Wednesday, January 22, 2025
ದಕ್ಷಿಣ ಕನ್ನಡಸುದ್ದಿ

ಚುನಾವಣೆಯ ಹಿನ್ನೆಲೆ ; ಚುನಾವಣೆ ಕರ್ತವ್ಯಕ್ಕೆ 60ಕ್ಕೂ ಅಧಿಕ ಸರಕಾರಿ ಬಸ್ – ಕಹಳೆ ನ್ಯೂಸ್

ಮಂಗಳೂರು : ಚುನಾವಣೆಯ ಹಿನ್ನೆಲೆಯಲ್ಲಿ ಸರಕಾರಿ ಬಸ್ ಸೇವೆಯಲ್ಲಿ ಎ.25 ಮತ್ತು 26ರಂದು ವ್ಯತ್ಯಯ ಉಂಟಾಗಲಿದ್ದು, ದಕ್ಷಿಣ ಕನ್ನಡ ಜಿಲ್ಲೆಯ 60ಕ್ಕೂ ಹೆಚ್ಚಿನ ಕೆಎಸ್ಸಾರ್ಟಿಸಿ ಬಸ್‌ಗಳು ಚುನಾವಣೆ ಕಾರ್ಯಕ್ಕೆ ತೆರಳಲಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕಳೆದ ವರ್ಷ ದ.ಕ. ಜಿಲ್ಲೆಯಿಂದ 400ಕ್ಕೂ ಅಧಿಕ ಬಸ್‌ಗಳು ಚುನಾವಣೆ ಕೆಲಸಕ್ಕೆ ತೆರಳಿದ್ದವು. ಆದರೆ ಈ ಬಾರಿ ಹೆಚ್ಚಿನ ಶಾಲಾ-ಕಾಲೇಜು ಬಸ್‌ಗಳನ್ನು ಚುನಾವಣೆ ಕಾರ್ಯಕ್ಕೆ ನಿಯೋಜಿಸಲಾಗಿದೆ. ಇದರಿಂದಾಗಿ ಕೆಎಸ್ಸಾರ್ಟಿಸಿ ಬಸ್‌ಗಳ ಬಳಕೆ ಕಡಿಮೆ. ಹಾಗಾಗಿ ಪ್ರಯಾಣಿಕರಿಗೆ ಹೆಚ್ಚಿನ ತೊಂದರೆ ಉಂಟಾಗದು ಎನ್ನುತ್ತಾರೆ ಅಧಿಕಾರಿಗಳು.

ಈ ಬಾರಿ ಮಂಗಳೂರಿನ ಯಾವುದೇ ಸಿಟಿ ಬಸ್ಸನ್ನು ಬಳಸಿಕೊಂಡಿಲ್ಲ. ಮತದಾನದ ದಿನ ಎಲ್ಲ ಸಿಟಿ ಬಸ್‌ಗಳು ಎಂದಿನAತೆ ಕಾರ್ಯಾಚರಿಸಲಿವೆ.

ದೂರದ ಊರುಗಳಿಂದ ಮತದಾನಕ್ಕೆಂದು ತಮ್ಮ ಊರುಗಳಿಗೆ ಬಂದ ಮಂದಿಗೆ ಸರಣಿ ರಜೆ ಸಿಗುತ್ತದೆ. ಕೆಲವರು ಮತ್ತೆರಡು ದಿನ ರಜಾ ಹಾಕಿ ಮೇ 1ರ ಕಾರ್ಮಿಕ ದಿನದ ರಜೆ ಕಳೆದು ತಮ್ಮ ಕೆಲಸಕ್ಕೆ ಮರಳಲು ಈಗಾಗಲೇ ಯೋಜನೆ ರೂಪಿಸಿದ್ದಾರೆ. ಇದೇ ಕಾರಣಕ್ಕೆ ಎ. 25ರಂದು ಬೆಂಗಳೂರಿನಿAದ ಮಂಗಳೂರಿಗೆ ಹೆಚ್ಚುವರಿ ಸುಮಾರು 40 ಕೆಎಸ್ಸಾರ್ಟಿಸಿ ಬಸ್‌ಗಳು ಮತ್ತು ಎ. 28ರಂದು ಮಂಗಳೂರಿನಿAದ ಬೆಂಗಳೂರಿಗೂ ಸುಮಾರು 40 ಹೆಚ್ಚುವರಿ ಬಸ್‌ಗಳು ತೆರಳಲಿವೆ.