Sunday, January 19, 2025
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಬಂಟ್ವಾಳ: ನಾಯಿ ಬಿಸ್ಕೆಟ್ ತಯಾರಿಸುವ ಕಂಪೆನಿಯಿAದ ದುರ್ನಾತ ಬೀರಿ: ತಾಲೂಕು ಪಂಚಾಯತ್ ಇಒ ರಾಹುಲ್ ಕಾಂಬಳೆ ನೇತೃತ್ವದ ನಿಯೋಗ ಭೇಟಿ-ಕಹಳೆ ನ್ಯೂಸ್

ಬಂಟ್ವಾಳ: ಕೊಡ್ಮಾಣ್ ಶಾಲೆಯ ಅನತಿ ದೂರದಲ್ಲಿ ಮಾಂಸದ ತ್ಯಾಜ್ಯಗಳನ್ನು ತಂದು ನಾಯಿ ಬಿಸ್ಕೆಟ್ ತಯಾರಿಸುವ ಕಂಪೆನಿಯಿAದ ದುರ್ನಾತ ಬೀರಿ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರಿಂದ ದೂರು ಕೇಳಿಬಂದ ಹಿನ್ನೆಲೆಯಲ್ಲಿ ಬಂಟ್ವಾಳ ತಾಲೂಕು ಪಂಚಾಯತ್ ಇಒ ರಾಹುಲ್ ಕಾಂಬಳೆ ನೇತೃತ್ವದ ನಿಯೋಗ ಭೇಟಿ ನೀಡಿ ಕಂಪೆನಿಯನ್ನು ಮುಚ್ಚುವಂತೆ ಆದೇಶಿಸಿದರು.

ಕಂಪೆನಿಗೆ ಹಿಂದೆ ಮೇರಮಜಲು ಪಂಚಾಯತ್ ಪರವಾನಿಗೆ ಕೊಟ್ಟಿದ್ದು, ಆದರೆ ಕಳೆದ ಕೆಲವು ವರ್ಷಗಳಿಂದ ಪರವಾನಿಗೆ ನವೀಕರಣಗೊಳ್ಳದೇ ಇದ್ದರೂ ಕಂಪೆನಿಯು ಅನಧಿಕೃತವಾಗಿ ಕಾರ್ಯಾಚರಿಸುತ್ತಿತ್ತು. ಇದರಿಂದಾಗಿ ಸುತ್ತಮುತ್ತಲಿನಲ್ಲಿ ದುರ್ನಾತ ಬೀರಿ ಅನೇಕ ದುಷ್ಪರಿಣಾಮಗಳಿಗೆ ಕಾರಣವಾಗಿತ್ತು.
ಪ್ರಾರಂಭದಲ್ಲಿ ಗ್ರಾಮ ಪಂಚಾಯತ್ ಪರವಾನಿಗೆ ಕೊಟ್ಟದ್ದು ಎಷ್ಟು ಸರಿ, ಆದರೆ ಈಗ ಇದರ ಬಗ್ಗೆ ಯಾರೂ ಕೂಡ ಗಮನಹರಿಸದಿರುವುದು ದುರಂತ. ಕಂಪೆನಿಯನ್ನು ನಿಲ್ಲಿಸುವಂತೆ ಹೇಳಿದರೂ ನಮ್ಮ ಮಾತಿಗೂ ಬೆಲೆ ಕೊಡದೆ ಮತ್ತದೇ ಕೆಲಸವನ್ನು ಮಾಡುತ್ತಿದ್ದಾರೆ. ಎಲ್ಲಿಂದಲೋ ತಂದು ಮಾಂಸದ ತ್ಯಾಜ್ಯವನ್ನು ಸುರಿಯಲು ನಮ್ಮೂರೇನು ಕಸದ ತೊಟ್ಟಿಯೇ ಎಂದು ಸ್ಥಳೀಯ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದರು.
ತಾ.ಪಂ.ಇಒ ಅವರು ಸ್ಥಳ ಪರಿಶೀಲನೆ ಮಾಡಿದ್ದು, ಆ ವೇಳೆಯೂ ದುರ್ನಾತ ಬೀರುತ್ತಿತ್ತು. ಪರವಾನಿಗೆ ಅವಧಿ ಮುಗಿದರೂ, ಅನಧಿಕೃತವಾಗಿ ಕಾರ್ಯಮುಂದುವರಿಸಿದ ಸಂಸ್ಥೆಯ ಮಾಲಕರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಘಟಕವನ್ನು ಈಗಿಂದಲೇ ಮುಚ್ಚುವಂತೆ ಕಟ್ಟುನಿಟ್ಟಿನ ಆದೇಶ ಮಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು