Tuesday, January 21, 2025
ದಕ್ಷಿಣ ಕನ್ನಡಮಂಗಳೂರುಸುದ್ದಿ

ಗುರುಪುರದಲ್ಲಿ ನಡೆದ ಬೃಹತ್ ಬಿಜೆಪಿ ಸಮಾವೇಶ – ಕಹಳೆ ನ್ಯೂಸ್

ಗುರುಪುರ: ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಯಾವುದೇ ಜಾತಿ ಮೇಲಾಟದಲ್ಲಿ ತೊಡಗದೆ ಅಭಿವೃದ್ಧಿಯ ವಿಚಾರದಲ್ಲಿ ಅಚಲವಾಗಿ ಮನೆ ಮನೆ ಪ್ರಚಾರದಲ್ಲಿ ತೊಡಗಿಕೊಂಡು ಮತ್ತೆ ನರೇಂದ್ರ ಮೋದಿಯವರು ಪ್ರಧಾನಿಯಾಗಲು ಎಲ್ಲಾ ಶ್ರಮವನ್ನ ವಹಿಸುತ್ತಿದ್ದಾರೆ ಎಂದು ಶಾಸಕರಾದ ಡಾ. ಭರತ್ ಶೆಟ್ಟಿ ವೈ ನುಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಗುರುಪುರದಲ್ಲಿ ಬೃಹತ್ ಬಿಜೆಪಿ ಸಮಾವೇಶದಲ್ಲಿ ಅವರು ಮಾತನಾಡಿದರು. ವಿಶ್ವದಲ್ಲಿಯೇ ವೇಗವಾಗಿ ಆರ್ಥಿಕ ಬೆಳವಣಿಗೆ, ದೇಶಿಯವಾಗಿ ಮೂಲಸೌಕರ್ಯದ ಅಭಿವೃದ್ಧಿ ಲಕ್ಷ ಲಕ್ಷ ಶೌಚಾಲಯ ನಿರ್ಮಾಣ ಬಡವರ್ಗಕ್ಕೆ ಗ್ರಹ ನಿರ್ಮಾಣ ರೈತಾಪಿ ವರ್ಗಕ್ಕೆ ಹತ್ತು ಹಲವು ಯೋಜನೆಗಳನ್ನು ಕೊಡುವ ಮೂಲಕ ತಳಮಟ್ಟದ ಯೋಜನೆಗಳಿಗೆ ಆದ್ಯತೆ ನೀಡಿದ ಪ್ರಧಾನಿಗಳಲ್ಲಿ ನರೇಂದ್ರ ಮೋದಿಯವರೇ ಮೊದಲಿಗರು ಎಂದು ಅಭಿಪ್ರಾಯಪಟ್ಟರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾಂಗ್ರೆಸ್ ಪಕ್ಷದ ಅಪಪ್ರಚಾರವನ್ನು ಜನತೆ ತಿಳಿದುಕೊಂಡಿದ್ದಾರೆ. ಇಂದಿನ ಮಾಹಿತಿ ಯುಗದಲ್ಲಿ ಯಾವುದು ಸತ್ಯ ಎಂಬುದು ಜನತೆಗೂ ತಿಳಿದಿದೆ ಎಂದು ಮಾರ್ಮಿಕವಾಗಿ ನುಡಿದರು. ಕಾರ್ಯಕ್ರಮದಲ್ಲಿ ಪಕ್ಷದ ಪ್ರಮುಖರಾದ ರಾಜೇಶ್ ಕೊಟ್ಟಾರಿ,ವಿಕಾಸ್ ಪುತ್ತೂರು,ಶೋಧನ್ ಆದ್ಯಪಾಡಿ, ಆನಂದ್ ಪಾಂಗಾಳ, ತಮ್ಮಯ್ಯ ಪೂಜಾರಿ ಹಾಗೂ ಇತರ ಬಿಜೆಪಿ ನಾಯಕರು ಉಪಸ್ಥಿತರಿದ್ದರು