ್ಷವನ್ನು ಪಡೆದವರು ಇಂತಹ ಮಹಾನ್ ವ್ಯಕ್ತಿಯ ಜನ್ಮ ಕಲ್ಯಾಣವನ್ನು ವಿಶ್ವದಾದ್ಯಂತ ಇಂದು ಆಚರಿಸಲಾಗುತ್ತಿದ್ದು ಅದರಂತೆ ಮಹಾವೀರ ಕಾಲೇಜಿನಲ್ಲಿ ಬೆಳಿಗ್ಗೆ ಬೇಗನೇ ಮಹಾವೀರನ ಮೂರ್ತಿಗೆ ಕ್ಷೀರಾಭಿಷೇಕ ಮತ್ತು ಪೂಜಾ ವಿಧಿವಿಧಾನಗಳನ್ನು ಮಾಡಲಾಗಿದೆ ಎಂದರು. ಕಾಲೇಜಿನ ಪ್ರಾಂಶುಪಾಲ ರಾಧಾಕೃಷ್ಣ ಶೆಟ್ಟಿ, ಪ.ಪೂ.ಕಾಲೇಜಿನ ಪ್ರಾಂಶುಪಾಲ ಡಾ.ರಮೇಶ್ ಭಟ್, ಪಾಲಿಟೆಕ್ನಿಕ್ ವಿಭಾಗದ ಪ್ರಾಂಶುಪಾಲ ಜೆ.ಜೆ.ಪಿಂಟೋ, ಉಪನ್ಯಾಸಕ ರಾಮಚಂದ್ರ ಆಚಾರ್ಯ, ಕಾಲೇಜಿನ ಸಿಬಂದಿ ರಾಜೇಶ್ ಮತ್ತಿತರರು ಈ ಸಂದರ್ಭದಲ್ಲಿದ್ದರು.
ಪಟ್ಟದ ಪುರೋಹಿತರಾದ ಪಾಶ್ವ ೯ನಾಥ ಇಂದ್ರ ಪೂಜಾವಿಧಾನಗಳನ್ನು ನೆರವೇರಿಸಿದರು.