ಮೂಡುಬಿದಿರೆ: ವಿವಾಹಿತ ಮಹಿಳೆಯೊಬ್ಬರು ತನ್ನ ಇಬ್ಬರು ಮಕ್ಕಳೊಂದಿಗೆ ನಾಪತ್ತೆಯಾದ ಬಗ್ಗೆ ಪ್ರಕರಣ ದಾಖಲಾಗಿದೆ. ಮಾರ್ಪಾಡಿ ಗ್ರಾಮದ ಪೊನ್ನೆಚಾರಿ ರಸ್ತೆಯಲ್ಲಿರುವ ವಿಶ್ವಾಸ್ ತ್ರಿಭುವನ್ ಅಪರ‍್ಟ್ಮೆಂಟ್ನಲ್ಲಿ ವಾಸವಿದ್ದ ಭವ್ಯಾಮತ್ತು ಇವರ ಮಕ್ಕಳಾದ 5 ವರ್ಷ ಪ್ರಾಯದ ರೇವತಿ ಮತ್ತು 3 ವರ್ಷ ಪ್ರಾಯದ ಜ್ಯೋತಿ ನಾಪತ್ತೆಯಾಗಿರುವ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಕ್ಟೋಬರ್ 20 ರಂದು ಭವ್ಯಾ ಆಕೆಯ ಮನೆಯಿಂದ ತನ್ನಿಬ್ಬರು ಮಕ್ಕಳೊಂದಿಗೆ ಕಾಸರಗೋಡಿನಲ್ಲಿರುವ ತನ್ನ ತವರು ಮನೆಗೆಂದು ಬೆಳಗ್ಗೆ 6 ಗಂಟೆಗೆ ಹೊರಟಿದ್ದು, ತವರು ಮನೆಗೆ ಹೋಗದೆ ಕಾಣೆಯಾಗಿದ್ದಾರೆ ಎಂದು ಆಕೆಯ ಪತಿ ವಿನೋದ್ ಸಹಾನಿ ಪೊಲೀಸರಿಗೆ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ.