Wednesday, January 22, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ಮೇ.01ರಂದು ಪುತ್ತೂರು ಕ್ಯಾಂಪ್ಕೋ ಚಾಕೋಲೇಟ್ ಫ್ಯಾಕ್ಟರಿ ಎಂಪ್ಲಾಯೀಸ್ ಯೂನಿಯನ್ (HMS) ವತಿಯಿಂದ ಕಾರ್ಮಿಕರ ದಿನಾಚರಣೆ – ಕಹಳೆ ನ್ಯೂಸ್

ಪುತ್ತೂರು : ಪುತ್ತೂರಿನ ಪ್ರತಿಷ್ಠಿತ ಕ್ಯಾಂಪ್ಕೋ ಚಾಕೋಲೇಟ್ ಫ್ಯಾಕ್ಟರಿಯಲ್ಲಿ ಮೇ.01ರಂದು ಪುತ್ತೂರು ಕ್ಯಾಂಪ್ಕೋ ಚಾಕೋಲೇಟ್ ಫ್ಯಾಕ್ಟರಿ ಎಂಪ್ಲಾಯೀಸ್ ಯೂನಿಯನ್(HMS) ವತಿಯಿಂದ ಕಾರ್ಮಿಕರ ದಿನಾಚರಣೆ ನಡೆಯಲಿದೆ.

ಬೆಳಗ್ಗೆ ಕ್ಯಾಂಪ್ಕೋ ಚಾಕೋಲೇಟ್ ಫ್ಯಾಕ್ಟರಿಯಲ್ಲಿ ಧ್ವಜಾರೋಹಣ ನಡೆದು, ಬಳಿಕ ಕ್ಯಾಂಪ್ಕೋದಿಂದ ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ವರೆಗೆ ಬೈಕ್ ಜಾಥಾ ನಡೆಯಲಿದ್ದು, ಬಳಿಕ ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ನಲ್ಲಿ ಪುತ್ತೂರಿನ ಕ್ಯಾಂಪ್ಕೋ ಚಾಕೋಲೇಟ್ ಫ್ಯಾಕ್ಟರಿಯ ಆಡಳಿತಾಧಿಕಾರಿ ಶ್ಯಾಮ್ ಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ರಕ್ತದಾನ ಶಿಬಿರ ನಡೆಯಲಿದೆ. ಈ ಸಂದರ್ಭದಲ್ಲಿ ಕ್ಯಾಂಪ್ಕೋ ರೋಟರಿ ಬ್ಲಡ್ ಬ್ಯಾಂಕ್ ನ ಡಾ. ರಾಮಚಂದ್ರ ಭಟ್, ಕ್ಯಾಂಪ್ಕೋ ಚಾಕೋಲೇಟ್ ಫ್ಯಾಕ್ಟರಿಯ ಎಜಿಎಂ ಶ್ಯಾಮ್ ಜಿ., ಕ್ಯಾಂಪ್ಕೋ ಚಾಕೋಲೇಟ್ ಫ್ಯಾಕ್ಟರಿಯ ಚೀಫ್ ಮ್ಯಾನೇಜರ್ ಕೇಶವ ಪ್ರಸನ್ನ ಭಾಗವಹಿಸಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

   

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ಸಂಜೆ ಕ್ಯಾಂಪ್ಕೋ ಚಾಕೋಲೇಟ್ ಫ್ಯಾಕ್ಟರಿ ಎಂಪ್ಲಾಯೀಸ್ ಯೂನಿಯನ್ ನ ಗೌರವಾಧ್ಯಕ್ಷ ಸುರೇಶ್ಚಂದ್ರ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಕ್ಯಾಂಪ್ಕೋ ಕ್ವಾಟ್ರಸ್ ನಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಕ್ಯಾಂಪ್ಕೋ ಲಿ. ನ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಲಿ, ಕ್ಯಾಂಪ್ಕೋ ಲಿ. ನ ನಿರ್ದೇಶಕರಾದ ಕೃಷ್ಣ ಪ್ರಸಾದ್ ಮಡ್ತಿಲ, ಎಂ. ಮಹೇಶ್ ಚೌಟ, ದಯಾನಂದ ಹೆಗ್ಡೆ, ರಾಘವೇಂದ್ರ ಭಟ್ ಹೆಚ್.ಎಂ., ಪದ್ಮರಾಜ್ ಪಟ್ಟಾಜೆ, ಕ್ಯಾಂಪ್ಕೋ ಚಾಕೋಲೇಟ್ ಫ್ಯಾಕ್ಟರಿ ಎಂಪ್ಲಾಯೀಸ್ ಯೂನಿಯನ್ ನ ಗೌರವ ಕಾನೂನು ಸಲಹೆಗಾರ ಮಹೇಶ್ ಕಜೆ, ಕ್ಯಾಂಪ್ಕೋ ಚಾಕೋಲೇಟ್ ಫ್ಯಾಕ್ಟರಿಯ ಚೀಫ್ ಮ್ಯಾನೇಜರ್ ಪ್ರಭಾಕರ್ ಎಸ್., ಸಿಸಿಎಫ್ ಎಂಪ್ಲಾಯೀಸ್ ರಿಕ್ರೀಯೇಶನ್ ಸೆಂಟರ್ ನ ಕಾರ್ಯದರ್ಶಿ ಸತೀಶ್ ಕುಮಾರ್ ಭಟ್, ಕ್ಯಾಂಪ್ಕೋ ಎಂಪ್ಲಾಯೀಸ್ ಯೂನಿಯನ್ ನ (HMS) ಅಧ್ಯಕ್ಷ ಸಂತೋಷ್ ಕುಮಾರ್ ಸಿ.ಎಚ್ ಹಾಗೂ ಮತ್ತಿತ್ತರರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಸಭಾ ಕಾರ್ಯಕ್ರಮದ ಬಳಿಕ ವರುಣ್ ಮತ್ತು ಬಳಗದವರಿಂದ ಹಾಗೂ ಪವನ್ ಮತ್ತು ಬಳಗದವರಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದ್ದು, ಬಳಿಕ ರಾತ್ರಿ ವಿಠಲ ನಾಯಕ್ ಮತ್ತು ಬಳಗದವರಿಂದ ಗೀತಾ ಸಾಹಿತ್ಯ ಸಂಭ್ರಮ ನಡೆಯಲಿದೆ.