Sunday, January 19, 2025
ಕ್ರೈಮ್ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಬಂಟ್ವಾಳ: ಡ್ಯಾಂ ನ ಬಳಿಯಿಂದ ಅಕ್ರಮವಾಗಿ ಮರಳು ಮಾರಾಟಕ್ಕೆ ಯತ್ನ : ಓರ್ವನ ವಿರುದ್ದ ಪ್ರಕರಣ ದಾಖಲು –ಕಹಳೆ ನ್ಯೂಸ್

ಬಂಟ್ವಾಳ: ಡ್ಯಾಂ ನ ಬಳಿಯಿಂದ ಅಕ್ರಮವಾಗಿ ಮರಳು ಮಾರಾಟಕ್ಕೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನ ವಿರುದ್ದ ಬಂಟ್ವಾಳ ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಕ್ರಿಬೆಟ್ಟು ಎಂಬಲ್ಲಿ ನೇತ್ರಾವತಿ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಬ್ಯಾರೇಜ್ ಕಮ್ ಡ್ಯಾಂ ನ ಎದುರುಭಾಗದಿಂದ ಅಕ್ರಮವಾಗಿ ಮರಳು ತೆಗೆಯುವ ಉದ್ದೇಶದಿಂದ ನದಿಯಲ್ಲಿ ನಿಲ್ಲಿಸಲಾಗಿದ್ದ ಒಂದು ಟಿಪ್ಪರ್ ಹಾಗೂ ಹಿಟಾಚಿಯನ್ನು ಪೋಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ನದಿ ಭಾಗದಲ್ಲಿ ಸುಮಾರು 7 ಟಿಪ್ಪರ್ ಲಾರಿ ಲೋಡ್ ಗಳಷ್ಟು ಮರಳನ್ನು ರಾಶಿ ಹಾಕಿದ್ದು, ಮರಳನ್ನು ತೆಗೆಯಲು ಬಳಸಿದ ಹಾರೆ, ಫೈಬರ್ ಬುಟ್ಡಿಗಳು ಹಾಗೂ ಇತರ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದು, ಆರೋಪಿ ಅಬ್ದುಲ್ ಮುತಾಲಿಬ್ ಯಾನೆ ನಾವೂರ ಪುತ್ತಾ ಮತ್ತು ಇತರರ ವಿರುದ್ಧ ಕಲಂ 379 ಐಪಿಸಿಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು