Thursday, April 17, 2025
ಕಾರ್ಕಳದಕ್ಷಿಣ ಕನ್ನಡಶಿಕ್ಷಣಸುದ್ದಿ

ಕಾರ್ಕಳದ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಪುಸ್ತಕ ಮನೆಯಲ್ಲಿ ಪುಸ್ತಕ ಸಂತೆ- ಕಹಳೆ ನ್ಯೂಸ್

ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ನಡೆಸಲ್ಪಡುತ್ತಿರುವ ಕಾರ್ಕಳದ ಪ್ರಸಿದ್ಧ ಪುಸ್ತಕ ಮಳಿಗೆಯಾದ ‘ಪುಸ್ತಕ ಮನೆ’ಯಲ್ಲಿ ಏಪ್ರಿಲ್ 23 ರಿಂದ ಏಪ್ರಿಲ್ 29 ರವರೆಗೆ ವಿಶ್ವ ಪುಸ್ತಕ ದಿನಾಚರಣೆಯ ಪ್ರಯುಕ್ತ ‘ಪುಸ್ತಕ ಸಂತೆ’ ಕಾರ್ಯಕ್ರಮವನ್ನು ಆಯೋಜಿಸಿಕೊಳ್ಳಲಾಗಿದೆ.

ದಿನಾಂಕ 23ರ ಬೆಳಿಗ್ಗೆ 11.00 ಗಂಟೆಗೆ ಖ್ಯಾತ ವಾಗ್ಮಿ, ಸಾಹಿತಿ ಪ್ರಭಾಕರ ಕೊಂಡಳ್ಳಿಯವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ಎಲ್ಲಾ ಪುಸ್ತಕಗಳಿಗೂ 10 ರಿಂದ 50 ಶೇಕಡಾ ವಿಶೇಷ ರಿಯಾಯಿತಿಯನ್ನು ನೀಡಲಾಗುವುದು. ಜೊತೆಗೆ ಪ್ರತೀ ಖರೀದಿಯೊಂದಿಗೆ ವಿಶೇಷ ಕೊಡುಗೆಗಳನ್ನು ನೀಡಲಾಗುತ್ತದೆ. ಪುಸ್ತಕ ಪ್ರೇಮಿಗಳು ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ