Friday, November 22, 2024
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ವೈಯಕ್ತಿಕ ಏನೇ ಕೆಲಸಗಳಿದ್ದರು ಎಲ್ಲವನ್ನೂ ಬದಿಗಿಟ್ಟು ದೇಶದ ಹಿತದೃಷ್ಟಿಯಿಂದ ಎ. 26 ರಂದು ಮತದಾನ ಮಾಡಿ ಅನಂತಾಡಿಯಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಶಾಸಕ ರಾಜೇಶ್ ನಾಯ್ಕ್ ಮನವಿ – ಕಹಳೆ ನ್ಯೂಸ್

ಬಂಟ್ವಾಳ: ಗ್ರಾಮಗಳ ಅಭಿವೃದ್ಧಿ, ಮಹಿಳೆಯರಿಗೆ ಗೌರವ ಸಿಗುವಂತೆ ಮಾಡುತ್ತೇನೆ, ಯುವ ಸಮುದಾಯಕ್ಕೆ ಉದ್ಯೋಗ, ಹಳ್ಳಿಗಳಲ್ಲಿ ಸ್ವಾಭಿಮಾನದ ಬದುಕು ನೀಡುವ ರೀತಿಯಲ್ಲಿ ಜಿಲ್ಲೆಯನ್ನು ಅಭೂತಪೂರ್ವವಾಗಿ ಅಭಿವೃದ್ಧಿ ಮಾಡಿ ತೋರಿಸುತ್ತೇನೆ ಎಂದು ಲೋಕಸಭಾ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಹೇಳಿದರು.
ಅವರು ಅನಂತಾಡಿಯಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು.

ದೇಶದ್ರೋಹದ ಕೆಲಸ ಮಾಡಿದವರ ಮೇಲೆ ಕನಿಷ್ಟ ಖಂಡನೆ ವ್ಯಕ್ತಪಡಿಸದ ಕಾಂಗ್ರೆಸ್ ನ ಮಾನಸಿಕತೆಯ ಬಗ್ಗೆ ಬೇಸರವಾಗುತ್ತಿದೆ, ಹಿಂದೂ ಭಾವನೆಗಳಿಗೆ ಗೌರವ ನೀಡದ ರಾಜ್ಯ ಕಾಂಗ್ರೇಸ್ ಸರಕಾರದಿಂದ ಆಗುತ್ತಿರುವ ಅನ್ಯಾಯಗಳು ಜನರಿಗೆ ಅರ್ಥವಾಗಿದೆ. ದೇಶವನ್ನು ಇಬ್ಬಾಗ ಮಾಡಿದ ಕಾಂಗ್ರೆಸ್ ಸರಕಾರದ ಆಡಳಿತಕ್ಕೆ 2024 ಚುನಾವಣೆ ಮೂಲಕ ಅಂತ್ಯವನ್ನು ಕಾಣಿಸಿಬೇಕಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು


ನಾಚಿಕೆ ಮಾನಮರ್ಯಾದೆ ಇಲ್ಲದ ಸಿದ್ದರಾಮಯ್ಯ ನೇತ್ರತ್ವದ ಕಾಂಗ್ರೆಸ್ ಸರಕಾರ ದೇಶದ್ರೋಹದ ಕೆಲಸ ಮಾಡಿದವರ ಜೊತೆ ಸೇರಿಕೊಂಡು ಚುನಾವಣೆಯನ್ನು ಎದುರಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಮಾತನಾಡಿ, ವೈಯಕ್ತಿಕ ಏನೇ ಕೆಲಸಗಳಿದ್ದರು ಎಲ್ಲವನ್ನೂ ಬದಿಗಿಟ್ಟು ದೇಶದ ಹಿತದೃಷ್ಟಿಯಿಂದ ಎ. 26 ರಂದು ಮತದಾನ ಮಾಡಿ, ಬಿಜೆಪಿಯ ಅಭ್ಯರ್ಥಿ ಬ್ರಿಜೇಶ್ ಚೌಟ ಅವರಿಗೆ ಮತನೀಡಿ ಎಂದು ಮನವಿ ಮಾಡಿದರು. ದೇಶ ಸುಭದ್ರವಾಗಿರಬೇಕು ಎಂದಾದರೆ ಮತ್ತೊಮ್ಮೆ ನರೇಂದ್ರ ಮೋದಿಯವರು ಪ್ರಧಾನಿಯಾಗಬೇಕು ಎಂದು ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಬಂಟ್ವಾಳ ಮಂಡಲದ ಅಧ್ಯಕ್ಷ ಚೆನ್ನಪ್ಪ ಆರ್ ಕೋಟ್ಯಾನ್,ಗ್ರಾ.ಪಂ.ಅಧ್ಯಕ್ಷೆ ಸುಜಾತ ಸುರೇಶ್ ಪೂಜಾರಿ ಅನಂತಾಡಿ ಮಾಜಿ ಸಚಿವ ನಾಗರಾಜ ಶೆಟ್ಟಿ, ಕಿಯೋನಿಕ್ಸ್ ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ತಾ.ಪಂ.ಮಾಜಿ ಸದಸ್ಯ ಮಾದವ ಮಾವೆ, ಚುನಾವಣಾ ಪ್ರಭಾರಿಗಳಾದ ಪೂಜಾ ಪೈ,ಜಗದೀಶ್ ಶೇಣವ, ಜಿಲ್ಲಾ ಕಾರ್ಯದರ್ಶಿ ದೇವಪ್ಪ ಪೂಜಾರಿ, ಪ್ರಮುಖರಾದ ಸಂದೇಶ್ ಶೆಟ್ಟಿ, ಸನತ್ ಕುಮಾರ್ ರೈ,ಆರವಿಂದ ರೈ ಮತ್ತಿತರರು ಉಪಸ್ಥಿತರಿದ್ದರು.