Recent Posts

Sunday, January 19, 2025
ಸುದ್ದಿ

ಸಂಗಬೆಟ್ಟು ಉಪಚುನಾವಣೆಯ ಪೂರ್ವಭಾವಿ ಸಭೆ – ಕಹಳೆ ನ್ಯೂಸ್

ಮಂಗಳೂರು: ಅ. 28ರಂದು ನಡೆಯುವ ಸಂಗಬೆಟ್ಟು ಉಪಚುನಾವಣೆಯ ಪೂರ್ವಭಾವಿಯಾಗಿ ಚುನಾವಣಾ ಅಧಿಕಾರಿ, ಸೆಕ್ಟರ್ ಅಧಿಕಾರಿ ಹಾಗೂ ಬೂತ್ ಮಟ್ಟದ ಅಧಿಕಾರಿಗಳ ಸಭೆಯು ಬಿ.ಸಿ.ರೋಡಿನ ಮಿನಿವಿಧಾನ ಸೌಧದಲ್ಲಿ ನಡೆಯಿತು.

ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ಅವರು ಸಭೆಯ ನೇತೃತ್ವವನ್ನು ವಹಿಸಿ ಮಾತನಾಡಿ, ಯಾವುದೇ ತಾಂತ್ರಿಕ ಅಡಚಣೆ ಬಾರದಂತೆ ಸೂಸೂತ್ರವಾಗಿ ಮತದಾನ ಕಾರ್ಯ ನಡೆಸುವಂತೆ ಸಲಹೆ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಮಧ್ಯೆ ಉಪಚುನಾವಣೆಯ ಪ್ರಕ್ರಿಯೆಯ ಬಗ್ಗೆ ಮಾಹಿತಿ ಕಾರ್ಯಾಗಾರ ನಡೆಯಿತು. ಈ ಸಂದರ್ಭದಲ್ಲಿ ಸೆಕ್ಟರ್ ಅಧಿಕಾರಿ ಮತ್ತಡಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.