Saturday, November 23, 2024
ದಕ್ಷಿಣ ಕನ್ನಡಪುತ್ತೂರುಸುದ್ದಿ

“ಸೀತಾ ಪರಿತ್ಯಾಗದಂತಹ ತ್ಯಾಗ ನಮ್ಮ ಜೀವನದ ಆದರ್ಶವಾಗಬೇಕು”:ಡಾ. ಕಲ್ಲಡ್ಕ ಪ್ರಭಾಕರ ಭಟ್ – ಕಹಳೆ ನ್ಯೂಸ್

ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ನೂತನ ಸಭಾಂಗಣ “ವೈದೇಹಿ”ಯ ಉದ್ಘಾಟನೆ
ಧಾರ್ಮಿಕ ಹಾಗೂ ಸಭಾ ಕಾರ್ಯಕ್ರಮದೊಂದಿಗೆ ವೈದೇಹಿ ಸಭಾಂಗಣ ಲೋಕಾರ್ಪಣೆ

  
“ಭಾರತೀಯಮೂಲಚಿಂತನೆ,ಮೂಲಚಾರಿತ್ರ‍್ಯ,ಸAಸ್ಕೃತಿಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಜೀವನ ಪರಿಪೂರ್ಣವಾಗುವುದು.ನಮ್ಮ ಧರ್ಮ, ನಮ್ಮತನ,ಹಿಂದುತ್ವ ದೇಶದ ಭದ್ರಬುನಾದಿಗೆ ಆಧಾರ. ಇವೆಲ್ಲವನ್ನೂ ಇಂದಿನ ಪೀಳಿಗೆ ಅರ್ಥೈಸಿಕೊಳ್ಳುವ ಅಗತ್ಯತೆ ಇದೆ” ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ. ಕಲ್ಲಡ್ಕ ಪ್ರಭಾಕರ ಭಟ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ವಿವೇಕಾನಂದ ಪದವಿಪೂರ್ವಕಾಲೇಜಿನಲ್ಲಿ ನೂತನವಾಗಿ ನಿರ್ಮಾಣವಾದ ವೈದೇಹಿ ಸಭಾಂಗಣದ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು. “ಸೀತಾ ಪರಿತ್ಯಾಗದಂತಹ ತ್ಯಾಗ ನಮ್ಮ ಜೀವನದ ಆದರ್ಶವಾಗಬೇಕು.ಆ ದೃಷ್ಟಿಯಿಂದ ಸಭಾಂಗಣಕ್ಕೆ ‘ವೈದೇಹಿ ಸಭಾಂಗಣ’ ಎಂಬ ಹೆಸರನ್ನು ನೀಡಲಾಗಿದೆ. ಇನ್ನು ಮುಂದಿನ ದಿನಗಳಲ್ಲಿ ನಮ್ಮ ಯುವ ಜನಾಂಗ ರಾಮಾಯಣ, ರಾಮ ಸೀತೆಯರ ಬಗೆಗೆ ಹೆಚ್ಚಿನ ಅಧ್ಯಯನವನ್ನು ಮಾಡಲು ಇದು ಪ್ರೇರಣೆಯನ್ನು ನೀಡಲಿ ” ಎಂದು ಅವರು ಆಶಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ರಾಷ್ಟೀಯ ಸ್ವಯಂಸೇವಕ ಸಂಘ, ಕರ್ನಾಟಕ ದಕ್ಷಿಣ ಪ್ರಾಂತ ಪ್ರಚಾರ ಪ್ರಮುಖ್ ಶ್ರೀ ರಾಜೇಶ್ ಪದ್ಮಾರ್ ಮಾತನಾಡುತ್ತಾ,”ವಿವೇಕಾನಂದ ವಿದ್ಯಾವರ್ಧಕ ಸಂಘದ ಅಡಿಯಲ್ಲಿರುವ ಸಂಸ್ಥೆಗಳಿಗೆ ಸರಿಸಾಟಿಯಾದ ಸಂಸ್ಥೆಗಳು ಬೇರೆ ಇಲ್ಲ. ಉತ್ಕೃಷ್ಟ ಶಿಕ್ಷಣ ಉದ್ದೇಶವನ್ನು ಹೊಂದಿರುವ ಈ ಸಂಸ್ಥೆಯು ಮೌಲ್ಯಯುತ ಶಿಕ್ಷಣ ನೀಡುವಲ್ಲಿ ಉನ್ನತ ಸ್ಥಾನದಲ್ಲಿದೆ.ಇಂದಿನ ಯುವ ಸಮೂಹದ ಬೌದ್ಧಿಕ ಪ್ರಾಬಲ್ಯತೆ ಅತ್ಯಂತ ಹೆಚ್ಚಿದೆ. ವಿದ್ಯಾರ್ಥಿಗಳು ಅವರ ಕನಸಿನ ಬೆನ್ನತ್ತಿ ಅದನ್ನು ಸಾಕಾರಗೊಳಿಸಲು ಪ್ರಯತ್ನದೊಂದಿಗೆ ಪ್ರಬಲ ಇಚ್ಛಾಶಕ್ತಿಯನ್ನು ಹೊಂದಿರಬೇಕು.ಪ್ರಸ್ತುತ ಸ್ಪರ್ಧಾತ್ಮಕ ಜಗತ್ತಿನ ಆಗುಹೋಗುಗಳನ್ನು, ಅವಕಾಶಗಳನ್ನು ಪ್ರತಿನಿತ್ಯ ತಿಳಿದುಕೊಂಡು ತರಗತಿಗಳಿಗೆ ಮಾತ್ರ ಸೀಮಿತವಾಗಿರದೆ, ಆಧುನಿಕ ತಂತ್ರಜ್ಞಾನಗಳ ಜೊತೆಗೆ ಸನಾತನ ಸಂಸ್ಕೃತಿಯ ಉಳಿವಿನಲ್ಲಿಯೂ ಪಾತ್ರ ವಹಿಸಬೇಕು.ಭಾರತೀಯ ಸಂಸ್ಕೃತಿಯಲ್ಲಿ ನಾಮಕರಣವು ಒಂದು ವಿಶಿಷ್ಟ ಪರಂಪರೆ. ಶ್ರೇಷ್ಠತೆ ಹಾಗೂ ಶಕ್ತಿಯ ಸಾಕಾರಮೂರ್ತಿ ಎನಿಸಿಕೊಂಡ ಶ್ರೀರಾಮನ ಸಹಧರ್ಮಿಣಿಯ ಹೆಸರಾದ ವೈದೇಹಿ ಎನ್ನುವ ನಾಮವು ಸಭಾಂಗಣಕ್ಕೆ ಅತ್ಯಂತ ಸೂಕ್ತವಾದುದು” ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದಲ್ಲಿ, ಸಭಾಂಗಣದ ಕಾಮಗಾರಿಯನ್ನು ಕ್ಲಪ್ತ ಸಮಯದಲ್ಲಿ ನೆರವೇರಿಸಿಕೊಟ್ಟ ಶ್ರೀ ಗೋಪಾಲ, ಶ್ರೀಪ್ರೀತೇಶ್ ಹಾಗೂ ಧನಸಹಾಯವನ್ನಿತ್ತ ಹಿರಿಯ ವಿದ್ಯಾರ್ಥಿ ಪ್ರತಿನಿಧಿಗಳನ್ನು ಅಭಿನಂದಿಸಲಾಯಿತು.

ವೇದಿಕೆಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀ ರವೀಂದ್ರ ಪಿ., ಸಂಚಾಲಕರಾದ ಶ್ರೀ ಗೋಪಾಲಕೃಷ್ಣ ಭಟ್, ವಿವೇಕಾನಂದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷರಾದ ಶ್ರೀ ಸತೀಶ್ ರಾವ್, ಕಾಲೇಜು ಪ್ರಾಂಶುಪಾಲರಾದ ಶ್ರೀ ಮಹೇಶ್ ನಿಟಿಲಾಪುರ, ಉಪಪ್ರಾಂಶುಪಾಲರಾದ ಶ್ರೀ ದೇವಿಚರಣ್ ರೈ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ವಿವೇಕಾನಂದ ವಿದ್ಯಾಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯರು, ಮುಖ್ಯಸ್ಥರು, ಸಿಬ್ಬಂದಿಗಳು, ಕಾಲೇಜಿನ ಆಡಳಿತ ಮಂಡಳಿ ಸದಸ್ಯರು, ಪೋಷಕರು, ಉಪನ್ಯಾಸಕ ಉಪನ್ಯಾಸಕೇತರ ವೃಂದದವರುಹಾಗೂ ವಿದ್ಯಾರ್ಥಿಗಳು ಭಾಗಿಯಾದರು. ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.ವಿವೇಕಾನಂದ ಪದವಿಪೂರ್ವ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀ ರವೀಂದ್ರ ಪಿ. ಪ್ರಾಸ್ತಾವಿಕ ನುಡಿಗಳೊಂದಿಗೆಸ್ವಾಗತಿಸಿ, ಸಂಚಾಲಕರಾದ ಶ್ರೀ ಗೋಪಾಲಕೃಷ್ಣ ಭಟ್ ವಂದಿಸಿದರು. ಕಾರ್ಯಕ್ರಮವನ್ನು ವಾಣಿಜ್ಯ ವಿಭಾಗದ ಉಪನ್ಯಾಸಕಿ ಶ್ರೀಮತಿ ಭಾಗ್ಯಶ್ರೀ ನಿರೂಪಿಸಿದರು.
ಗಣಪತಿ ಹೋಮ ಹಾಗೂ ರಾಮನಾಮ ತಾರಕ ಜಪ
ಸಭಾಂಗಣದ ಉದ್ಘಾಟನೆಯ ಹಿನ್ನಲೆಯಲ್ಲಿ ವೇದಮೂರ್ತಿ ಕಶೆಕೋಡಿ ಸೂರ್ಯನಾರಾಯಣ ಭಟ್ ಬಳಗದವರಿಂದ ಗಣಪತಿ ಹೋಮ ನೆರವೇರಿತು. ಕಾರ್ಯಕ್ರಮದ ಅಂತ್ಯದಲ್ಲಿ ನೆರೆದ 600 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಸಾಮೂಹಿಕ ರಾಮತಾರಕ ಮಂತ್ರಪಠಿಸಿದರು.