Friday, April 11, 2025
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ವಿಟ್ಲ: ಬೈಕ್‌ಗೆ ಕಾರ್ ಡಿಕ್ಕಿ ;ಬೈಕ್ ಸವಾರನಿಗೆ ಗಾಯ –ಕಹಳೆ ನ್ಯೂಸ್

ವಿಟ್ಲ: ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಮೋಟಾರ್ ಸೈಕಲ್ ಪಲ್ಟಿಯಾಗಿ ಸವಾರ ಗಾಯಗೊಂಡಿರುವ ಘಟನೆ ವಿಟ್ಲದಲ್ಲಿ ನಡೆದಿದೆ.

ಬೈಕ್ ಸವಾರ ಕೊಳ್ಳಾಡು ಗ್ರಾಮದ ಮಂಕುಡೆ ಶಾಲಾ ಬಳಿಯ ಕೆ.ಹರ್ಷವರ್ಧನ ರಾವ್ (58 ವ)ರವರು ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ. ಏ.28ರಂದು ಅಡುಗೆ ಕೆಲಸದ ನಿಮಿತ್ತ ತಾನು ಮೋಟಾರ್ ಸೈಕಲ್‌ನಲ್ಲಿ ಮನೆಯಿಂದ ಕಬಕ ಕಡೆಗೆ ಹೊರಟು ಸಾಲೆತ್ತೂರು-ಕಬಕ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಕಬಕ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿರುವ ಸಮಯ ವಿಟ್ಲ ಕಸಬ ಗ್ರಾಮದ ವಿಟ್ಲ ಜಂಕ್ಷನ್ ತಲುಪಿದಾಗ ಕಲ್ಲಡ್ಕ ಕಡೆಯಿಂದ ಉಕ್ಕುಡ ಕಡೆಗೆ ಬರುತ್ತಿದ್ದ ಕಾರನ್ನು ಅದರ ಚಾಲಕ ಶೇಖ್ ಸಮೀರ್ ಎಂಬವರು ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ತನ್ನ ಮೋಟಾರ್ ಸೈಕಲ್‌ಗೆ ಅಪಘಾತಪಡಿಸಿದ ಪರಿಣಾಮ, ತಾನು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದದರಿಂದ ಎಡ ಕಾಲಿನ ಎರಡು ಬೆರಳಿಗೆ, ಎಡ ಮೊಣ ಕಾಲಿಗೆ, ಎಡ ಕೈಗೆ ಗುದ್ದಿದ ಹಾಗೂ ತರಚಿದ ರಕ್ತಗಾಯವಾಗಿದೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಗಾಯಾಳು ವಿಟ್ಲ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ. ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ