Sunday, January 19, 2025
ದಕ್ಷಿಣ ಕನ್ನಡಸುದ್ದಿ

ಕೇಪು: ಬಾವಿಯೊಳಗೆ ಆಕ್ಸಿಜನ್ ಸಿಗದೇ ರಿಂಗ್ ಕಾರ್ಮಿಕರಿಬ್ಬರು ಮೃತ್ಯು-ಕಹಳೆ ನ್ಯೂಸ್

ವಿಟ್ಲ: ಬಾವಿಗೆ ರಿಂಗ್ ಹಾಕುವ ವೇಳೆ ಆಕ್ಸಿಜನ್ ಸಿಗದೆ ಕಾರ್ಮಿಕರಿಬ್ಬರು ಮೃತಪಟ್ಟ ಘಟನೆ ಕೇಪು ಗ್ರಾಮದ ಪಡಿಬಾಗಿಲು ಎಂಬಲ್ಲಿ ನಡೆದ ಬಗ್ಗೆ ವರದಿಯಾಗಿದೆ.

ಕುಕ್ಕಿಲ ನಿವಾಸಿ ಪ್ರಸ್ತುತ ಪರ್ತಿಪ್ಪಾಡಿಯಲ್ಲಿ ವಾಸವಿರುವ ಇಬ್ಬು ಯಾನೆ ಇಬ್ರಾಹಿಂ(40 ವ.) ಮತ್ತು ಮಲಾರ್ ನಿವಾಸಿ ಆಲಿ(24 ವ.) ಮೃತದುರ್ದೈವಿಗಳು

ಜಾಹೀರಾತು
ಜಾಹೀರಾತು
ಜಾಹೀರಾತು

ಪಡಿಬಾಗಿಲಿನಲ್ಲಿ ಸುಮಾರು30 ಫೀಟ್ ಆಳದ ಬಾವಿಗೆ ರಿಂಗ್ ಹಾಕಿ ನಂತರ ಕ್ಲೀನಿಂಗ್ ಮಾಡಲೆಂದು ಓರ್ವ ಕಾರ್ಮಿಕ ಬಾವಿಗಿಳಿದಿದ್ದರು. ಕೆಳಗಿಳಿದಾತ ಮೇಲೆರಲಾರದೆ ಚದಪಡಿಸುತ್ತಿರುವುದನ್ನು ಕಂಡ ಮತ್ತೊಬ್ಬ ಕಾರ್ಮಿಕನು ಆತನನ್ನು ಮೇಲಕ್ಕೆತ್ತಲೆಂದು ಕೆಳಗಿಳಿದಿದ್ದರು. ಕೆಳಗಿಳಿದ ಇಬ್ಬರೂ ಆಕ್ಸಿಜನ್
ಸಿಗದೇ ಮೃತಪಟ್ಟಿದ್ದಾರೆ. ನಂತರ ಸ್ಥಳಿಯರ ಸಹಾಯದಿಂದ ಫ್ರೆಂಡ್ಸ್ ವಿಟ್ಲ ಮುರಳೀಧರ ರವರು ನೇತೃತ್ವದ ತಂಡ ಎರಡು ಶವಗಳನ್ನು ಮೇಲಕ್ಕೆತ್ತಿದ್ದಾರೆ. ಮೃತದೇಹಗಳನ್ನು ವಿಟ್ಲ ಸಮುದಾಯ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಇಬ್ರಾಹಿಂರವರು ಕಳೆದ ಇಪ್ಪತ್ತು ವರ್ಷದಿಂದ ರಿಂಗ್ ಹಾಕುವಲ್ಲಿ ಪರಿಣಿತರಾಗಿದ್ದರು ಎಂದು ಮಾಹಿತಿ ಲಭಿಸಿದೆ. ಘಟನಾ ಸ್ಥಳಕ್ಕೆ ವಿಟ್ಲ ಠಾಣಾ ಪೊಲೀಸರು ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು