Sunday, January 19, 2025
ಸುದ್ದಿ

​ಪ್ರಧಾನಿ ನರೇಂದ್ರ ಮೋದಿ ಭಾಷಣವನ್ನು ತಿರುಚಿ ಅಪ್ಲೋಡ್‌ – ಪ್ರಿಯಾಂಕ್‌ ಖರ್ಗೆ ವಿರುದ್ಧ ದೂರು – ಕಹಳೆ ನ್ಯೂಸ್

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಭಾಷಣವನ್ನು ತಿರುಚಿ ವಿಡಿಯೋವನ್ನು ಅಪ್ಲೋಡ್‌ ಮಾಡಿದ್ದಕ್ಕೆ ಮಾಹಿತಿ ತಂತ್ರಜ್ಞಾನ ಖಾತೆಯ ಸಚಿವ ಪ್ರಿಯಾಂಕ್‌ ಖರ್ಗೆ (Priyank Kharge) ವಿರುದ್ಧ ಬಿಜೆಪಿ ಚುನಾವಣಾ ಆಯೋಗಕ್ಕೆ (Election Commission) ದೂರು ನೀಡಿದೆ.

ಕಿಸಾನ್ ಸಮ್ಮಾನ್ ಯೋಜನೆಗೆ ಸಂಬಂಧಿಸಿದ ಹಣವನ್ನು ರಾಜ್ಯ ಸರ್ಕಾರ ಕಡಿತ ಮಾಡಿದ್ದನ್ನು ಉಲ್ಲೇಖಿಸಿ ಮೋದಿ ಭಾಷಣ ಮಾಡಿ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದ್ದರು. ಆದರೆ ಭಾಷಣದ ವಿಡಿಯೋವನ್ನ ತಮಗೆ ಬೇಕಾದಷ್ಟು ಮಾತ್ರ ಎಡಿಟ್ ಮಾಡಿ ಪ್ರಿಯಾಂಕ್‌ ಖರ್ಗೆ ಪೋಸ್ಟ್‌ ಮಾಡಿದ್ದಾರೆ ಎಂದು ಬಿಜೆಪಿ (BJP) ಆರೋಪಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರಿಯಾಂಕ್‌ ಖರ್ಗೆ ಪೋಸ್ಟ್‌ನಲ್ಲಿ ಏನಿದೆ?
“ಕನ್ನಡಿಗರು ಪಾಪ ಮಾಡಿದವರು“ ಎನ್ನುವ ಪ್ರಧಾನಿ ಮೋದಿಯವರೇ, ಕನ್ನಡಿಗರನ್ನು ಕಂಡರೆ ನಿಮಗೆ ಯಾಕಿಷ್ಟು ದ್ವೇಷ? ನಮ್ಮದೇ ದೇಶದವರನ್ನು ಅವಮಾನಿಸುವುದು ಮೋದಿಯವರ ಖಯಾಲಿಯೇ? ಹಿಂದೆ ಕೇರಳವನ್ನು ಸೊಮಾಲಿಯಕ್ಕೆ ಹೋಲಿಸಿದ್ದಿರಿ, ಈಗ ಕನ್ನಡಿಗರನ್ನು ಪಾಪಿಷ್ಠರು ಎಂದಿದ್ದೀರಿ. ಕನ್ನಡಿಗರು ಯಾವ ಪಾಪ ಮಾಡಿದ್ದರು ಸ್ವಾಮಿ? ಭ್ರಷ್ಟ ಬಿಜೆಪಿಯನ್ನು ತಿರಸ್ಕರಿಸಿದ್ದು ಪಾಪವೇ? 40% ಕಮಿಷನ್ ಸರ್ಕಾರವನ್ನು ಒದ್ದೋಡಿಸಿದ್ದು ಪಾಪವೇ? 25 ಬಿಜೆಪಿ ಸಂಸದರು ನಿಷ್ಕ್ರೀಯರಾಗಿದ್ದು ಕನ್ನಡಿಗರ ಯಾವ ಪಾಪಕ್ಕೆ ಎಂದು ಪ್ರಶ್ನಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು